Advertisement
ಜೊಕೋ, ಸಿಸಿಪಸ್ ಪಾಸ್ಹಾಲಿ ಚಾಂಪಿಯನ್ ಜೊಕೋ ವಿಕ್ ಓಟ ಮುಂದು ವರಿಸಿದರು. ಅವರು ಸ್ಟಾನಿ ಸ್ಲಾಸ್ ವಾವ್ರಿಂಕ ವಿರುದ್ಧ 6-3, 6-1, 7-6 (7-5) ಅಂತರದ ಗೆಲುವು ಸಾಧಿಸಿ ದರು. ರವಿವಾರದ ಪ್ರಿ- ಕ್ವಾರ್ಟರ್ ಫೈನಲ್‌ನಲ್ಲಿ ಅವರು ಹ್ಯೂಬರ್ಟ್ ಹುರ್ಕಾಜ್ ಸವಾಲನ್ನು ಎದುರಿಸಲಿ ದ್ದಾರೆ. ಪೋಲೆಂಡ್‌ನ ಹುರ್ಕಾಜ್ 7-6 (7-4), 6-4, 6-4ರಿಂದ ಇಟಲಿಯ ಲೊರೆಂಜೊ ಮುಸೆಟ್ಟಿ ಅವರನ್ನು ಕೆಡವಿದರು.
ವನಿತಾ ಸಿಂಗಲ್ಸ್‌ನಲ್ಲಿ ಇಗಾ ಸ್ವಿಯಾಟೆಕ್ ಹದಿನಾರರ ಸುತ್ತು ಮುಟ್ಟಿ ದ್ದಾರೆ. ಅವರು ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್ ವಿರುದ್ಧ 6-2, 7-5ರಿಂದ ಗೆದ್ದು ಬಂದರು.
5ನೇ ಶ್ರೇಯಾಂಕದ ಕ್ಯಾರೋಲಿನ್ ಗಾರ್ಸಿಯಾ, 11ನೇ ಶ್ರೇಯಾಂಕದ ದರಿಯಾ ಕಸತ್ಕಿನಾ ಮತ್ತು 20ನೇ ಶ್ರೇಯಾಂಕಿತ ಆಟಗಾರ್ತಿ ಡೋನಾ ವೆಕಿಕ್ ಕೂಟದಿಂದ ನಿರ್ಗಮಿಸಿದ್ದಾರೆ.
Related Articles
ವಿಂಬಲ್ಡನ್ ಪುರುಷರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯದ ಮ್ಯಾಥ್ಯೂ ಎಬೆನ್ ಗೆಲುವಿನ ಆರಂಭ ಪಡೆದಿದ್ದಾರೆ. ಮೊದಲ ಸುತ್ತಿನ ತೀವ್ರ ಪೈಪೋಟಿಯ ಪಂದ್ಯದಲ್ಲಿ 6ನೇ ಶ್ರೇಯಾಂಕದ ಇಂಡೋ- ಆಸ್ಟ್ರೇಲಿಯನ್ ಟೆನಿಸಿಗರು ಆರ್ಜೆಂಟೀನಾದ ಗುಲೆರ್ಮೊ ಡುರಾನ್- ಥಾಮಸ್ ಇಶೆವೆರಿ ವಿರುದ್ಧ 6-2, 6-7 (5-7), 7-6 (10-8) ಜಯ ದಾಖಲಿಸುವಲ್ಲಿ ಯಶಸ್ವಿ ಯಾದರು. ಬೋಪಣ್ಣ-ಎಬೆನ್ ಫೆಬ್ರವರಿಯಲ್ಲಿ ನಡೆದ ಕತಾರ್ ಓಪನ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ರೋಹನ್ ಬೋಪಣ್ಣ ಮಿಕ್ಸೆಡ್ ಡಬಲ್ಸ್‌ನಲ್ಲೂ ಸ್ಪರ್ಧಿಸಲಿದ್ದು, ಇಲ್ಲಿ ಇವರ ಜೋಡಿಯಾಗಿರುವವರು ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವ್‌ಸ್ಕಿ. ಯುಕಿ ಭಾಂಬ್ರಿ-ಸಾಕೇತ್ ಮೈನೇನಿ, ಜೀವನ್ ನೆಡುಂಚೆಜಿಯನ್-ಎನ್. ಶ್ರೀರಾಮ್ ಬಾಲಾಜಿ ಕೂಡ ಪುರುಷರ ಡಬಲ್ಸ್‌ನಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.
Advertisement
ಹದ್ದಾದ್ ಮಯಾ ಗೆಲುವುಶನಿವಾರದ ಪಂದ್ಯದಲ್ಲಿ ಬ್ರಝಿಲ್‌ನ ಹದ್ದಾದ್ ಮಯಾ 6-2, 6-2 ಅಂತರದಿಂದ ಸೊರಾನಾ ಕಿಸ್ಟಿì ಅವರನ್ನು ಮಣಿಸಿದರು. ಮಯಾ ಒಂದು ತಿಂಗಳ ಹಿಂದಷ್ಟೇ ಫ್ರೆಂಚ್ ಓಪನ್ ಸೆಮಿಫೈನಲ್ ತಲುಪಿ ವನಿತಾ ರ್‍ಯಾಂಕಿಂಗ್‌ನಲ್ಲಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡ ಬ್ರಝಿಲ್‌ನ ಮೊದಲ ಆಟಗಾರ್ತಿ ಎನಿಸಿದ್ದರು.
ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ 6-3, 7-5ರಿಂದ ಸರ್ಬಿಯಾದ ನಟಾಲಿಜಾ ಕೋಸ್ಟಿಕ್ ಅವರನ್ನು ಕೆಡವಿದರು. ಎಕಟೆರಿನಾ ಅಲೆಕ್ಸಾಂಡ್ರೋವಾ ಹಂಗೇರಿಯ ಡಲ್ಮಾ ಗಾಲ್ಫಿ ವಿರುದ್ಧ 6-0, 6-4ರಿಂದ ಗೆದ್ದು ಬಂದರು.