Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತ ಎರಡೇ ವಿಕೆಟಿಗೆ 167 ರನ್ ಪೇರಿಸಿತು. ಜವಾಬಿತ್ತ ವೆಸ್ಟ್ ಇಂಡೀಸ್ 4 ವಿಕೆಟಿಗೆ 111 ರನ್ ಮಾಡಿ ಶರಣಾಯಿತು. ಇದು ಭಾರತಕ್ಕೆ ಒಲಿದ ಸತತ 2ನೇ ಜಯವಾದರೆ, ವಿಂಡೀಸಿಗೆ ಎದುರಾದ ಸತತ 2ನೇ ಸೋಲು.
ಮುಂದಿನದು ಸ್ಮತಿ ಮಂಧನಾ- ಹರ್ಮನ್‌ಪ್ರೀತ್ ಕೌರ್ ಜೋಡಿಯ ಅಜೇಯ ಬ್ಯಾಟಿಂಗ್. 11.4 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಇವರು ಮುರಿಯದ 3ನೇ ವಿಕೆಟಿಗೆ 115 ರನ್ ಪೇರಿಸಿದರು. ಮಂಧನಾ ಸರ್ವಾ ಧಿಕ 74 ರನ್ ಹೊಡೆದರು. 51 ಎಸೆತಗಳ ಈ ಆಕರ್ಷಕ ಆಟದಲ್ಲಿ 10 ಬೌಂಡರಿ ಹಾಗೂ ಇನ್ನಿಂಗ್ಸ್‌ನ
ಏಕೈಕ ಸಿಕ್ಸರ್ ಒಳಗೊಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ತಂಡವನ್ನು ಮುನ್ನಡೆಸಿದ್ದ ಮಂಧನಾ ಕೇವಲ 7 ರನ್ನಿಗೆ ಔಟಾಗಿದ್ದರು.
Related Articles
Advertisement
ವಿಂಡೀಸ್ ರಕ್ಷಣಾತ್ಮಕ ಆಟಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ 168 ರನ್ ಬೆನ್ನಟ್ಟುವ ಸ್ಥಿತಿ ಯಲ್ಲಿರಲಿಲ್ಲ. ಕೆರಿಬಿಯನ್ ವನಿತೆ ಯರು ರನ್ ಚೇಸಿಂಗ್ ಬದಲು ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಇತ್ತ ಭಾರತ ಕೂಡ ಬಿಗಿಯಾದ ಬೌಲಿಂಗ್ ಸಂಘಟಿಸಿತು. ದೀಪ್ತಿ ಶರ್ಮ 2 ವಿಕೆಟ್ ಉಡಾಯಿಸಿ ಹೆಚ್ಚಿನ ಯಶಸ್ಸು ಪಡೆದರು. ರಾಧಾ ಯಾದವ್ ಮತ್ತು ರಾಜೇಶ್ವರಿ ಗಾಯಕ್ವಾಡ್ 4 ಓವರ್‌ಗಳಲ್ಲಿ ಕ್ರಮವಾಗಿ 10 ಹಾಗೂ 16 ರನ್ ನೀಡಿ ಒಂದು ವಿಕೆಟ್ ಕೆಡವಿದರು. ಶಿಖಾ ಪಾಂಡೆ ವಿಕೆಟ್‌ಲೆಸ್ ಎನಿಸಿದರೂ 4 ಓವರ್‌ಗಳ ಕೋಟಾದಲ್ಲಿ ನೀಡಿದ್ದು 18 ರನ್ ಮಾತ್ರ. ಶನಿವಾರ ಭಾರತ-ದಕ್ಷಿಣ ಆಫ್ರಿಕಾ ದ್ವಿತೀಯ ಸುತ್ತಿನಲ್ಲಿ ಸೆಣಸಲಿವೆ. ಇದಕ್ಕೂ ಮುನ್ನ ಬುಧವಾರ ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಮುಖಾಮುಖಿ ಆಗಲಿವೆ. ಇಲ್ಲಿ ವಿಂಡೀಸ್ ಗೆದ್ದರಷ್ಟೇ ಸರಣಿ ಜೀವಂತವಾಗಿ ಉಳಿಯಲಿದೆ. ಸೋತರೆ ಕೆರಿಬಿಯನ್ ತಂಡ ಹೊರಬೀಳಲಿದ್ದು, ಭಾರತ-ದಕ್ಷಿಣ ಆಫ್ರಿಕಾ ಫೈನಲ್‌ಗೆ ಸಜ್ಜಾಗಲಿವೆ. ಸಂಕ್ಷಿಪ್ತ ಸ್ಕೋರ್: ಭಾರತ-2 ವಿಕೆಟಿಗೆ 167 (ಮಂಧನಾ ಔಟಾಗದೆ 74, ಕೌರ್ ಔಟಾಗದೆ 56, ಯಾಸ್ತಿಕಾ 18, ಹಲೀìನ್ 12, ಕರಿಷ್ಮಾ ರಾಮರಾಕ್ 12ಕ್ಕೆ 1, ಶಾನಿಕಾ ಬ್ರೂಸ್ 25ಕ್ಕೆ 1). ವೆಸ್ಟ್ ಇಂಡೀಸ್-4 ವಿಕೆಟಿಗೆ 111 (ಶಿಮೇನ್ ಕ್ಯಾಂಬೆಲ್ 47, ಹ್ಯಾಲಿ ಮ್ಯಾಥ್ಯೂಸ್ ಔಟಾಗದೆ 34, ದೀಪ್ತಿ 29ಕ್ಕೆ 2, ರಾಧಾ 10ಕ್ಕೆ 1, ರಾಜೇಶ್ವರಿ 16ಕ್ಕೆ 1).