ಬಾಬೊìರಾ ಕ್ರೆಜಿಕೋವಾ ಕಾಣುತ್ತಿರುವ ಮೊದಲ ವಿಂಬಲ್ಡನ್ ಫೈನಲ್ ಇದಾಗಿದೆ.
Advertisement
ಈಗಾಗಲೇ 2021ರ ಫ್ರೆಂಚ್ ಓಪನ್ ಫೈನಲ್ ಗೆದ್ದು ಗ್ರ್ಯಾನ್‌ಸ್ಲಾಮ್ ಟ್ರೋಫಿಯ ಖಾತೆ ತೆರೆದಿದ್ದಾರೆ. ಗ್ರ್ಯಾನ್‌ಸ್ಲಾಮ್ ಡಬಲ್ಸ್‌ನಲ್ಲಂತೂ ಇವರು ಚಾಂಪಿಯನ್ ಆಟಗಾರ್ತಿ. ಈಗಾಗಲೇ 7 ಡಬಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಇದರಲ್ಲಿ 2 ವಿಂಬಲ್ಡನ್ ಪ್ರಶಸ್ತಿಗಳೂ ಸೇರಿವೆ. 2018 ಮತ್ತು 2022ರಲ್ಲಿ ಕ್ಯಾಥರಿನಾ ಸಿನಿಯಕೋವಾ ಜತೆಗೂಡಿ ಚಾಂಪಿಯನ್ ಆಗಿದ್ದರು. ಈ ಎಲ್ಲ ಸಾಧನೆಯ ಲೆಕ್ಕಾಚಾರದಲ್ಲಿ ಕ್ರೆಜಿಕೋವಾ ನೆಚ್ಚಿನ ಆಟಗಾರ್ತಿಯಾಗಿ ಗೋಚರಿಸುತ್ತಾರೆ.
2016ರಲ್ಲಿ ಸೆರೆನಾ ವಿಲಿಯಮ್ಸ್ ಪ್ರಶಸ್ತಿ ಉಳಿಸಿಕೊಂಡ ಬಳಿಕ ವಿಂಬಲ್ಡನ್‌ನಲ್ಲಿ ವರ್ಷಕ್ಕೊಬ್ಬರಂತೆ ಹೊಸಬರು ಚಾಂಪಿಯನ್ ಆಗುತ್ತಿರುವುದು ವಿಶೇಷ. ಗ್ಯಾಬ್ರಿನ್ ಮುಗುರುಜಾ, ಆ್ಯಂಜೆಲಿಕ್ ಕೆರ್ಬರ್, ಸಿಮೋನಾ ಹಾಲೆಪ್, ಆ್ಯಶ್ಲಿ ಬಾರ್ಟಿ, ಎಲೆನಾ ರಿಬಾಕಿನಾ, ಮಾರ್ಕೆಟಾ ವೊಂಡ್ರೂಸೋವಾ ಪ್ರಶಸ್ತಿ ಜಯಿಸಿದ್ದರು.
ಈ ಸಲವೂ ಹೊಸಬರ ಸರದಿ. ಜಾಸ್ಮಿನ್ ಪೌಲಿನಿ, ಬಾಬೊìರಾ ಕ್ರೆಜಿಕೋವಾ ಅವರಲ್ಲಿ ಯಾರೇ ಗೆದ್ದರೂ ಮೊದಲ ಸಲ ವಿಂಬಲ್ಡನ್ ಕ್ವೀನ್ ಎನಿಸಿಕೊಳ್ಳಲಿದ್ದಾರೆ.