ಹಿಸಾರ್(ಹರ್ಯಾಣ): ನಮ್ಮ ನೆರೆಯ ಗ್ರಾಮದಲ್ಲಿ ಫ್ಯಾಕ್ಟರಿಯೊಂದನ್ನು ನಿರ್ಮಿಸಿ ಎಂಬ ಮಹಿಳೆಯೊಬ್ಬರ ಬೇಡಿಕೆಗೆ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ನಿನ್ನನ್ನು ಚಂದ್ರಯಾನ-4ರ ಬಾಹ್ಯಾಕಾಶ ನೌಕೆಯಲ್ಲಿ ಕಳುಹಿಸುವಾ, ಈಗ ನೀನು ಕೂತ್ಕೊಳಮ್ಮಾ” ಎಂದು ಸಾರ್ವಜನಿಕ ಸಭೆಯಲ್ಲಿ ವ್ಯಂಗ್ಯವಾಡಿರುವ ಘಟನೆಗೆ ವಿಪಕ್ಷಗಳು ಆಕ್ರೋಶವ್ಯಕ್ತಪಡಿಸಿವೆ.
ನೆರೆಯ ಭಾಟೋಲ್ ಜತ್ತಾನ್ ಗ್ರಾಮದಲ್ಲಿ ಫ್ಯಾಕ್ಟರಿಯೊಂದನ್ನು ಕಟ್ಟಿಸಿದರೆ ಮಹಿಳೆಯರಿಗೆ ಇದರಿಂದ ಉದ್ಯೋಗ ದೊರಕಿದಂತಾಗುತ್ತದೆ ಎಂದು ಮಹಿಳೆಯೊಬ್ಬರು ಸಿಎಂ ಬಳಿ ಮನವಿ ಮಾಡಿಕೊಂಡಿರುವು ಘಟನೆ ವಿಡಿಯೋದಲ್ಲಿ ದಾಖಲಾಗಿದೆ.
ಇದನ್ನೂ ಓದಿ:
BJP-JDS Alliance; ಯಡಿಯೂರಪ್ಪರ ಯಾವುದೇ ನಿರ್ಧಾರಕ್ಕೂ ನಮ್ಮ ಸಹಮತವಿದೆ: ಪ್ರತಾಪ್ ಸಿಂಹ
ಸಾರ್ವಜನಿಕ ಸಭೆಯಲ್ಲಿ ಮಹಿಳೆಯ ಅಹವಾಲು ಕೇಳಿಸಿಕೊಂಡ ಮುಖ್ಯಮಂತ್ರಿ ಖಟ್ಟರ್, ಆಯ್ತು ಮುಂದಿನ ಬಾರಿ ಚಂದ್ರಯಾನ 4ರಲ್ಲಿ ನಿನ್ನನ್ನು ಚಂದ್ರಗ್ರಹಕ್ಕೆ ಕಳುಹಿಸುವಾ, ಈಗ ಕುಳಿತುಕೋ ಎಂದು ಉತ್ತರ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.
ಮಹಿಳೆ ಬೇಡಿಕೆಗೆ ವ್ಯಂಗ್ಯವಾಗಿ ಉತ್ತರ ನೀಡಿರುವ ಮುಖ್ಯಮಂತ್ರಿ ಖಟ್ಟರ್ ವಿರುದ್ಧ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಆಪ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮುಖ್ಯಮಂತ್ರಿ ಖಟ್ಟರ್ ಅವರು ಪ್ರಸ್ತುತ ಜನ ಸಂವಾದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಈ ಕಿರು ವಿಡಿಯೋ ಕ್ಲಿಪ್ ಅನ್ನು ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ಕೆಲವು ಮುಖಂಡರು ಸಾಮಾಜಿಕ ತಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಲು ಕಾರಣವಾಗಿದೆ.
.
Chandrayaan-4 mission, Woman, Congress, AAP, Short video, ಚಂದ್ರಯಾನ 4, ಸಿಎಂ ಮನೋಹರ ಲಾಲ್ ಖಟ್ಟರ್, ವ್ಯಂಗ್ಯ