Advertisement

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

09:34 PM Oct 06, 2024 | Team Udayavani |

ಹೊಸದಿಲ್ಲಿ: ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಎನ್‌ಡಿಎ(NDA) ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ರವಿವಾರ(ಅ6) ಸವಾಲು ಹಾಕಿದ್ದು, ಈ ಬೇಡಿಕೆ ಈಡೇರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

Advertisement

‘ಜನತಾ ಕಿ ಅದಾಲತ್’ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿಯ “ಡಬಲ್ ಇಂಜಿನ್” ಸರಕಾರಗಳು ರಾಜ್ಯಾದ್ಯಂತ ವಿಫಲವಾಗಿವೆ ಎಂದರು. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬಿಜೆಪಿಯನ್ನು ಹೊರಹಾಕುವ ಮುನ್ಸೂಚನೆ ಸಿಕ್ಕಿದೆ ಎಂದರು.

ಡಬಲ್ ಎಂಜಿನ್ ಮಾದರಿ ಎಂದರೆ ಡಬಲ್ ಲೂಟಿ ಮತ್ತು ಡಬಲ್ ಭ್ರಷ್ಟಾಚಾರ. ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಆಡಳಿತವಿರುವ ಎಲ್ಲಾ 22 ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡುವಂತೆ ನಾನು ಪ್ರಧಾನಿ ಮೋದಿಗೆ ಸವಾಲು ಹಾಕುತ್ತೇನೆ. ಅವರು ಮಾಡಿದರೆ ನಾನು ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದರು.

ದೆಹಲಿಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಇದು ಎಲ್‌ಜಿ ಆಡಳಿತದಲ್ಲಿದೆ ಎಂದ ಮಾಜಿ ಸಿಎಂ ಬಸ್ ಮಾರ್ಷಲ್‌ಗಳು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳನ್ನು ತೆಗೆದುಹಾಕುವುದರ ಜತೆಗೆ ದೆಹಲಿಯಲ್ಲಿ ಗೃಹರಕ್ಷಕರ ವೇತನವನ್ನು ಸ್ಥಗಿತಗೊಳಿಸಿರುವುದನ್ನು ಉಲ್ಲೇಖಿಸಿ ಬಿಜೆಪಿ ಬಡವರ ವಿರೋಧಿ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next