Advertisement

ಮಹಿಳೆಯರು ಬರೆದಿರುವುದನ್ನು ಸ್ತ್ರೀಯರೇ ವಿಮರ್ಶಿಸಲಿ

07:40 AM Mar 11, 2019 | Team Udayavani |

ತುಮಕೂರು: ಮಹಿಳೆಯರು ಸಂಘಟಿತರಾಗಿ ಬರೆಯಬೇಕು. ನಮಗೆ ನಾವೇ ವಿಮರ್ಶೆ ಮಾಡಿಕೊಳ್ಳುವಂಥ ವಾತಾವರಣ ಸೃಷ್ಟಿಯಾಗಬೇಕು. ಇದುವರೆಗೆ ಬಂದ ಪುರುಷ ಬರಹದಲ್ಲಿ ಮಹಿಳೆಯರ ಚಿತ್ರಗಳು ಇಲ್ಲ. ಹೀಗಾಗಿ ಪುರುಷರನ್ನು ದೂರುವ ಬದಲು ನಾವು ಸಶಕ್ತ ಬರಹ ಮಾಡಬೇಕು ಎಂದು ಕಾದಂಬರಿಗಾರ್ತಿ ಸಾಯಿಸುತೆ ತಿಳಿಸಿದರು.

Advertisement

ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕ ಲೇಖಕಿಯರ ಸಂಘ ಮತ್ತು ಜನಮುಖೀ ಸಾಹಿತ್ಯ ಸಂಘಟನೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಲೇಖಕಿಯರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಾಹಿತ್ಯವನ್ನು ಪುರುಷರು ವಿಮರ್ಶಿಸುವುದರಿಂದ ಅದಕ್ಕೆ ಮಾನ್ಯತೆ ದೊರೆಯುತ್ತಿಲ್ಲ. ಹೀಗಾಗಿ ಮಹಿಳಾ ವಿಮರ್ಶಕರು ಹುಟ್ಟಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ತುಮಕೂರನ್ನು ಮರೆಯಲ್ಲ: ಸಾಹಿತ್ಯ ಕ್ಷೇತ್ರದಲ್ಲಿ ನನಗೆ ಹೆಸರು ತಂದುಕೊಟ್ಟ ಊರು ತುಮಕೂರು. ಇಲ್ಲಿ ನಾನು 125 ಕಾದಂಬರಿಗಳನ್ನು ಬರೆಯಲು ಸಾಧ್ಯವಾಯಿತು. ಹೀಗಾಗಿ ತುಮಕೂರನ್ನು ಎಂದಿಗೂ ಮರೆಯಲು ಆಗುವುದಿಲ್ಲ ಎಂದು ಹೇಳಿದರು. ತುಮಕೂರು ಜಿಲ್ಲೆ ನನಗೆ ತುಂಬ ಇಷ್ಟವಾದ ಜಿಲ್ಲೆ. ಹಲವು ಕಾದಂಬರಿಗಳು ಮತ್ತು ಹಲವು ಪಾತ್ರಗಳನ್ನು ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿದೆ. ನನ್ನ ಕಾದಂಬರಿಗೆ ನೆಲೆಯನ್ನು ಒದಗಿಸಿಕೊಟ್ಟ ಜಿಲ್ಲೆ ಇದು ಎಂದು ನುಡಿದರು.

ಮನಸ್ಸಿಗೆ ತಟ್ಟುವಂತಹ ಸಾಹಿತ್ಯ: ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಸಾಯಿಸುತೆಯವರು ಜನಸಾಮಾನ್ಯರ ಮನಸ್ಸಿಗೆ ತಟ್ಟುವಂತಹ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು. ವೃತ್ತಿಪರ ತರಬೇತಿ ಪಡೆದ ಲೇಖಕಿ-ಲೇಖಕರು ಅಭಿವೃದ್ಧಿ- ಪ್ರತಿಫ‌ಲ ನಿರೀಕ್ಷಿಸುತ್ತಾರೆ. ಆದರೆ, ನಾವು ಕೇವಲ ಕಥೆ ಮುಖ್ಯ ಎಂದು ತಿಳಿಯುತ್ತೇವೆ. ಅವರು ಕೌಟುಂಬಿಕ ವ್ಯವಸ್ಥೆಯೊಳಗೆ ಅಶಾಂತಿ ಉಂಟಾಗುತ್ತಿದೆ.

ಇದರ ನಿವಾರಣೆಯಾಗಬೇಕಾದರೆ ಗಂಡು ಮಕ್ಕಳಿಗೂ ಅಡುಗೆ ಮಾಡುವುದನ್ನು ಕಲಿಸಬೇಕು ಎಂದು ಬಯಸುತ್ತಾರೆ ಎಂದರು. ರಾಜ್ಯದಲ್ಲಿ ವೈದ್ಯಕೀಯ ಸಾಹಿತಿಗಳೇ ಇಲ್ಲ. ನಾನು ಬರೆಯುವ ಕಾಲದಲ್ಲಿ ಒಂದಿಬ್ಬರು ಲೇಖಕಿಯರಾದರೂ ಇದ್ದರು. ಈಗ ಇಲ್ಲ. ತುಮಕೂರು ಜಿಲ್ಲೆಯಲ್ಲಿ ಮಹಿಳಾ ಲೇಖಕಿಯರು ಇದ್ದಾರೆ ಎಂದು ಹೇಳಿದರು.

Advertisement

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಬಸವರಾಜು, ಲೇಖಕಿಯರ ಸಂಘ ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು. ಜನಮುಖೀ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕಿ ಶೈಲಾ ನಾಗರಾಜ್‌ ಆಶಯ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಹಾಗೂ ವರದಕ್ಷಿಣೆ ವಿರೋಧಿ ವೇದಿಕೆಯ ಮಾಜಿ ಅಧ್ಯಕ್ಷೆ ಜೀವರತ್ನ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಸುಗುಣಾದೇವಿ ಉಪಸ್ಥಿತರಿದ್ದರು. ಕಾವ್ಯಾ, ಪಾರ್ವತಮ್ಮ ರಾಜ್‌ಕುಮಾರ್‌, ಗಂಗಲಕ್ಷ್ಮೀ, ಡಾ.ಅರುಂಧತಿ, ಲೇಖಕಿ ಸುನಂದಮ್ಮ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next