Advertisement

“ವಿದ್ಯಾರ್ಥಿಗಳ ಸಹಕಾರದಿಂದ ಶಿಕ್ಷಣದ ಗುಣಮಟ್ಟ ಹೆಚ್ಚಳ ಸಾಧ್ಯ’

07:10 AM Mar 23, 2018 | Team Udayavani |

ಸಿದ್ದಾಪುರ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಪಡೆಯಲು ಸಹಕಾರಿಯಾಗಿದೆ ಈ ಶಿಕ್ಷಣ ಸಂಸ್ಥೆ. ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಗಳ ಸಂಖ್ಯೆಯ ಜತೆಗೆ ಉಪನ್ಯಾಸಕರ ಉತ್ತಮ ಬೋಧನೆಯೊಂದಿಗೆ ವರ್ಷಂಪ್ರತಿ ಉತ್ತಮ ಫಲಿತಾಂಶವನ್ನು ಕಾಲೇಜು ನೀಡುತ್ತಿದೆ ಎಂದು ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸಿದ್ದಾಪುರ ಡಿ. ಗೋಪಾಲಕೃಷ್ಣ ಕಾಮತ್‌ ಅವರು ಹೇಳಿದರು.

Advertisement

ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಶಂಕರನಾರಾಯಣ ಇಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಾಲೇಜು ನೀಡುತ್ತಿದೆ. ಕಾಲೇಜುಗಳಲ್ಲಿ ನಡೆಸುವ ವಾರ್ಷಿಕೋತ್ಸವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಭವಿಷ್ಯ ಅರಳುವ ಪ್ರಮುಖ ವೇದಿಕೆಯಾಗಿದೆ. ಇಂತಹ  ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು.

ವಿದ್ಯಾರ್ಥಿಗಳ ಸಹಕಾರದಿಂದ ಶಿಕ್ಷಣದ ಗುಣ ಮಟ್ಟ ಹೆಚ್ಚಿಸಲು ಸಾಧ್ಯವಿದೆ. ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ದೊರೆತಾಗ ವಿದ್ಯಾರ್ಥಿಗಳಿವೆ ಉತ್ತಮ ಭವಿಷ್ಯ ಹಾಗೂ ಕಾಲೇಜಿನ ಖ್ಯಾತಿ ಹೆಚ್ಚಿಸಲು ಸಾಧ್ಯ ಎಂದರು.

ಪದವೀಧರರ ಸಂಖ್ಯೆ ಇಳಿಮುಖ
ಹೆಬ್ರಿ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಆರ್‌. ಮಂಜುನಾಥ್‌ ದಿಕ್ಷೂಚಿ ಭಾಷಣಗೈದು ಮಾತನಾಡಿ, ಉನ್ನತ ಶಿಕ್ಷಣಕ್ಕೆ ವಿವಿಧ ಸೌಲಭ್ಯಗಳಿದ್ದರೂ ಪದವೀಧರರ ಸಂಖ್ಯೆಯ ಪ್ರಮಾಣ ಇಳಿಮುಖಗೊಳ್ಳುತ್ತಿದೆ.  ಸರಕಾರವು ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕ್ಕಾಗಿ ವಿಶೇಷ ಸೌಲಭ್ಯ ನೀಡುತ್ತಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು. ಕಾಲೇಜು ಪ್ರಾಂಶುಪಾಲ ಡಾ| ಉದಯ್‌ ಕುಮಾರ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ತಾ. ಪಂ. ಸದಸ್ಯರಾದ ಕೆ. ಉಮೇಶ್‌ ಶೆಟ್ಟಿ ಕಲ್ಗೆದ್ದೆ, ಎಸ್‌. ಕೆ. ವಾಸುದೇವ ಪೈ, ಜಿ. ಪಂ. ಮಾಜಿ ಸದಸ್ಯೆ ಮಮತಾ ಆರ್‌. ಶೆಟ್ಟಿ, ಕಾಲೇಜು ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಶಿವಾನಂದ ವೈದ್ಯ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹರಿಪ್ರಸಾದ್‌ ಆಚಾರ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ಸಂಚಾಲಕ ಶ್ರೀಕಾಂತ್‌ ಎಸ್‌., ವಿದ್ಯಾರ್ಥಿ ಕ್ಷೇಮಪಾಲಕ ಡಾ| ಕುಮಾರ್‌ ಎಂ., ಐಕ್ಯೂಎಸಿ ಸಂಚಾಲಕ ಗಿರೀಶ್‌ ಶಾನ್‌ಭೋಗ್‌, ಸಿ.ಡಿ.ಸಿ. ವಿದ್ಯಾರ್ಥಿ ಪ್ರತಿನಿಧಿ ಸಂದೀಪ ಕುಮಾರ್‌ ಶೆಟ್ಟಿ, ಕಾರ್ಯದರ್ಶಿ ಜಗದೀಶ ಜಿ.ಬಿ. ಮೊದಲಾದವರು ಉಪಸ್ಥಿತರಿದ್ದರು.

ಗುರುವಂದನೆ, ಬಹುಮಾನ ವಿತರಣೆ
ಈ ಸಂದರ್ಭ ಶಂಕರನಾರಾಯಣ ಕಾಲೇಜಿನಲ್ಲಿ ಕರ್ತವ್ಯ  ನಿರ್ವಹಿಸಿ ಕೋಟೇಶ್ವರ ಸ. ಪ. ಪೂ. ಕಾಲೇಜಿಗೆ ವರ್ಗಾವಣೆಗೊಂಡ ಸಹಾಯಕ ಪ್ರಾಧ್ಯಾಪಕರಾದ ಡಾ| ಶೇಖರ ಬಿ, ವೆಂಕಟರಮಣ ಭಟ್‌, ಅರ್ಥಶಾಸ್ತ್ರ ಉಪನ್ಯಾಸಕ ಮಹೇಶ್‌, ಕುಂದಾಪುರ ಬಿ. ಬಿ. ಹೆಗ್ಡೆ ಕಾಲೇಜಿನ ವಾಣಿಜ್ಯ ವಿಭಾಗದ ಮಾಲತಿ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು. ಸ್ಪರ್ಧಾ ವಿಜೇತ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ವಿದ್ಯಾರ್ಥಿ ಕ್ಷೇಮಪಾಲಕ ಡಾ| ಕುಮಾರ ಎಂ. ಸ್ವಾಗತಿಸಿದರು. ಡಾ| ಉದಯ್‌ ಕುಮಾರ್‌ ಶೆಟ್ಟಿ ವರದಿ ವಾಚಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ  ರಾಜೇಂದ್ರ ಹಾಗೂ ಕನ್ನಡ ವಿಭಾಗದ ಉಪನ್ಯಾಸಕಿ ಗುಲಾಬಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next