Advertisement

Winter session; ಸೋಲಿನಿಂದ ಪಾಠ ಕಲಿತು ಸಕಾರಾತ್ಮಕ ಚರ್ಚೆಗೆ ಬನ್ನಿ: ವಿಪಕ್ಷಗಳಿಗೆ ಮೋದಿ

12:44 PM Dec 04, 2023 | |

ಹೊಸದಿಲ್ಲಿ: ಸಂಸತ್ ನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದೆ. ಮೊದಲ ದಿನದ ಅಧಿವೇಶನ ಆರಂಭಕ್ಕೆ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಧಾಸಭಾ ಚುನಾವಣೆ ಫಲಿತಾಂಶಗಳ ಬಗ್ಗೆ ವಿಪಕ್ಷಗಳತ್ತ ಟೀಕೆ ಮಾಡಿದ್ದು, ಜನರು ನಕಾರಾತ್ಮಕತೆಯನ್ನು ತಿರಸ್ಕರಿಸುತ್ತಿದ್ದಾರೆ ಎಂದರು.

Advertisement

ವಿರೋಧ ಪಕ್ಷಗಳು ಸೋಲಿನಿಂದ ಪಾಠ ಕಲಿತು ಸಂಸತ್ತಿನಲ್ಲಿ ಸಕಾರಾತ್ಮಕ ಚರ್ಚೆಗೆ ಬರಬೇಕು ಎಂದು ಅವರು ಹೇಳಿದರು.

ವಿಪಕ್ಷ ನಾಯಕರಿಗೆ ಸಲಹೆ ನೀಡಿದ ಪ್ರಧಾನಿ ಮೋದಿ, “ಪ್ರಸ್ತುತ ಚುನಾವಣಾ ಫಲಿತಾಂಶಗಳನ್ನು ಆಧರಿಸಿ ನಾನು ಮಾತನಾಡುವುದಾದರೆ, ವಿರೋಧ ಪಕ್ಷದಲ್ಲಿರುವ ಸ್ನೇಹಿತರಿಗೆ ಇದೊಂದು ಸುವರ್ಣಾವಕಾಶವಾಗಿದೆ, ಸೋಲಿನ ಹತಾಶೆಯನ್ನು ಹೊರಹಾಕುವ ಬದಲು, ಈ ಹಿನ್ನಡೆಯಿಂದ ಪಾಠ ಕಲಿತು ಮತ್ತು ಈ ಅಧಿವೇಶನದಲ್ಲಿ ಸಕಾರಾತ್ಮಕವಾಗಿ ಮುನ್ನಡೆಯಿರಿ. ದೇಶದ ದೃಷ್ಟಿಕೋನ ಬದಲಾಗಲಿದೆ, ಕಳೆದ ಒಂಬತ್ತು ವರ್ಷಗಳಿಂದ ಇರುವ ಋಣಾತ್ಮಕತೆಯನ್ನು ಬಿಟ್ಟು ನೀವು ಸಕಾರಾತ್ಮಕತೆಯನ್ನು ಅಳವಡಿಸಿಕೊಂಡರೆ, ನಿಮಗೆ ಹೊಸ ಬಾಗಿಲು ತೆರೆಯಬಹುದು, ಅವರು ವಿರೋಧ ಪಕ್ಷದಲ್ಲಿದ್ದರೂ, ನಾನು ನಾನು ಅವರಿಗೆ ಉತ್ತಮ ಸಲಹೆಯನ್ನು ನೀಡುತ್ತಿದ್ದೇನೆ: ಧನಾತ್ಮಕ ಚಿಂತನೆಯೊಂದಿಗೆ ಬನ್ನಿ” ಎಂದರು.

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “ಎಲ್ಲರ ಭವಿಷ್ಯ ಉಜ್ವಲವಾಗಿದೆ; ಹತಾಶರಾಗುವ ಅಗತ್ಯವಿಲ್ಲ, ಆದರೆ ದಯವಿಟ್ಟು ಸಂಸತ್ತಿನಲ್ಲಿ ಸೋಲಿನ ಹತಾಶೆಯನ್ನು ವ್ಯಕ್ತಪಡಿಸಬೇಡಿ” ಎಂದು ಹೇಳಿದರು.

ತಮ್ಮ ಹತಾಶೆಯನ್ನು ಹೊರಹಾಕಲು ಸಂಸತ್ತನ್ನು ವೇದಿಕೆಯಾಗಿ ಬಳಸಬೇಡಿ ಎಂದು ಪ್ರಧಾನಿ ಮೋದಿ ವಿರೋಧ ಪಕ್ಷದ ನಾಯಕರನ್ನು ಒತ್ತಾಯಿಸಿದರು. “ನನ್ನ ಸುದೀರ್ಘ ಅನುಭವದ ಆಧಾರದ ಮೇಲೆ ನಾನು ಹೇಳುತ್ತಿದ್ದೇನೆ, ನಿಮ್ಮ ಕಾರ್ಯಗಳನ್ನು ಬದಲಾಯಿಸಿ, ವಿರೋಧಿಸುವ ಸಲುವಾಗಿ ವಿರೋಧ ಮಾಡುವುದು ಸರಿಯಾದ ಮಾರ್ಗವಲ್ಲ, ರಾಷ್ಟ್ರದ ಕಲ್ಯಾಣಕ್ಕಾಗಿ ಧನಾತ್ಮಕ ವಿಷಯಗಳನ್ನು ಬೆಂಬಲಿಸಿ,” ಎಂದು ಪ್ರಧಾನಿ ಮೋದಿ ವಿರೋಧ ಪಕ್ಷದ ನಾಯಕರಿಗೆ ಸಲಹೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next