ಮುಂಬೈ: 2022 ರ ಟಿ20 ವಿಶ್ವಕಪ್ ಬಳಿಕ ಭಾರತ ತಂಡದ ಹಿರಿಯ ಸದಸ್ಯರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿಲ್ಲ. ಆ ವಿಶ್ವಕಪ್ ಬಳಿಕ ಟಿ20 ತಂಡವನ್ನು ಮುನ್ನಡೆಸುತ್ತಿದ್ದು, ಪ್ರತಿ ಸರಣಿಗೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಈ ವರ್ಷದ ಏಕದಿನ ವಿಶ್ವಕಪ್ ನ ಬಳಿಕ ರೋಹಿತ್ ತಂಡದಲ್ಲಿ ಮುಂದುವರಿಯುವ ಬಗ್ಗೆ ಅನುಮಾನಗಳು ಎದ್ದಿರುವಂತೆ ಹಿಟ್ ಮ್ಯಾನ್ ಸ್ವತಃ ಪ್ರಮುಖ ಸುಳಿವನ್ನು ನೀಡಿದ್ದಾರೆ. ಶೀಘ್ರದಲ್ಲೇ ತ್ಯಜಿಸಲು ಯೋಚಿಸುತ್ತಿಲ್ಲ ಎಂದು ಹೇಳಿದ್ದಾರೆ.
ಸದ್ಯ ಅಮೆರಿಕದಲ್ಲಿರುವ ರೋಹಿತ್ ಅಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಯುಎಸ್ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ 2024 ರ ಟಿ20 ವಿಶ್ವಕಪ್ ಬಗ್ಗೆ ರೋಹಿತ್ ಮಾತನಾಡಿದ್ದಾರೆ. ಮುಂದಿನ ವರ್ಷದ ವಿಶ್ವಕಪ್ ಗಾಗಿ ಎದುರು ನೋಡುತ್ತಿರುವುದಾಗಿ ಹೇಳಿಕೊಂಡರು.
ಇದನ್ನೂ ಓದಿ:ಕರ್ತವ್ಯ ನಿರತ ಮಹಿಳಾ ಪೊಲೀಸ್ ಅಧಿಕಾರಿಗೆ ಲೈಂಗಿಕ ಕಿರುಕುಳ: ಡಿಎಂಕೆ ಕಾರ್ಯಕರ್ತ ಬಂಧನ
“ಕೇವಲ ಹೋಗಿ ಆನಂದಿಸುವುದಕ್ಕಿಂತ ಹೆಚ್ಚಾಗಿ, ಇಲ್ಲಿಗೆ (ಯುಎಸ್‌ಎಯಲ್ಲಿ) ಬರಲು ಇನ್ನೊಂದು ಕಾರಣವಿದೆ. ಏಕೆಂದರೆ ವಿಶ್ವಕಪ್ ಬರಲಿದೆ ಎಂದು ನಿಮಗೆ ತಿಳಿದಿದೆ. ಜೂನ್ ನಲ್ಲಿ, ವಿಶ್ವದ ಈ ಭಾಗದಲ್ಲಿ ಟಿ 20 ವಿಶ್ವಕಪ್ ನಡೆಯಲಿದೆ. ಆದ್ದರಿಂದ, ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ ಎಂದು ತಿಳಿದಿದೆ. ಆದ್ದರಿಂದ ನಾವು ಅದನ್ನು ಎದುರು ನೋಡುತ್ತಿದ್ದೇವೆ” ಎಂದು ರೋಹಿತ್ ವೀಡಿಯೊದಲ್ಲಿ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಟಿ20 ತಂಡ ಮುನ್ನಡೆಸುತ್ತಿರುವಾಗ ರೋಹಿತ್ ಶರ್ಮಾ ಅವರು ಏಕದಿನ ಮತ್ತು ಟೆಸ್ಟ್ ತಂಡವನ್ನು ಮಾತ್ರ ಮುನ್ನಡೆಸುತ್ತಿದ್ದಾರೆ.