ಬೆಂಗಳೂರು : 2.84 ಕೋಟಿ ರೂಪಾಯಿ ಅವ್ಯವಾಹಾರದ ಆರೋಪದಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಇಂಡ್ ಸಿಂಡ್ ಕಂಪನಿಯೊಂದಿಗೆ ನಿವೇಶನ ಖರೀದಿ ವಿಚಾರಕ್ಕೆ ಸಂಬಂಧಿಸಿ ಕೃಷ್ಣ ಎಂಬುವವರು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ವಿರುದ್ಧ ದೂರು ನೀಡಿದ್ದರು. 4 ನೇ ಎಪಿಎಂಸಿ ನ್ಯಾಯಾಲಯ ದೂರು ದಾಖಲಿಸಿ, ತನಿಖೆ ಕೈ ಕೊಳ್ಳುವಂತೆ ಸೂಚಿಸಿತ್ತು.
ಕಟ್ಟಾ ಪ್ರತಿಕ್ರಿಯೆ
ಮಾಧ್ಯಮಗಳಲ್ಲಿ ನನ್ನ ವಿರುದ್ಧ ಪ್ರಸಾರವಾಗಿರುವ ಸುದ್ಧಿ ಸತ್ಯಕ್ಕೆ ದೂರವಾದದ್ದು. ರಾಜಕೀಯ ದುರುದ್ದೇಶದಿಂದ ಕೃಷ್ಣ ಎನ್ನುವವರು ನನ್ನ ವಿರುದ್ಧ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ. ರಾಜಕೀಯವಾಗಿ ನನ್ನನ್ನು ಮುಗಿಸಲು ವಿರೋಧಿಗಳ ಕುತಂತ್ರದಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಹೊರಿಸಿ ನನ್ನ ವಿರುದ್ಧ ದೂರನ್ನು ನೀಡಲಾಗಿದೆ.
ಇಂಡ್ ಸಿಂಡ್ ಕಂಪನಿಯ ಬಗ್ಗೆ ಮಾಹಿತಿಯಿದೆ, ಆದರೆ ಕಂಪನಿಯ ಜೊತೆ ಎಂದಿಗೂ ನಾನೂ ವ್ಯವಹಾರ ನಡೆಸಿಲ್ಲ. ಹೀಗಿರುವಾಗ ಕಂಪನಿಗೆ ವಂಚಿಸುವ ಪ್ರಶ್ನೆಯೇ ಇಲ್ಲ. ನನಗೆ ನ್ಯಾಯಾಲಯದಲ್ಲಿ ನಂಬಿಕೆಯಿದ್ದು ರಾಜಕೀಯ ಪಿತೂರಿಯಿಂದ ನನ್ನ ವಿರುದ್ಧ ದಾಖಲಾಗಿರುವ ಎಫ್.ಐ.ಆರ್ ನ್ನು ಪ್ರಶ್ನಿಸುವ ಮೂಲಕ ನ್ಯಾಯಲಯದಲ್ಲಿ ಕಾನೂನು ಹೋರಾಟ ನಡೆಸುತ್ತೇನೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.