Advertisement

Tamil film industry; ಬಾಲ ನಟಿಯಾಗಿದ್ದಾಗ ಲೈಂಗಿಕ ಕಿರುಕುಳ:ಕುಟ್ಟಿ ಪದ್ಮಿನಿ

09:28 AM Aug 31, 2024 | Team Udayavani |

ಚೆನ್ನೈ: ಮಲಯಾಳ ಚಿತ್ರರಂಗದ ಬಳಿಕ ತಮಿಳು ಚಿತ್ರ ರಂಗದಲ್ಲೂ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾತನಾಡಿರುವ ತಮಿಳು ನಟಿ ಮತ್ತು ಧಾರಾ ವಾಹಿಗಳ ನಿರ್ಮಾಪಕಿ ಕುಟ್ಟಿ ಪದ್ಮಿನಿ “ತಮಿಳು ಚಿತ್ರರಂಗ ದಲ್ಲೂ ನಟಿಯರಿಗೆ ಲೈಂಗಿಕ ಕಿರುಕುಳ ಎದುರಾಗಿದೆ. ಟಿವಿ ಶೋಗಳಲ್ಲಿ ಈ ಕೃತ್ಯಗಳು ಹೆಚ್ಚಿದ್ದು, ಎಷ್ಟೋ ಕಲಾವಿದೆ ಯರು ಇದರಿಂದಾಗಿಯೇ ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಬಾಲ ಕಲಾವಿದೆಯಾಗಿದ್ದಾಗ ನನಗೂ ಲೈಂಗಿಕ ಕಿರುಕುಳ ನೀಡಲಾಗಿತ್ತು’ ಎಂದು ಆರೋಪಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಕುಟ್ಟಿ ಪದ್ಮನಿ, ಟಿವಿ ಧಾರವಾ ಹಿಗಳಲ್ಲಿ ಕೆಲವು ನಿರ್ದೇಶಕರು, ತಂತ್ರಜ್ಞರು ನಟಿಯರಿಗೆ ತಮ್ಮೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸುತ್ತಾರೆ. ಹಲವು ಮಹಿಳೆಯರು ಇದನ್ನು ನಿರೂಪಿಸಲಾಗದೇ ದೂರನ್ನೂ ನೀಡುವುದಿಲ್ಲ. ಇನ್ನೂ ಹಲವರು ತಮಗೆ ಉತ್ತಮ ಸಂಪಾದನೆ ಆಗುತ್ತಿ ರುವ ಕಾರಣ ಸಹಿಸಿಕೊಳ್ಳು ತ್ತಿದ್ದಾರೆ. ಬಾಲ ನಟಿಯಾಗಿದ್ದಾಗ ನನಗೂ ಕಿರುಕುಳ ನೀಡಲಾಗಿತ್ತು. ನನ್ನ ತಾಯಿ ಧ್ವನಿ ಎತ್ತಿದ್ದಕ್ಕೆ ಹಿಂದಿ ಚಿತ್ರರಂಗದಿಂದ ನನ್ನನ್ನು ಹೊರದಬ್ಬಿದರು ಎಂದಿದ್ದಾರೆ.

Advertisement

ಶಾಸಕ ಮುಕೇಶ್‌ ರಾಜೀನಾಮೆ ಕೊಡಬೇಕು: ಸಿಪಿಐ
ತಿರುವನಂತಪುರ: ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ನಟ ಶಾಸಕ- ಮುಕೇಶ್‌ ರಾಜೀನಾಮೆ ನೀಡಬೇಕು ಎಂದು ಕೇರಳ ಸಿಪಿಐ ನಾಯಕರು ಆಗ್ರಹಿಸಿದ್ದಾರೆ. ಸಿಎಂ ಪಿಣರಾಯಿ ವಿಜಯನ್‌ ಅವರನ್ನು ಭೇಟಿಯಾದ ಸಿಪಿಐ ಕೇರಳ ಘಟಕದ ಕಾರ್ಯದರ್ಶಿ ಬಿನೊಯ್‌ ವಿಶ್ವಂ ಬಳಿ ಮುಕೇಶ್‌ ರಾಜೀನಾಮೆಯ ಬೇಡಿಕೆ ಇಟ್ಟಿದ್ದಾರೆ. ಜತೆಗೆ ನೈತಿಕತೆಯ ಆಧಾರದಲ್ಲಿ ಅವರು ರಾಜಕೀಯದಿಂದ ದೂರ ಇರಬೇಕು ಎಂದು ಸಿಎಂ ಬಳಿ ಹೇಳಿದ್ದಾರೆ. ನಟ ಜಯ ಸೂರ್ಯ ವಿರುದ್ಧ 2ನೇ ಪ್ರಕರಣ ದಾಖಲಾಗಿದೆ.

ದುಷ್ಕರ್ಮಿಗಳ ಕಪಾಳಕ್ಕೆ ಬಾರಿಸಿ: ನಟ ವಿಶಾಲ್‌
“ಯಾರಾದರೂ ನಿಮ್ಮ ಮೈ ಮುಟ್ಟಿದರೆ ತತ್‌ಕ್ಷಣವೇ ಅವರಿಗೆ ಚಪ್ಪಲಿಯಲ್ಲಿ ಬಾರಿಸಿ. ಆಗ ಅವರು ಅಂತ ದುಷ್ಕೃತ್ಯಕ್ಕೆ ಮುಂದಾಗಲ್ಲ ಹಾಗೂ ಮತ್ತೆಂದಿಗೂ ಮಹಿಳೆಯರನ್ನು ಮುಟ್ಟುವ ಬಗ್ಗೆ ಅವರು ಯೋಚನೆಯೂ ಮಾಡಲ್ಲ’ ಎಂದು ತಮಿಳು ನಟ ವಿಶಾಲ್‌ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ವಿಶಾಲ್‌ ಈ ಹೇಳಿಕೆ ನೀಡಿದ್ದಾರೆ. “ಲೈಂಗಿಕ ಕಿರು ಕುಳ ತಡೆಗಾಗಿ ಹಾಗೂ ನಟಿಯರಿಗೆ ಬೆಂಬಲ ನೀಡುವುದಕ್ಕಾಗಿ ದಕ್ಷಿಣ ಭಾರತದ ಕಲಾವಿದರ ಒಕ್ಕೂಟವಾದ ನಾಡಿಗರ ಸಂಗಮ ಸಮಿತಿ ರಚಿಸಲು ನಿರ್ಧರಿಸಿದೆ. ಲೈಂಗಿಕ ಕಿರುಕುಳದ ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಎಂದೂ ವಿಶಾಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next