Advertisement
ಬಿಜೆಪಿ ಜತೆಗಿನ ನಾಲ್ಕು ವರ್ಷಗಳ ಮೈತ್ರಿ ಮುರಿದು ಎನ್ ಡಿಎ ನಿಂದ ಹೊರ ಬಂದು ಮೂರು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. 2024ರ ಲೋಕಸಭಾ ಚುನಾವಣೆಗೆ ಪ್ರತ್ಯೇಕ ಮೈತ್ರಿಕೂಟವನ್ನು ಮುನ್ನಡೆಸಲಿದೆ ಎಂದು ಎಐಎಡಿಎಂಕೆ ಹೇಳಿಕೊಂಡಿದೆ.
Related Articles
Advertisement
ಇದನ್ನೂ ಓದಿ:Odi World Cup; ಆಸೀಸ್ ಗೆ ಸಂಕಷ್ಟ; ತಂಡದಿಂದ ಇಬ್ಬರು ಆಲ್ ರೌಂಡರ್ ಗಳು ಬಹುತೇಕ ಔಟ್
ನಂತರ ಎನ್‌ಡಿಎ ಸೇರುವ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುನುಸಾಮಿ, “ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಇದೊಂದು ನಾಟಕ ಎಂದು ಹೇಳುತ್ತಿದ್ದಾರೆ, ನಾವು ಬಿಜೆಪಿಯೊಂದಿಗೆ ಸಂಬಂಧವನ್ನು ಮುರಿದ ನಂತರ ಅವರು ಎದುರಿಸುತ್ತಿರುವ ಭಯದಿಂದ ಅವರು ಈ ರೀತಿ ಮಾತನಾಡುತ್ತಿದ್ದಾರೆ” ಎಂದು ಹೇಳಿದರು.
ಯಾವುದೇ ಹಂತದಲ್ಲೂ ನಾವು ಎನ್‌ಡಿಎ ಸೇರುವುದಿಲ್ಲ ಆದರೆ ಎಡಪಾಡಿ ಕೆ ಪಳನಿಸಾಮಿ ನೇತೃತ್ವದ ಹೊಸ ಮೈತ್ರಿಕೂಟವನ್ನು ರಚಿಸುತ್ತೇವೆ ಎಂದು ಮುನುಸಾಮಿ ಸ್ಪಷ್ಟಪಡಿಸಿದ್ದಾರೆ.