Advertisement

Wimbledon-2024: ರಿಬಾಕಿನಾ-ಕ್ರೆಜಿಕೋವಾ ಸೆಮಿ ಸೆಣಸಾಟ

01:55 AM Jul 11, 2024 | Team Udayavani |

ಲಂಡನ್‌: ಕಜಾಕ್‌ಸ್ಥಾನದ ಎಲೆನಾ ರಿಬಾಕಿನಾ ಮತ್ತು ಜೆಕ್‌ ಗಣರಾಜ್ಯದ ಕ್ರೆಜಿಕೋವಾ ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ಎದುರಾಗಲಿದ್ದಾರೆ.

Advertisement

ಬುಧವಾರ ನಡೆದ ವನಿತೆಯರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಎಲೆನಾ ರಿಬಾಕಿನಾ 6-3, 6-2 ಅಂತರದಿಂದ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವ ರಿಗೆ ಸೋಲುಣಿಸಿದರು.

ಇನ್ನೊಂದು ಮುಖಾಮುಖೀಯಲ್ಲಿ ಕ್ರೆಜಿಕೋವಾ 6-4, 7-6 (7-4)ರಿಂದ ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಅವರಿಗೆ ಆಘಾತವಿಕ್ಕಿದರು. ಇದು ಕ್ರೆಜಿಕೋವಾ ಕಾಣುತ್ತಿರುವ ಮೊದಲ ವಿಂಬಲ್ಡನ್‌ ಸೆಮಿಫೈನಲ್‌ ಆಗಿದೆ.

ಜೊಕೋವಿಕ್‌ಗೆ ವಾಕ್‌ಓವರ್‌
ಫೇವರಿಟ್‌ ಆಟಗಾರ ನೊವಾಕ್‌ ಜೊಕೋವಿಕ್‌ ಕ್ವಾರ್ಟರ್‌ ಫೈನಲ್‌ ಆಡದೆಯೇ ಸೆಮಿಫೈನಲ್‌ ಪ್ರವೇಶಿ ಸುವ ಅದೃಷ್ಟ ಸಂಪಾದಿಸಿದರು. ಆಸ್ಟ್ರೇ ಲಿಯದ ಎದುರಾಳಿ ಅಲೆಕ್ಸ್‌ ಡಿ ಮಿನೌರ್‌ ಗಾಯಾಳಾದ ಕಾರಣ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ಆಡಲಿಳಿಯಲಿಲ್ಲ.

ಆರ್ಥರ್‌ ಫಿಲ್ಸ್‌ ಎದುರಿನ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ಡಿ ಮಿನೌರ್‌ ಸೊಂಟದ ನೋವಿಗೆ ಒಳಗಾಗಿದ್ದರು. ಇದು ಗುಣಮುಖ ವಾಗದ ಕಾರಣ ಕ್ವಾರ್ಟರ್‌ ಫೈನಲ್‌ ಪಂದ್ಯವನ್ನು ತ್ಯಜಿಸುವುದು ಅನಿವಾರ್ಯ ವಾಯಿತು.

Advertisement

ಮೆಡ್ವೆಡೇವ್‌-ಅಲ್ಕರಾಜ್‌ ಸೆಮಿಫೈನಲ್‌
ನಂ.1 ಆಟಗಾರ ಜಾನಿಕ್‌ ಸಿನ್ನರ್‌ ಅವರನ್ನು 5 ಸೆಟ್‌ಗಳ ಮ್ಯಾರಥಾನ್‌ ಹೋರಾಟದಲ್ಲಿ ಮಣಿಸಿದ ಡ್ಯಾನಿಲ್‌ ಮೆಡ್ವೆಡೇವ್‌ಗೆ ಸೆಮಿಫೈನಲ್‌ನಲ್ಲಿ ಕಾರ್ಲೋಸ್‌ ಅಲ್ಕರಾಜ್‌ ಎದುರಾಗ ಲಿದ್ದಾರೆ. ಕಳೆದ ರಾತ್ರಿಯ ಕ್ವಾರ್ಟರ್‌ ಫೈನಲ್‌ನಲ್ಲಿ ಅಲ್ಕರಾಜ್‌ ಅಮೆರಿಕದ ಟಾಮಿ ಪೌಲ್‌ ಆಟಕ್ಕೆ 5-7, 6-4, 6-2, 6-2 ಅಂತರದಿಂದ ತೆರೆ ಎಳೆದರು.

ಪೌಲಿನಿ-ವೆಕಿಕ್‌ ಮುಖಾಮುಖಿ
ವನಿತೆಯರ ಸೆಮಿಫೈನಲ್‌ನಲ್ಲಿ ಇಟಲಿಯ ಜಾಸ್ಮಿನ್‌ ಪೌಲಿನಿ ಹಾಗೂ ಡೋನಾ ವೆಕಿಕ್‌ ಪರಸ್ಪರ ಎದು ರಾಗಲಿದ್ದಾರೆ. 2ನೇ ಕ್ವಾರ್ಟರ್‌ ಫೈನಲ್‌ ನಲ್ಲಿ ಜಾಸ್ಮಿನ್‌ ಪೌಲಿನಿ ಅಮೆರಿಕದ ಎಮ್ಮಾ ನವಾರೊ ವಿರುದ್ಧ 6-2, 6-1 ಅಂತರದ ಸುಲಭ ಜಯ ಸಾಧಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next