Advertisement

ಮೋದಿ ವಿರುದ್ಧ ವೈಯಕ್ತಿಕ ದಾಳಿ ಇಲ್ಲ;ಪ್ರಶ್ನೆ ಕೇಳದೆ ಬಿಡಲ್ಲ: ರಾಹುಲ್

05:38 PM May 03, 2018 | udayavani editorial |

ಬಿದರೆ : ”ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾನೆಂದೂ ವೈಯಕ್ತಿಕ ದಾಳಿ ಮಾಡಲ್ಲ; ಆದರೆ ಜ್ವಲಂತ ವಿಷಯಗಳಿಗೆ ಸಂಬಂಧಿಸಿ  ಅವರಿಗೆ ಪ್ರಶ್ನೆ ಕೇಳದೇ ಬಿಡುವುದಿಲ್ಲ; ಅದು ನನ್ನ ಹಕ್ಕು” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಂದಿಲ್ಲಿ ಹೇಳಿದರು. 

Advertisement

ಬಿದರೆ ಜಿಲ್ಲೆಯಲ್ಲಿಂದು ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ರಾಹುಲ್‌ ಗಾಂಧಿ, “ಪ್ರಧಾನಿ ಮೋದಿ ಅವರು ನನ್ನ ಬಗ್ಗೆ ಏನೇ ಹೇಳಲಿ, ನಾನಂತೂ ಅವರನ್ನು ವೈಯಕ್ತಿಕವಾಗಿ ಟೀಕಿಸುವುದಿಲ್ಲ; ಅವರು ದೇಶದ ಪ್ರಧಾನಿಯಾಗಿದ್ದಾರೆ ಎನ್ನುವುದನ್ನು ಮರೆಯುವುದಿಲ್ಲ; ಹಾಗಿದ್ದರೂ ಅವರಿಗೆ ಪ್ರಶ್ನೆ ಕೇಳುವುದನ್ನು ನಾನು ನಿಲ್ಲಿಸುವುದಿಲ್ಲ” ಎಂದು ಹೇಳಿದರು.

#WATCH: While addressing a rally in Bidar, Rahul Gandhi says, ‘No matter what he (PM Modi) says about me, I will never make a personal attack on him as he is the PM of the country, but I can ask him questions.’ #KarnatakaElections2018 pic.twitter.com/Ke8gr1Zedj

— ANI (@ANI) May 3, 2018

Advertisement

ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ವಿರುದ್ಧ ಸರ್ವಾಂಗೀಣ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ರಾಹುಲ್‌, “ಪ್ರಧಾನಿ ತಮಗೆ ತೋಚಿದ್ದನ್ನು ಹೇಳಲು ಸ್ವತಂತ್ರರಿದ್ದಾರೆ; ಆದರೆ ಅವರು ಹೇಳುವ ಮಾತುಗಳಲ್ಲಿ ಸತ್ಯ ಮತ್ತು ತೂಕ ಇರುವುದು ಅಗತ್ಯ’ ಎಂದು ತಿರುಗೇಟು ನೀಡಿದರು. 

ಮೋದಿ ಅವರು ದೇಶದ ಜನತೆಗೆ ಭಾರೀ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾರೆ; ಆದರೆ ಅವುಗಳನ್ನು ಈಡೇರಿಸುವಲ್ಲಿ ವಿಫ‌ಲರಾಗುತ್ತಾರೆ ಎಂದು ರಾಹುಲ್‌ ದೂರಿದರು. 

ಮೋದಿ ಅವರು ಕರ್ನಾಟಕದ ರೈತರ ಬಗ್ಗೆ, ಯುವ ಜನರ ಬಗ್ಗೆ ಮಾತೇ ಆಡುವುದಿಲ್ಲ; ಹಾಗಾಗಿ ಅವರು ನನ್ನ ವಿರುದ್ಧ ವೈಯಕ್ತಿಕ ದಾಳಿಗೆ ಮುಂದಾಗಿದ್ದಾರೆ ಎಂದು ರಾಹುಲ್‌ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next