Advertisement

ಹಾರ್ದಿಕ್ ಯಾಕೆ ಹಳೇ ಸಿಸ್ಟಂ ಬದಲಾಯಿಸಬೇಕು? ಜಡೇಜಾ ಪ್ರಶ್ನೆಗೆ ಕಾರ್ತಿಕ್ ಉತ್ತರ

04:55 PM Jan 06, 2023 | |

ಪುಣೆ: ಕಳೆದ ಟಿ20 ವಿಶ್ವಕಪ್ ನಲ್ಲಿ ಸೋಲನುಭವಿಸಿದ ಬಳಿಕ ಭಾರತ ಕ್ರಿಕೆಟ್ ತಂಡ ಟಿ20 ಕ್ರಿಕೆಟ್‌ ನಲ್ಲಿ ಹೊಸ ಪ್ರಯೋಗವನ್ನು ಪ್ರಾರಂಭಿಸಿದೆ, ಯುವ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರನ್ನು ತಂಡದ ಪೂರ್ಣ ಸಮಯದ ನಾಯಕ ಎಂದು ಹೆಸರಿಸಲಾಗಿಲ್ಲವಾದರೂ, ರೋಹಿತ್ ಶರ್ಮಾ ಕೆಳಗಿಳಿದ ನಂತರ ಭಾರತ ತಂಡವನ್ನು ಕಡಿಮೆ ಸ್ವರೂಪದಲ್ಲಿ ಮುನ್ನಡೆಸಲು ಆಲ್ ರೌಂಡರ್ ಅರ್ಹ ಉತ್ತರಾಧಿಕಾರಿ ಎಂದು ಕ್ರಿಕೆಟ್ ವಲಯದಲ್ಲಿ ಮಾತುಗಳಿವೆ. ಆದರೆ ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರು ‘ಹಳೆಯ ವ್ಯವಸ್ಥೆಯನ್ನು’ ಬದಲಾಯಿಸುವ ಅಗತ್ಯವನ್ನು ಪ್ರಶ್ನಿಸಿದ್ದಾರೆ.

Advertisement

“ಪ್ರತಿಯೊಬ್ಬ ನಾಯಕನು ಬಂದಾಗ ಹಳೇಯ ಪದ್ದತಿಯನ್ನು ಬದಲಾಯಿಸಲು ನೋಡುತ್ತಾನೆ. ವಿರಾಟ್ ಕೊಹ್ಲಿ ಅವರು ಭಾರತ ತಂಡವನ್ನು ಆಡುವ ವಿಧಾನವನ್ನು ಬದಲಾಯಿಸಲು ಬಯಸಿದ್ದರು. ರೋಹಿತ್ ಶರ್ಮಾ ಅವರು ಅಧಿಕಾರ ವಹಿಸಿಕೊಂಡರು, ಅವರು ಭಾರತ ತಂಡ ಆಡಿದ ವಿಧಾನವನ್ನು ಬದಲಾಯಿಸಲು ಬಯಸಿದ್ದರು. ಈಗ ಹಾರ್ದಿಕ್ ಪಾಂಡ್ಯ ಅವರು ಅಧಿಕಾರ ವಹಿಸಿಕೊಂಡಿದ್ದಾರೆ, ಅವರು ಭಾರತ ತಂಡವನ್ನು ಬದಲಾಯಿಸಬೇಕೆಂದು ಬಯಸುತ್ತಾರೆ” ಎಂದು ಜಡೇಜಾ ಕೇಳಿದರು.

ಇದನ್ನೂ ಓದಿ:ತಮ್ಮ ಇಬ್ಬರು ವಿಕಲಚೇತನ ಹೆಣ್ಣುಮಕ್ಕಳೊಂದಿಗೆ ಸುಪ್ರೀಂಗೆ ಆಗಮಿಸಿ ಅಚ್ಚರಿಮೂಡಿಸಿದ ಸಿಜೆಐ!

“ಹೊಸದಾಗಿ ಬಂದವರೆಲ್ಲ ಯಾಕೆ ಹಳೇ ಸಿಸ್ಟಂ ಚೇಂಜ್ ಮಾಡಬೇ? ಅಲ್ಲಿ ಸಿಸ್ಟಂ ಸಮಸ್ಯೆ ಏನು?” ಜಡೇಜಾ ಪ್ರಶ್ನಿಸಿದರು.

ಇದೇ ಚರ್ಚೆಯ ಭಾಗವಾಗಿದ್ದ ಭಾರತದ ಮತ್ತೋರ್ವ ಕ್ರಿಕೆಟಿಗ ದಿನೇಶ್ ಕಾರ್ತಿಕ್, “ಇತ್ತೀಚಿನ ದಿನಗಳಲ್ಲಿ ಭಾರತವು ಐಸಿಸಿ ಈವೆಂಟ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ ಕಾರಣ ವಿಧಾನದಲ್ಲಿ ಬದಲಾವಣೆಗಳು ಬರುತ್ತಿವೆ’ ಎಂದು ಸಲಹೆ ನೀಡಿದರು.

Advertisement

ನಾವು ವಿಶ್ವದ ಅತ್ಯುತ್ತಮ ಟಿ20 ಲೀಗ್ ಹೊಂದಿದ್ದೇವೆ, ನಾವು ಅತ್ಯುತ್ತಮ ಆಟಗಾರರು, ಅತ್ಯಂತ ನುರಿತ ಆಟಗಾರರು ಮತ್ತು ಅತ್ಯುತ್ತಮ ಬೆಂಚ್ ಬಲವನ್ನು ಹೊಂದಿದ್ದೇವೆ. ಆದರೆ ಕಳೆದೊಂದು ದಶಕದಿಂದ ನಾವು ಐಸಿಸಿ ಕೂಟದಲ್ಲಿ ಗೆದ್ದಿಲ್ಲ, ಬಹುಶಃ ವಿಧಾನದಲ್ಲಿ ಏನಾದರೂ ತಪ್ಪಾಗಿರಬಹುದು. ಹೀಗಾಗಿ ಅದನ್ನು ಬದಲಾಯಿಸಬೇಕಾಗಿದೆ, ”ಕಾರ್ತಿಕ್ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next