Advertisement

ಸಂಯುಕ್ತಾ ಅತ್ತಿದ್ದೇಕೆ?

10:42 AM Aug 05, 2017 | |

ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಸಂಯುಕ್ತಾ ಹೆಗಡೆ, ಈ ಬಾರಿ ಕಣ್ಣೀರು ಹಾಕಿ ಸುದ್ದಿಯಲ್ಲಿದ್ದಾರೆ. ಅದೂ ವರಮಹಾಲಕ್ಷ್ಮೀ ಹಬ್ಬದಂದೇ.
ವರಮಹಾಲಕ್ಷ್ಮೀ ಹಬ್ಬದಂದು ಸಂಯುಕ್ತಾ ಹೆಗಡೆ ಅಭಿನಯದ “ಒಮ್ಮೆ ನಿಶ್ಯಬ್ಧ – ಒಮ್ಮೆ ಯುದ್ಧ’ ಎಂಬ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ.

Advertisement

ಈ ಚಿತ್ರದಲ್ಲಿ ಅವರ ಜೊತೆಗೆ ಸುಶ್ಮಿತಾ ಗೌಡ ಮತ್ತೂಬ್ಬ ನಾಯಕಿಯಾಗಿ ನಟಿಸಿದ್ದು, “ಊರ್ವಿ’ ಚಿತ್ರದಲ್ಲಿ ನಟಿಸಿದ್ದ ಪ್ರಭು, ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮುಹೂರ್ತದ ನಂತರ ಪತ್ರಿಕಾ ಛಾಯಾಗ್ರಾಹಕರು, ಪ್ರಭು, ಸಂಯುಕ್ತಾ ಮತ್ತು ಸುಶ್ಮಿತಾ ಅವರನ್ನು ಫೋಟೋಗೆ ಕರೆದಿದ್ದಾರೆ.

ಇದರಿಂದ ಅದ್ಯಾಕೋ ಬೇಸರಗೊಂಡ ಸಂಯುಕ್ತಾ, ಈ ಚಿತ್ರದ ನಾಯಕಿ ತಾನು, ಬೇರೆಯವರ ಜೊತೆಗೆ ಫೋಟೋ ತೆಗೆಸಿಕೊಳ್ಳುವುದಿಲ್ಲ ಎಂದಿದ್ದಾರೆ. ಬೇಕಾದರೆ ಅವರಿಬ್ಬರದ್ದೇ ಫೋಟೋ ತೆಗಿಯಿರಿ, ತಾನು ಈ ಫೋಟೋ ಸೆಷನ್‌ನಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಒಂದು ಸಣ್ಣ ಕಿತ್ತಾಟ ನಡೆದಿದೆ. ಆಗ ಸಂಯುಕ್ತಾ ಕಣ್ಣೀರು ಹಾಕುತ್ತಾ, ಕಂಠೀರವ ಸ್ಟುಡಿಯೋದಿಂದ ಹೊರಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗುತ್ತಿರುವುದು ಇದು ಮೊದಲೇನಲ್ಲ. “ಕಾಲೇಜ್‌ ಕುಮಾರ್‌’ ಚಿತ್ರದ ಮುಹೂರ್ತ ಸಮಾರಂಭದ ಸಂದರ್ಭದಲ್ಲೂ ಅವರ ಮತ್ತು ಪತ್ರಿಕಾ ಛಾಯಾಗ್ರಾಹಕರ ನಡುವೆ ಸಣ್ಣದಂದು ಕಿತ್ತಾಟವಾಗಿತ್ತು.

ಈಗ ಅದು ಮತ್ತೆ ರಿಪೀಟ್‌ ಆಗಿದೆ. “ಒಮ್ಮೆ ನಿಶ್ಯಬ್ಧ – ಒಮ್ಮೆ ಯುದ್ಧ’ ಚಿತ್ರವನ್ನು “ನಿತ್ಯ ಜೊತೆ ಸತ್ಯ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಾಗ್‌ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಕಿರಣ್‌ ವಾರಣಾಸಿ ಎನ್ನುವವರು ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next