Advertisement
ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಬಹುಮಾನ 10 ಸಾವಿರ ರೂ. ನಗದು, ದ್ವಿತೀಯ 5 ಸಾವಿರ ರೂ., ತೃತೀಯ ಬಹುಮಾನಕ್ಕೆ 3 ಸಾವಿರ ರೂ. ಬಹುಮಾನ ನೀಡಲಾಯಿತು. ಕಲೋತ್ಸವದಲ್ಲಿ ಸಮೂಹ ವಿಭಾಗದಲ್ಲಿ ಪ್ರಥಮ ಬಹುಮಾನ 60 ಸಾವಿರ ರೂ. ನಗದು, ದ್ವಿತೀಯ 30 ಸಾವಿರ, ತೃತೀಯ 18 ಸಾವಿರ ರೂ. ಬಹುಮಾನ ನೀಡಲಾಯಿತು.
Related Articles
Advertisement
ಭಾವಗೀತೆ ಸ್ಪರ್ಧೆ: ಭೂಮಿ ದಿನೇಶ್ ಹೆಗ್ಡೆ, ಶಿರಸಿ ಲಯನ್ಸ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಶಿರಸಿ (ಪ್ರಥಮ), ಚೈತ್ರ ಉಮಾಕಾಂತ ಹೆಬ್ಟಾರ, ಶ್ರೀ ಶಿವಶಾಂತಿಕ ಪರಮೇಶ್ವರಿ ಪ್ರೌಢಶಾಲೆ, ಮಾರುಕೇರಿ, ಉತ್ತರ ಕನ್ನಡ ಜಿಲ್ಲೆ (ದ್ವಿತೀಯ), ರಕ್ಷಾ ರಮೇಶ ಡಿ.ಆರ್., ಚಿನ್ಮಯ ವಿದ್ಯಾಲಯ, ಕೋಲಾರ (ತೃತೀಯ).
ಛದ್ಮವೇಶ ಸ್ಪರ್ಧೆ: ಬೆಂಗಳೂರಿನ ಉತ್ತರ ಹಳ್ಳಿಯ ಸರಸ್ವತಿ ವಿದ್ಯಾಮಂದಿರದ ಕಾವ್ಯ ಕೆ.ಎಸ್. (ಪ್ರಥಮ),ಸಚಿನ್ ಆರ್.ಗಿರಿ, ನ್ಯೂ ಹೈಸ್ಕೂಲ್, ಕಿತ್ತೂರು, ಬೆಳಗಾವಿ (ದ್ವಿತೀಯ), ಐಶ್ವರ್ಯ ಎಂ.ಕಾಶೆಟ್ಟಿ, ಎಲ್‌ಇಎಂಎಸ್ ಪ್ರೌಢಶಾಲೆ, ಹಾವೇರಿ (ತೃತೀಯ).
ಕಲೋತ್ಸವದಲ್ಲಿ ಸಮೂಹ ನೃತ್ಯಸ್ಪರ್ಧೆಯಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಸರ್ಕಾರಿ ಪ್ರೌಢಶಾಲೆ ತಂಡ ಪ್ರಥಮ, ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಶಿವಪುರ ಗ್ರಾಮದ ಪೂರ್ಣಪ್ರಜ್ಞ ಪ್ರೌಢಶಾಲೆ ತಂಡ ದ್ವಿತೀಯ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಎಸ್.ವಿ.ಎಸ್.ಕನ್ನಡ ಮಾಧ್ಯಮ ಶಾಲೆ ತಂಡ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ದೃಶ್ಯಕಲೆ ಸ್ಪರ್ಧೆಯಲ್ಲಿ ಹಾಸನದ ಗವೇನಹಳ್ಳಿ ಸರ್ಕಾರಿ ಪ್ರೌಢಶಾಲೆ ತಂಡ ಪ್ರಥಮ, ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕು ನೀರಲಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ತಂಡ ದ್ವಿತೀಯ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸಾಸಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ತಂಡ ತೃತೀಯ ಬಹುಮಾನ ಗಳಿಸಿತು.
ಸಂಗೀತ ಸ್ಪರ್ಧೆಯಲ್ಲಿ ಬಾಗಲಕೋಟೆ ಜಿಲ್ಲೆ ಬಾದಮಿ ತಾಲೂಕು ಚಿಕ್ಕಮುಚ್ಚಳ ಗುಡ್ಡದ ಸರ್ಕಾರಿ ಆದರ್ಶ ವಿದ್ಯಾಲಯದ ತಂಡ ಪ್ರಥಮ, ಧಾರವಾಡ ಜಿಲ್ಲೆ ಹಿರೇಹೊನ್ನಳ್ಳಿಯ ಕೆ.ಆರ್.ಸಿ.ಎಸ್. ಪ್ರೌಢಶಾಲೆ ತಂಡ ದ್ವಿತೀಯ,ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಇಂದ್ರಪ್ರಸ್ಥಾವಿದ್ಯಾಲಯದ ತಂಡ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿತು.
ನಾಟಕ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆ ಕುಂದೂರು ಮಠದ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಂಡ ಪ್ರಥಮ, ಬೆಂಗಳೂರಿನ ಯಶವಂತಪುರದ ಬಾಪು ಪ್ರೌಢಶಾಲೆ ತಂದ ದ್ವಿತೀಯ,ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ತುಂಗಳ ಪ್ರೌಢಶಾಲೆ ತಂಡ ತೃತೀಯ ಬಹುಮಾನವನ್ನು ಗಳಿಸಿತು.