Advertisement
ಸದ್ಯದಲ್ಲೇ ಲಸಿಕೆಯಿಂದಾಗಿ ಹಾಗೂ ವೈರಸ್‌ಗೆ ತೆರೆಯಲ್ಪಡುವುದರಿಂದ ವಯಸ್ಕರಲ್ಲಿ ಕೋವಿಡ್ ಪ್ರತಿಕಾಯ ಸೃಷ್ಟಿಯಾಗಲಿದೆ. ಹೀಗಾಗಿ, ವಯಸ್ಕರಿಗೆ ಕೋವಿಡ್ ಭೀತಿಯೂ ಕ್ರಮೇಣ ಕಡಿಮೆಯಾಗಲಿದೆ. ಆಗ ಮಕ್ಕಳು ಮಾತ್ರ ಬೇಗನೆ ಸೋಂಕಿಗೆ ತುತ್ತಾಗುತ್ತಾರೆ. ಆದರೆ ಕೋವಿಡ್ ಸೋಂಕಿನ ಗಂಭೀರತೆಯು ಮಕ್ಕಳಲ್ಲಿ ಸಾಮಾನ್ಯವಾಗಿ ಕಡಿಮೆಯೇ ಇರುವುದರಿಂದ ಮುಂದಿನ ದಿನಗಳಲ್ಲಿ ಇದು ಮಕ್ಕಳಿಗೆ ಬರುವ ಸಾಮಾನ್ಯ ಶೀತ-ಜ್ವರದಂತೆ ಆಗಲಿದೆ ಎಂದು ನಾರ್ವೆಯ ಓಸ್ಲೋ ವಿವಿಯ ಒಟ್ಟರ್ ಜಾರ್ನ್ ಸ್ಟಡ್ ಹೇಳಿದ್ದಾರೆ. ಈ ಹಿಂದೆಯೂ ಹಲವು ರೀತಿಯ ಸೋಂಕುಗಳು ಇದೇ ಮಾದರಿಯಲ್ಲಿ ಬದಲಾಗಿವೆ ಎಂದೂ ಅವರು ತಿಳಿಸಿದ್ದಾರೆ.
ದೇಶದಲ್ಲಿ ಬುಧವಾರದಿಂದ ಗುರುವಾರಕ್ಕೆ 41,195 ಮಂದಿಗೆ ಸೋಂಕು ದೃಢ ಪಟ್ಟು, 490 ಮಂದಿ ಸಾವಿಗೀಡಾಗಿದ್ದಾರೆ. ಸಕ್ರಿಯ ಸೋಂಕಿ ತರ ಸಂಖ್ಯೆ 3,87,987ಕ್ಕೇರಿಕೆಯಾಗಿದೆ. ಸತತ 5 ದಿನಗಳಿಂದಲೂ ಇದು ಇಳಿಮುಖವಾಗಿತ್ತು. ಇನ್ನು, ಕೇರಳದಲ್ಲಿ ಗುರುವಾರ 21,445 ಪ್ರಕ ರಣಗಳು ಪತ್ತೆಯಾಗಿ, 160 ಸಾವು ಸಂಭವಿಸಿವೆ.
Related Articles
ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಸಂಬಂಧಿ ನಿರ್ಬಂಧವನ್ನು ಆ.30ರವರೆಗೆ ವಿಸ್ತರಣೆ ಮಾಡಲಾಗಿದೆ. 3ನೇ ಅಲೆಯ ಭೀತಿ ಇರುವ ಕಾರಣ ಸ್ಥಳೀಯ ರೈಲುಗಳ ಸಂಚಾರ ಆರಂಭಿಸಿಲ್ಲ. ರಾತ್ರಿ ಕರ್ಫ್ಯೂ ಸ್ವಲ್ಪ ಮಟ್ಟಿಗೆ ಸಡಿಲಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
Advertisement