Advertisement

ವನಿತಾ ಏಷ್ಯಾ ಕಪ್‌ : ಥಾಯ್ಲೆಂಡ್ 37 ಕ್ಕೆ ಆಲೌಟ್ ; ಭಾರತಕ್ಕೆ ಅಮೋಘ ಜಯ

03:53 PM Oct 10, 2022 | Team Udayavani |

ಸಿಲ್ಹೆಟ್ (ಬಾಂಗ್ಲಾದೇಶ) : ಇಲ್ಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿಸೋಮವಾರ ನಡೆದ ಟಿ 20 ವನಿತಾ ಏಷ್ಯಾ ಕಪ್‌ ಪಂದ್ಯದಲ್ಲಿ ಭಾರತ ತಂಡ ಅಮೋಘ ಬೌಲಿಂಗ್ ದಾಳಿ ನಡೆಸಿ ಥಾಯ್ಲೆಂಡ್ ಅನ್ನು 15.1 ಓವರ್‌ಗಳಲ್ಲಿ ಕೇವಲ 37 ರನ್‌ಗಳಿಗೆ ಆಲೌಟ್ ಮಾಡಿ ಭರ್ಜರಿ ಗೆಲುವು ದಾಖಲಿಸಿದೆ.

Advertisement

ವಿಶ್ವದರ್ಜೆಯ ಭಾರತೀಯ ಬೌಲಿಂಗ್ ನಲ್ಲಿ ಸ್ನೇಹ ರಾಣಾ ಅವರು ಮೂರು ವಿಕೆಟ್‌ಗಳ ಸಾಧನೆ ಮಾಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ರಾಜೇಶ್ವರಿ ಗಾಯಕ್ವಾಡ್ ಮತ್ತು ದೀಪ್ತಿ ಶರ್ಮಾ ತಲಾ ಎರಡು ವಿಕೆಟ್ ಕಬಳಿಸಿ ಥಾಯ್ಲೆಂಡ್ ತಂಡ 37 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು.ಥಾಯ್ಲೆಂಡ್ ತಂಡದಲ್ಲಿ ನನ್ನಪತ್ ಕೊಂಚರೊಯೆಂಕಾಯ್ (12) ಗರಿಷ್ಠ ರನ್ ಗಳಿಸಿದರು.

ಇದನ್ನೂ ಓದಿ : ಆಸ್ಟ್ರೇಲಿಯಾಕ್ಕೆ ನಟಿ ಊರ್ವಶಿ ರೌಟೇಲಾ; ಮತ್ತೆ ಟ್ರೋಲ್ ಆದ ರಿಷಭ್ ಪಂತ್ !

ಸಾಮಾನ್ಯ ಗುರಿ ಬೆನ್ನಟ್ಟಿದ ಭಾರತದ ವನಿತೆಯರು ಕೇವಲ 6 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿ ಅಮೋಘ ಗೆಲುವು ಸಾಧಿಸಿದರು.

ಪಾಕಿಸ್ಥಾನವನ್ನು ಸೋಲಿಸಿದ್ದ ಥಾಯ್ಲೆಂಡ್ ಕಳೆದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಅಗ್ರಸ್ಥಾನದಲ್ಲಿದೆ.ಪಾಕಿಸ್ಥಾನ ಭಾರತಕ್ಕೆ ಸೋಲಿನ ಶಾಕ್ ನೀಡಿತ್ತು.

Advertisement

ಭಾರತ ತಂಡದ ನಾಯಕಿ, ಆರಂಭಿಕ ಆಟಗಾರ್ತಿ ಮತ್ತು ಸ್ಮೃತಿ ಮಂಧಾನ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನು ಪೂರೈಸಿದ ಎರಡನೇ ಭಾರತೀಯ ಆಟಗಾರ್ತಿ ಎನಿಸಿಕೊಂಡರು. ಹರ್ಮನ್‌ಪ್ರೀತ್ ಕೌರ್ ಅವರು 100ಕ್ಕಿಂತ ಹೆಚ್ಚಿನ ಟಿ20 ಪಂದ್ಯಗಳನ್ನು ಆಡಿದ ಏಕೈಕ ಭಾರತದ ಆಟಗಾರ್ತಿ ಎನಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next