Advertisement

ವಿಂಬಲ್ಡನ್‌ನಿಂದಲೂ ರಷ್ಯಾ, ಬೆಲಾರಸ್‌ ಟೆನಿಸಿಗರಿಗೆ ನಿಷೇಧ

10:23 PM Apr 05, 2022 | Team Udayavani |

ಲಂಡನ್‌: ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಸೂಚನೆಯಂತೆ ಬಹುತೇಕ ರಷ್ಯಾ ಅಥ್ಲೀಟ್‌ಗಳಿಗೆ ಎಲ್ಲ ಕ್ರೀಡಾಕೂಟಗಳಿಂದ ನಿಷೇಧ ಹೇರಲಾಗಿದೆ.

Advertisement

ಇದೀಗ ಈ ವರ್ಷ ಜೂ.27ರಿಂದ ಜು.10ರವರೆಗೆ ನಡೆಯುವ ಪ್ರತಿಷ್ಠಿತ ವಿಂಬಲ್ಡನ್‌ ಟೆನಿಸ್‌ನಲ್ಲೂ ನಿಷೇಧಕ್ಕೊಳಗಾಗುವ ಸಾಧ್ಯತೆಯಿದೆ.

ಹೀಗಾದರೆ ವಿಶ್ವ ನಂ.2 ಟೆನಿಸಿಗ ಡ್ಯಾನಿಲ್‌ ಮೆಡ್ವೆಡೇವ್‌ ವಿಂಬಲ್ಡನ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ!

ಈ ಬಗ್ಗೆ ವಿಂಬಲ್ಡನ್‌ ಅಧಿಕಾರಿಗಳು ಇಂಗ್ಲೆಂಡ್‌ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಇಷ್ಟು ಮಾತ್ರವಲ್ಲ ರಷ್ಯಾದ ಬೆಂಬಲಕ್ಕೆ ನಿಂತಿರುವ ಬೆಲಾರಸ್‌ ಕೂಡ ಅಪಾಯದಲ್ಲಿದೆ. ಅದರ ಟೆನಿಸಿಗರೂ ನಿಷೇಧಕ್ಕೊಳಗಾಗುವ ದಟ್ಟ ಸಾಧ್ಯತೆಯಿದೆ.

ಪ್ರಸ್ತುತ ರಷ್ಯಾ, ಬೆಲಾರಸ್‌ ಅಥ್ಲೀಟ್‌ಗಳು ತಮ್ಮ ದೇಶಗಳ ಧ್ವಜಗಳನ್ನು ಬಿಟ್ಟು, ತಟಸ್ಥವಾಗಿ ಎಟಿಪಿ, ಡಬ್ಲೂéಟಿಎ, ಐಟಿಎಫ್ ಟೆನಿಸ್‌ ಕೂಟಗಳಲ್ಲಿ ಆಡುತ್ತಿದ್ದಾರೆ. ಇಲ್ಲಿ ಈ ಎರಡು ದೇಶಗಳ ರಾಷ್ಟ್ರಗೀತೆ ಕೇಳಿ ಬರುವುದಿಲ್ಲ. ಆದರೆ ವಿಂಬಲ್ಡನ್‌ ಒಂದು ಸ್ವತಂತ್ರ, ಖಾಸಗಿ ಕೂಟ. ಇದು ಇಂಗ್ಲೆಂಡ್‌ನ‌ಲ್ಲಿ ನಡೆಯುತ್ತದೆ. ರಷ್ಯಾ ಉಕ್ರೇನ್‌ ಮೇಲೆ ಮಾಡಿರುವ ದಾಳಿಯನ್ನು ಇಂಗ್ಲೆಂಡ್‌ ವಿರೋಧಿಸಿದೆ.

Advertisement

ಒಂದು ವೇಳೆ ವಿಂಬಲ್ಡನ್‌ ಸಂಘಟಕರು ರಷ್ಯಾ, ಬೆಲಾರಸ್‌ ಟೆನಿಸಿಗರಿಗೆ ಅವಕಾಶ ನೀಡಿದರೂ, ಇಂಗ್ಲೆಂಡ್‌ ಸರ್ಕಾರ ಅದನ್ನು ವಿರೋಧಿಸಬಹುದು. ಆಗ ಅನಗತ್ಯವಾಗಿ ಉದ್ಭವಿಸುವ ಕಾನೂನು ಸಂಘರ್ಷಕ್ಕೆ ದಾರಿ ಮಾಡಿಕೊಡುವುದು ಬೇಡವೆನ್ನುವುದು ಸಂಘಟಕರ ಲೆಕ್ಕಾಚಾರ.

ಒಂದು ವೇಳೆ ನಿಷೇಧ ಹೇರಿದ್ದೇ ಆದರೆ ಆಂಡ್ರೆ ರಬ್ಲೆವ್‌, ಕರೆನ್‌ ಕಚನೊವ್‌, ಅಸ್ಲಾನ್‌ ಕರೆತ್ಸೆವ್‌, ಬೆಲಾರಸ್‌ನ ಅರಿನಾ ಸಬಲೆಂಕಾ, ವಿಕ್ಟೋರಿಯಾ ಅಜರೆಂಕಾ ಕೂಟದಿಂದ ಹೊರಬೀಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next