Advertisement
ಸ್ತ್ರೀ ಸಹನೆ, ಮಮತೆ, ಕರುಣೆ, ವಾತ್ಸಲ್ಯ, ಆರೈಕೆ, ತ್ಯಾಗ, ಸತ್ಕಾರ, ತಾಳ್ಮೆ, ಪ್ರೀತಿ ಮತ್ತು ಸಾಂತ್ವನ ಹುಟ್ಟಿನ ಜತೆಗೆ ಮೇಲೈಸಿಕೊಂಡು ಬರುವವಳು.
Related Articles
Advertisement
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೇ ಸಾಕೆ
ಸ್ತ್ರೀ ಅಂದರೆ ಅಷ್ಟೇ ಸಾಕೆ? ಹೆಣ್ಣು ಗಂಡಸಿನ ಸುತ್ತ ಜೀವಿಸುತ್ತಾಳೆ. ಅಮ್ಮನಾಗಿ, ಮಗಳಾಗಿ, ಅಕ್ಕನಾಗಿ, ತಂಗಿಯಾಗಿ, ಸ್ನೇಹಿತೆಯಾಗಿ, ಸ್ವೋದ್ಯೋಗಿಯಾಗಿ ಮನ-ಮನೆಗಳಲ್ಲಿ ದೀಪ ಹಚ್ಚಿ, ಹಸಿವಿಗೆ ಅನ್ನ ಉಣಿಸಿ ಜೀವ ತುಂಬುತ್ತಾಳೆ. ಆದರೂ ಅವಳಿಗೆ ಅತ್ಯಾಚಾರಗಳಂತಹ ಶೋಷಣೆ, ದೌರ್ಜನ್ಯ ಮತ್ತು ದಬ್ಟಾಳಿಕೆ ತಪ್ಪಿದ್ದಲ್ಲ! ವರ್ಷದಿಂದ ವರ್ಷಕ್ಕೆ ಮಹಿಳೆಯರ ದೌರ್ಜನ್ಯ ಹೆಚ್ಚಾಗುತ್ತಿರುವುದು ವಿಷಾದನೀಯ. ಹೆಣ್ಣಿನ ಸಬಲೀಕರಣವಾಗಬೇಕು, ಗೌರವ ಸಿಗಬೇಕು ಮತ್ತು ಸ್ಥಾನ ಮಾನಗಳು ಸಿಗಬೇಕು. ಹೆಣ್ಣು ಅಡಿಗೆ ಮನೆಗೆ ಅಷ್ಟೇ ಸೀಮಿತವಾಗಿಲ್ಲ.
ಅವಳು ಗಂಡಸಿನ ಸಮಾನವಾಗಿ ಸ್ವಾತಂತ್ರಳಾಗಿ ಹೋರಾಡುವ ಹಕ್ಕು ಸಿಗಬೇಕು. ಬರೀ ಹೆಸರಿಗಷ್ಟೇ ಹೆಣ್ಣಿನ ಸಬಲೀಕರಣವಾದರೆ ಸಾಲದು ಜತೆಗೆ ಶೋಷಣೆ, ದೌರ್ಜನ್ಯ ಅತ್ಯಾಚಾರಗಳು ಕ್ಷೀಣಿಸಬೇಕು. ಕಾಮುಕ ಕಣ್ಣುಗಳಿಂದ ನೋಡುವ ವಿಕೃತ ಗಂಡಸಿನ ಕುಲಕ್ಕೆ ಅರ್ಥವಾಗಬೇಕು. ಹೆತ್ತ ತಾಯಿ ಹೆಣ್ಣು, ಜೀವ ಕೊಟ್ಟು ಹಾಲು ಉಣಿಸಿದವಳು ಹೆಣ್ಣು ಅವಳನ್ನು ಗೌರವದಿಂದ ಕಂಡರೆ ದೇವತೆಗಳ ಮನಸ್ಸನ್ನು ಪ್ರಸನ್ನಗೊಳಿಸಿದಂತೆ.
ಹೆಣ್ಣೆಂದರೆ ಅವಳೆದೆಯ ನೋವ ಬಚ್ಚಿಟ್ಟು ನಗುವ ಒಡವೆಯ ಧರಿಸಿ ಸುತ್ತ ಇರುವವರ ನಗಿಸುವಳು! ಅವಳನ್ನು ಗೌರವಿಸಿ ಅರ್ಥ ಮಾಡಿಕೊಳ್ಳುವ ಬಯಕೆ ಅಷ್ಟೇ ಬಯಸುವಳು ಬೇರೇನೂ ಬಯಸದವಳು ಹೆಣ್ಣು.
ಉಸಿರು ಕೊಟ್ಟು ಜೀವ ಕೊಡುವ ಅಮೃತಬಳ್ಳಿ ಹೆಣ್ಣು. ಹೆಣ್ಣನ್ನು ಗೌರವಿಸಿ ನಿಮ್ಮ ಮನೆ ಮಗಳಂತೆ ಅವಳ ರಕ್ಷಣೆಯ ಹೊಣೆ ಹೊತ್ತು ಕಾಪಾಡಿ ಎಂದಷ್ಟೇ ಬೇಡಿಕೊಳ್ಳುವಳು ಹೆಣ್ಣು.
-ವಾಣಿ
ಮೈಸೂರು