Advertisement
ಮಂಗಳವಾರ ಪರ್ತ್‌ನಲ್ಲಿ ನಡೆದ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ವೆಸ್ಟ್ ಇಂಡೀಸ್ 6 ವಿಕೆಟಿಗೆ 220 ರನ್ ಪೇರಿಸಿದರೆ, ಆಸ್ಟ್ರೇಲಿಯ 5 ವಿಕೆಟಿಗೆ 183 ರನ್ ಮಾಡಿತು.9 ಓವರ್ ವೇಳೆ 79 ರನ್ನಿಗೆ 5 ವಿಕೆಟ್ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತೀವ್ರ ಸಂಕಟದಲ್ಲಿತ್ತು. ಆಗ ಜತೆಗೂಡಿದ ರುದರ್‌ಫೋರ್ಡ್ ಮತ್ತು ರಸೆಲ್ ಆಸೀಸ್ ಬೌಲಿಂಗ್ ದಾಳಿಯನ್ನು ಪುಡಿಗಟ್ಟುತ್ತ ಸಾಗಿದರು. ಸ್ಫೋಟಕ ಬ್ಯಾಟಿಂಗ್ ಮೂಲಕ ವಿಂಡೀಸ್ ಮೊತ್ತವನ್ನು ಏರಿಸುತ್ತ ಹೋದರು. ಪರ್ತ್ ಅಂಗಳದಲ್ಲಿ ರನ್ ಪ್ರವಾಹವೇ ಹರಿದು ಬಂತು. ರುದರ್‌ಫೋರ್ಡ್ 40 ಎಸೆತಗಳಿಂದ 67 ರನ್ ಬಾರಿಸಿದರೆ (5 ಫೋರ್, 5 ಸಿಕ್ಸರ್), ರಸೆಲ್ ಕೇವಲ 29 ಎಸೆತ ಎದುರಿಸಿ 71 ರನ್ ಕಲೆಹಾಕಿದರು. ಸಿಡಿಸಿದ್ದು 4 ಬೌಂಡರಿ ಹಾಗೂ 7 ಸಿಕ್ಸರ್.
ಆಸ್ಟ್ರೇಲಿಯದ ಚೇಸಿಂಗ್ ವೇಳೆ ಡೇವಿಡ್ ವಾರ್ನರ್ ಸಿಡಿದು ನಿಂತರು. 49 ಎಸೆತಗಳಿಂದ 81 ರನ್ ಬಾರಿಸಿ (9 ಬೌಂಡರಿ, 3 ಸಿಕ್ಸರ್) ತವರಲ್ಲಿ ಆಡಿದ ಅಂತಿಮ ಅಂತಾರಾಷ್ಟ್ರೀಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಜತೆಗೆ ಸರಣಿಶ್ರೇಷ್ಠ ಗೌರವವೂ ಒಲಿದು ಬಂತು.
Related Articles
Advertisement
ಪಂದ್ಯಶ್ರೇಷ್ಠ: ಆ್ಯಂಡ್ರೆ ರಸೆಲ್. ಸರಣಿಶ್ರೇಷ್ಠ: ಡೇವಿಡ್ ವಾರ್ನರ್.