ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪೂರ್ವಜರ ಮನೆ ಸನಾತನ ಶಾಲೆಯಾಗಿ ಪರಿವರ್ತನೆಯಾಗಲಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಮುಂಬೈನ ನ್ಯಾಯವಾದಿ ಅಜಯ ಶ್ರೀವಾಸ್ತವ 11.20 ಲಕ್ಷ ರೂ. ನೀಡಿ ಅದನ್ನು ಖರೀದಿಸಿದ್ದರು. ಮರಾಠಿ ಸುದ್ದಿವಾಹಿನಿಯೊಂದರ ಜತೆಗೆ ಮಾತನಾಡಿದ ಅವರು, ತಮ್ಮ ಹೊಸ ಯೋಜನೆಯ ವಿವರ ನೀಡಿದ್ದಾರೆ.
ಇದನ್ನೂ ಓದಿ:ಯಲ್ಲಾಪುರ: ರಾಸಾಯನಿಕ ಟ್ಯಾಂಕರ್ ಪಲ್ಟಿ ಬಿದ್ದು ಹೊತ್ತಿಕೊಂಡ ಬೆಂಕಿ
ಮಹಾರಾಷ್ಟ್ರದ ರತ್ನಗಿರಿಯಲ್ಲಿರುವ ಮನೆಯಲ್ಲಿ ದಾವೂದ್ ತನ್ನ ಬಾಲ್ಯ ಕಳೆದಿದ್ದ. 1980ರಲ್ಲಿ ಆ ಮನೆಯಲ್ಲಿ ದಾವೂದ್ ವಾಸವಿದ್ದ. ನಂತರ ಅವರ ಸಹೋದರಿಯರ ಪೈಕಿ ಒಬ್ಬರು ಅಲ್ಲಿ ವಾಸವಿದ್ದರು. ಅವರೂ ಅಸುನೀಗಿದ ಬಳಿಕ ಅಲ್ಲಿ ಯಾರೂ ವಾಸಿಸುತ್ತಿರಲಿಲ್ಲ.
ಆ ಮನೆಯನ್ನು 2020ರ ನವೆಂಬರ್ ನಲ್ಲಿ ಸ್ಮಗ್ಲರ್ಸ್ ಆ್ಯಂಡ್ ಫಾರಿನ್ ಎಕ್ಸ್‌ಚೇಂಜ್ ಮ್ಯಾನಿ ಪ್ಯುಲೇಟರ್ಸ್ ಕಾಯ್ದೆ(ಎಸ್ ಎ ಎಫ್ ಇಎಂಎ) ವ್ಯಾಪ್ತಿಯಲ್ಲಿ ಹರಾಜು ಹಾಕಲಾಗಿತ್ತು. ಅಜಯ್ ಅವರು ದಾವೂದ್ ಇಬ್ರಾಹಿಂನ ಪೂರ್ವಜರ ಮನೆ ಖರೀದಿಸಿದ್ದರು.
2023ರಿಂದ ಪಿಎಚ್.ಡಿ ಅನ್ವಯ
ನವದೆಹಲಿ: ದೇಶದ ವಿವಿಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರ ನೇಮಕ ಪಡೆದುಕೊಳ್ಳಲು ಅಗತ್ಯವಾಗಿರುವ ಪಿಎಚ್.ಡಿ ಪದವಿ ಕಡ್ಡಾಯ ನಿಯಮ ಸಡಿಲಿಕೆ ಮಾಡಲಾಗಿದೆ.
ಸೋಂಕಿನ ಹಿನ್ನೆಲೆಯಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸುವಲ್ಲಿ ಅನಾನುಕೂಲಗಳು ಎದುರಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಜು.1ರಿಂದಲೇ ಕಡ್ಡಾಯವಾಗಬೇಕಾಗಿದ್ದ ಪಿಎಚ್.ಡಿಯನ್ನು 2023-24ರ ಜು.1ರಿಂದ ಅನ್ವಯಗೊಳಿಸ ಲಾಗುತ್ತದೆ ಎಂದು ಯುಜಿಸಿ ಮಂಗಳವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ಈ ಕ್ರಮವನ್ನು ದೆಹಲಿ ವಿವಿ ಪ್ರಾಧ್ಯಾಪಕರ ಒಕ್ಕೂಟ ಸ್ವಾಗತಿಸಿದೆ.