ಆಂಧ್ರಪ್ರದೇಶ : ತಿರುಪತಿಯ ಆಸ್ಪತ್ರೆಯೊಂದರ ಸಮೀಪದ ರಸ್ತೆಯಲ್ಲೇ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ.
ಆಸ್ಪತ್ರೆಗೆ ಬಂದ ಗರ್ಭಿಣಿ ಮಹಿಳೆಯ ಜೊತೆ ಯಾರೂ ಇಲ್ಲ ಎಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಿಲ್ಲ, ಇದೇ ವೇಳೆ ಆಸ್ಪತ್ರೆಯಿಂದ ಹೊರಬರುವಷ್ಟರಲ್ಲಿ ಮಹಿಳೆಗೆ ಹೆರಿಗೆನೋವು ಕಾಣಿಸಿಕೊಂಡು ರಸ್ತೆ ಬದಿ ಒದ್ದಾಡುತ್ತಿದ್ದ ವೇಳೆ ಸಾರ್ವಜನಿಕರು ಸಹಾಯಕ್ಕೆ ಮುಂದಾಗಿದ್ದಾರೆ ಎಂದು ಆಸ್ಪತ್ರೆಯ ವಿರುದ್ಧ ಮಹಿಳೆ ದೂರಿದ್ದಾರೆ.
ಆದರೆ ಆಸ್ಪತ್ರೆಯ ಮೂಲಗಳು ಹೇಳುವಂತೆ ಸೋಮವಾರ ಮಹಿಳೆಯೊಬ್ಬರು ಆಸ್ಪತ್ರೆಯ ಆವರಣದೊಳಗೆ ಒಬ್ಬಂಟಿಯಾಗಿ ತಿರುಗಾಡುತ್ತಿದ್ದರು ನಮಗೆ ಯಾವುದೇ ಮಾಹಿತಿ ಇರಲಿಲ್ಲ ಮಹಿಳೆ ಗರ್ಭಿಣಿ ಎಂದು, ಮಹಿಳೆಯೂ ನಮ್ಮ ಬಳಿ ಏನನ್ನೂ ಹೇಳಿಕೊಂಡಿಲ್ಲ ಅಲ್ಲದೆ ಮಧ್ಯಾಹ್ನದ ಹೊತ್ತಿಗೆ ಮಹಿಳೆಗೆ ಆಸ್ಪತ್ರೆಯ ಕಡೆಯಿಂದ ಊಟ ನೀಡಲಾಗಿತ್ತು ಊಟ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಮಹಿಳೆ ಹೊಟ್ಟೆ ನೋವಿನಿಂದ ಕಿರುಚಾಡುತ್ತಾ ಆಸ್ಪತ್ರೆಯ ಆವರಣದ ಹೊರಗೆ ಓಡಿ ಹೋಗಿದ್ದಾರೆ, ರಸ್ತೆ ಬದಿ ಹೊಟ್ಟೆನೋವಿನಿಂದಿದ ಒದ್ದಾಡುತ್ತಿದ್ದ ಮಹಿಳೆಗೆ ಸಾರ್ವಜನಿಕರು ಸಹಾಯಕ್ಕೆ ಬಂದಿದ್ದಾರೆ ಇದೇ ವೇಳೆ ಮಹಿಳೆ ಗರ್ಭವತಿಯಾಗಿರುವುದು ಗೊತ್ತಾಗಿದೆ ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕೆ ವೈದ್ಯಾಧಿಕಾರಿಗಳು ತೆರಳಿ ಪರೀಕ್ಷೆ ನಡೆಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿಕೊಂಡು ಹೆರಿಗೆ ಮಾಡಲಾಯಿತು ಎಂದು ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿಲ್ಲ ಎಂದ ವಿಚಾರಕ್ಕೆ ಸ್ಪಷ್ಟನೆ ನೀಡಿದ ಆಸ್ಪತ್ರೆಯ ಆಡಳಿತ ಮಂಡಳಿ ನಮ್ಮ ಆಸ್ಪತ್ರೆಯಲ್ಲಿ ಯಾವುದೇ ಅಂತಹ ಘಟನೆಗಳು ನಡೆದಿಲ್ಲ, ಗರ್ಭಿಣಿಯರನ್ನು ಆಸ್ಪತ್ರೆಗೆ ಖಂಡಿತವಾಗಿಯೂ ದಾಖಲಿಸಿಕೊಳ್ಳುತ್ತೇವೆ ಒಂದು ವೇಳೆ ದಾಖಲಾತಿಗೆ ನಿರಾಕರಿಸಿದ್ದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಸದ್ಯ ಮಗು ಹಾಗೂ ತಾಯಿ ಆರೋಗ್ಯದಿಂದಿದ್ದು ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ : ಬೈಕ್ ತಪ್ಪಿಸಲು ಹೋಗಿ ಸಿಎಂ ಎಸ್ಕಾರ್ಟ್ ವಾಹನ ಪಲ್ಟಿ; ಹಲವು ಪೊಲೀಸರಿಗೆ ಗಾಯ