ಶಾರ್ಜಾ: ಮೂರು ಪಂದ್ಯ ಗಳ ಏಕದಿನ ಸರಣಿಗಾಗಿ ಯುಎಇಗೆ ಪ್ರವಾಸ ಬಂದಿರುವ ವೆಸ್ಟ್ ಇಂಡೀಸ್ ಮೊದಲ ಮುಖಾಮುಖಿಯನ್ನು 7 ವಿಕೆಟ್‌ಗಳಿಂದ ಗೆದ್ದಿದೆ. ಆರಂಭ ಕಾರ ಬ್ರ್ಯಾಂಡನ್ ಕಿಂಗ್ ಅವರ ಸೆಂಚುರಿ ವಿಂಡೀಸ್ ಸರದಿಯ ಆಕರ್ಷಣೆ ಆಗಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಯುಎಇ 47.1 ಓವರ್‌ಗಳಲ್ಲಿ 202ಕ್ಕೆ ಸರ್ವಪತನ ಕಂಡಿತು. ವೆಸ್ಟ್ ಇಂಡೀಸ್ 35.2 ಓವರ್‌ಗಳಲ್ಲಿ 3 ವಿಕೆಟಿಗೆ 206 ರನ್ ಬಾರಿಸಿತು. ಬ್ರ್ಯಾಂಡನ್ ಕಿಂಗ್ ಎಸೆತಕ್ಕೊಂದರಂತೆ 112 ರನ್ ಬಾರಿಸಿದರು. ಈ ಆಕರ್ಷಕ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 4 ಸಿಕ್ಸರ್ ಒಳಗೊಂಡಿತ್ತು. ಇದು ಏಕದಿನದಲ್ಲಿ ಕಿಂಗ್ ಬಾರಿಸಿದ ಮೊದಲ ಶತಕ. ಮತ್ತೋರ್ವ ಆರಂಭಕಾರ ಜಾನ್ಸನ್ ಚಾರ್ಲ್ಸ್ 24, ಶಮರ್ ಬ್ರೂಕ್ಸ್ 44 ರನ್ ಹೊಡೆದರು.
ಬ್ಯಾಟಿಂಗ್ ಆಯ್ದುಕೊಳ್ಳುವ ಯುಎಇ ನಿರ್ಧಾರ ಫಲ ಕೊಡಲಿಲ್ಲ. ನಾಯಕನೂ ಆಗಿರುವ ಆರಂಭಕಾರ ಮುಹಮ್ಮದ್ ವಾಸೀಮ್ ಖಾತೆ ತೆರೆ ಯದೆ ಹೋದರೆ, ಇವರ ಜತೆಗಾರ ಆರ್ಯಾಂಶ್ ಶರ್ಮ ಐದೇ ರನ್ನಿಗೆ ಔಟಾದರು. ಅಲಿ ನಾಸೀರ್ 48, ವೃತ್ಯ ಅರವಿಂದ್ 40 ರನ್ ಮಾಡಿದ ಕಾರಣ ತಂಡದ ಮೊತ್ತ ಇನ್ನೂರರ ಗಡಿ ದಾಟುವಂತಾಯಿತು. ವಿಂಡೀಸ್ ಪರ ಕೀಮೊ ಪೌಲ್ 3 ವಿಕೆಟ್ ಉರುಳಿಸಿದರು.ಸರಣಿಯ ದ್ವಿತೀಯ ಪಂದ್ಯ ಮಂಗಳವಾರ ರಾತ್ರಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ಯುಎಇ-47.1 ಓವರ್‌ಗಳಲ್ಲಿ 202 (ಅಲಿ ನಾಸೀರ್ 48, ವೃತ್ಯ ಅರವಿಂದ್ 40, ಆಸಿಫ್ ಖಾನ್ 27, ಕೀಮೊ ಪೌಲ್ 34ಕ್ಕೆ 3, ಯಾನಿಕ್ ಕರಿಯ 26ಕ್ಕೆ 2, ಡೊಮಿನಿಕ್ ಡ್ರೇಕ್ಸ್ 29ಕ್ಕೆ 2, ಒಡೀನ್ ಸ್ಮಿತ್ 40ಕ್ಕೆ 2). ವೆಸ್ಟ್ ಇಂಡೀಸ್-35.2 ಓವರ್‌ಗಳಲ್ಲಿ 3 ವಿಕೆಟಿಗೆ 206 (ಕಿಂಗ್ 112, ಬ್ರೂಕ್ಸ್ 44, ಚಾರ್ಲ್ಸ್ 24, ರೋಹನ್ ಮುಸ್ತಾಫ 22ಕ್ಕೆ 1).
ಪಂದ್ಯಶ್ರೇಷ್ಠ: ಬ್ರ್ಯಾಂಡನ್ ಕಿಂಗ್.