Advertisement
ಸಾಮಾನ್ಯವಾಗಿ ಮನುಷ್ಯ ಬೇರೊಬ್ಬರ ಮುಂದೆ ಕೈಚಾಚಿ ಬೇಡುವುದು ಎಂದರೆ ಅದಕ್ಕಿಂತ ಕಷ್ಟವಾದ ಕೆಲಸ ಮತ್ತೂಂದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಿಕ್ಷುಕರೇ. ವಿದ್ಯಾವಂತರು ಸಹ ಕೆಲಸಕ್ಕಾಗಿ ಮತ್ತೂಬ್ಬರ ಮುಂದೆ ಕೈಚಾಚಲೇ ಬೇಕಾಗಿದೆ. ಇಂತಹ ಪ್ರಪಂಚದಲ್ಲಿ ಬಡತನದ ಬೇಗೆಯಿಂದ ಬೇಯುತ್ತಿರುವ ಹೊತ್ತಿನ ಊಟಕ್ಕೂ ಕಷ್ಟ ಪಡುವ ಜನರು ಭಿಕ್ಷೆ ಬೇಡದೆ ಇರುವರೇ?
Related Articles
Advertisement
ಕೆಲವರು ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡಿದರೆ ಮತ್ತೆ ಕೆಲವರು ದುಶ್ಚಟಗಳಿಗಾಗಿ ಭಿಕ್ಷೆ ಬೇಡುವರು. ಎಲ್ಲರನ್ನು ಸಮನಾಗಿ ಕಾಣಬೇಕು ಎಂದು ಭಾಷಣ ಮಾಡುವವರು ಬಿಕ್ಷುಕ ಎದುರಿಗೆ ಬಂದರೆ ಪಕ್ಕಕ್ಕೆ ಸರಿಯುವುದಾದರೂ ಯಾಕೆ? ದೂರದಿಂದಲೇ ಭಿಕ್ಷೆ ನೀಡಿ ಹೋಗು ಎಂಬ ಜನರು ಬಡವರ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವುದಾದರೂ ಯಾಕೆ ? ಎಂಬುದು ನನಗೆ ಇಂದಿಗೂ ತಿಳಿಯುತ್ತಿಲ್ಲ.
ಕೆಲವು ಕಡೆಗಳಲ್ಲಿ ಚಿಕ್ಕ ಮಕ್ಕಳು ಭಿಕ್ಷೆ ಬೇಡಿರುವುದನ್ನು ನೋಡಿಯೇ ಇರುತ್ತವೆ. ಕೆಲವೊಮ್ಮೆ ಅವರ ಮೇಲೆ ಕರುಣೆ ಮೂಡಿ ಒಂದೆರಡು ರೂಪಾಯಿ ಹೆಚ್ಚು ಕೊಟ್ಟಿದ್ದು ಉಂಟು. ಆದರೆ ಅವರು ಯಾಕೆ ಭಿಕ್ಷೆ ಬೇಡುತ್ತಿರಬಹುದು? ಎಂದು ಕೇಳುವ ತಂಟೆಗೆ ಯಾರು ಹೋಗುವುದಿಲ್ಲ. ಕೇಳಿದರೂ ನೂರಲ್ಲಿ ಒಬ್ಬರು ಅಥವಾ ಇಬ್ಬರು ಅಷ್ಟೇ. ಏಕೆಂದರೆ ಕಾರಣ ಕೇಳುವಷ್ಟು ಸಂಯಮ ಎಲ್ಲರಿಗೂ ಇರುವುದಿಲ್ಲ. ಕಾರಣ ಹುಡುಕುತ್ತಾ ಹೊರಟರೆ ಬಹಳಷ್ಟು ಬಡತನದ ಕಥೆಗಳು ದೊರೆಯುತ್ತವೆ.
ಒಟ್ಟಾರೆ ಹೇಳುವುದಾದರೆ ಕನಸುಗಳನ್ನು ಮೂಟೆ ಕಟ್ಟಿ, ಎದೆಗೂಡಿನೊಳಗೆ ನೋವುಗಳನ್ನು ಬಚ್ಚಿಟ್ಟು, ಜೀವಿಸುವ ಆಸೆಯನ್ನು ತೊರೆದು, ರಸ್ತೆ ಬದಿಯಲ್ಲಿ ಮಲಗುವ ಇವರ ಜೀವನವೇ ಬಡತನ ಸಾಲವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಸಾಯುವ ಜನರಿಗೆ ಇವರೇಕೆ ಮಾದರಿಯಾಗಬಾರದು.
ಸುಪ್ರೀತಾ ಎಸ್.ಕೆ.
ತುಮಕೂರು ವಿ.ವಿ.