Advertisement

10 ಮಕ್ಕಳಿಗೆ ಜನ್ಮ ಸುದ್ದಿ ನಿಜವೇ?

11:58 PM Jun 10, 2021 | Suhan S |

ಪ್ರಿಟೋರಿಯಾ: .ಆಫ್ರಿಕಾದಲ್ಲಿ 37 ವರ್ಷದ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಬುಧವಾರ ವೈರಲ್ ಆಗಿತ್ತು. ಆದರೆ, ಅದು ಸತ್ಯವೋ, ಸುಳ್ಳೋ ಎಂಬ ಪ್ರಶ್ನೆ ಈಗ ಎದ್ದಿದೆ. ಏಕೆಂದರೆ, ದಕ್ಷಿಣ ಆಫ್ರಿಕಾದ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಯಲ್ಲಿ ಇಂಥದ್ದೊಂದು ಘಟನೆ ನಡೆದಿರುವ ವರದಿ ಲಭ್ಯವಾಗಿಲ್ಲ ಮತ್ತು 10 ಮಕ್ಕಳಿಗೆ ಮಹಿಳೆ ಜನ್ಮ ನೀಡಿದ ವೈದ್ಯಕೀಯ ದಾಖಲೆಗಳು ಎಲ್ಲೂ ಸಿಗುತ್ತಿಲ್ಲ ಎಂದು ಇಲ್ಲಿನ ಸರಕಾರ ಹೇಳಿದೆ. ಪ್ರಿಟೋರಿಯಾದ ಆಸ್ಪತ್ರೆಯಲ್ಲಿ ಗೋಸಿಯಾಮ್ ಸಿತೋಲೆ ಎಂಬಾಕೆ 10 ಶಿಶುಗಳಿಗೆ ಜನ್ಮ ನೀಡಿದ್ದಾಗಿ ಫೋಟೋ ಸಮೇತ ಸುದ್ದಿಯೊಂದು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next