ಹುಳಿಯಾರು: ಸ್ವಾತಂತ್ರ್ಯ ಪೂರ್ವದಲ್ಲೇ ತಾಲೂಕು ಕೇಂದ್ರವಾಗಿದ್ದ ಹುಳಿಯಾರನ್ನು ಇದೀಗ ಮತ್ತೆ ತಾಲೂಕು ಕೇಂದ್ರ ಮಾಡಲು ಆಳುವ ಸರ್ಕಾರಗಳು ನಿರ್ಲಕ್ಷ್ಯವಹಿಸುತ್ತಿದ್ದು, ಈ ಭಾಗದ ಜನರು ಹಾಗೂ ರಾಜಕೀಯ ನಾಯಕರು ತಮ್ಮ ಇಚ್ಛಾಶಕ್ತಿ ಹಾಗೂ ಬದ್ಧತೆ ಪ್ರದರ್ಶಿಸಿದಲ್ಲಿ ಹುಳಿಯಾರು ಮತ್ತೆ ತಾಲೂಕು ಕೇಂದ್ರವಾಗಲು ಯಾವುದೇ ಅನುಮಾನ ವಿಲ್ಲ ಎಂದು ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಎಂ.ಎಸ್.ಮಹಲಿಂಗಪ್ಪ ಅಭಿಪ್ರಾಯಿ ಸಿದರು.
ಹುಳಿಯಾರು ತಾಲೂಕು ಮಾಡಲು ಮುಂದಡಿ ಯಿಟ್ಟಿರುವ ತಾಲೂಕು ಹೋರಾಟ ಸಮಿತಿ ಮುಖಂಡರನ್ನು ಪಟ್ಟಣದಲ್ಲಿ ಭೇಟಿ ಮಾಡಿ ತಮ್ಮ ಸಲಹೆ ಸೂಚನೆ ನೀಡಿದ ಅವರು, ಹುಳಿಯಾರನ್ನು ತಾಲೂಕು ಕೇಂದ್ರ ಮಾಡಲು ಸರ್ಕಾರದ ಗಮನ ಸೆಳೆಯಲು ಇಲ್ಲಿನ ರಾಜಕೀಯ ನಾಯಕರು ವಿಫರಾಗಿದ್ದಾರೆ. ವಾಸುದೇವರಾವ್, ಹುಂಡೇಕರ್, ಗದ್ದಿಗೌಡರ್, ಎಂ.ಬಿ.ಪ್ರಕಾಶ್ ಹೀಗೆ 4 ಆಯೋಗಗಳು ತಾಲೂಕು ಮತ್ತು ಜಿಲ್ಲಾವಾರು ವಿಂಗಡಣೆ ಅಂತಿಮ ವರದಿ ಸಲ್ಲಿಸಿದ್ದರೂ ಇದು ವರೆಗೂ ಹುಳಿಯಾರು ಸ್ಥಾನಮಾನ ದೊರೆತಿಲ್ಲ ದಿರುವುದು ಇದಕ್ಕೆ ನಿದರ್ಶನ ಎಂದರು.
9 ಹೊಸ ತಾಲೂಕು: ಇದೀಗ ಮತ್ತೆ ಮೈತ್ರಿ ಸರ್ಕಾರದಲ್ಲಿ 9 ಹೊಸ ತಾಲೂಕುಗಳ ರಚನೆಗೆ ಸಚಿವ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಮನಗರ ಜಿಲ್ಲೆಯ ಹಾರೋಹಳ್ಳಿ, ಚಿಕ್ಕಬಳ್ಳಾಪುರದ ಚೇಳೂರು, ಬಾಗಲಕೋಟೆ ತೇರದಾಳ, ಚಿಕ್ಕಮಗಳೂರಿನ ಕಳಸ, ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಕುಶಾಲ ನಗರ, ವಿಜಯಪುರದ ಆಲಮೇಲ, ದಕ್ಷಿಣ ಕನ್ನಡದ ಮೂಲ್ಕಿ ಹಾಗೂ ಬೆಳಗಾವಿಯ ಯರಗಟ್ಟಿ ಹೊಸ ತಾಲೂಕುಗಳು ಅನುಮೋದನೆ ದೊರೆತಿದೆ. ಆದರೆ, ಇದೆಲ್ಲದ ಕ್ಕಿಂತ ಅರ್ಹತೆ, ಯೋಗ್ಯತೆ ಇದ್ದರೂ ಹುಳಿಯಾರು ತಾಲೂಕು ಮಾಡಲು ಸರ್ಕಾರ ಪರಿ ಗಣಿಸದಿರುವುದು ದುರಾದೃಷ್ಟ ಎಂದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಂಚಾಲಕ ಕೆಂಕೆರೆ ಸತೀಶ್ ಮಾತನಾಡಿ, ಹೋರಾಟವೊಂದೇ ಉಳಿದಿರುವ ದಾರಿಯಾಗಿದ್ದು, ಹೋರಾಟದ ಮೂಲಕವೇ ತಾಲೂಕು ಮಾಡಲು ಮುಂದಾಗೋಣ ಎಂದರು.
ಈ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಜಿ.ಎಸ್.ವೆಂಕಟಾಚಲಪತಿ ಶೆಟ್ಟಿ, ತಾಲೂಕು ಹೋರಾಟ ಸಮಿತಿ ಹೊಸಳ್ಳಿ ಅಶೋಕ್, ಹಾರ್ಡ್ವೇರ್ ಸಂಘದ ಅಧ್ಯಕ್ಷ ಬಸವರಾಜು, ಜಯ ಕರ್ನಾಟಕ ಸಂಘಟನೆ ಮೋಹನ್ ಕುಮಾರ್ ರೈ, ಪಾತ್ರೆ ಸತೀಶ್, ಬಿ.ವಿ.ಶ್ರೀನಿವಾಸ್, ರಂಗನಕೆರೆ ಮಹೇಶ್, ಶ್ರೀನಿವಾಸ ಬಾಬು ಮೊದ ಲಾದವರಿದ್ದರು.
ಶಾಸಕ ಜೆ.ಸಿ ಮಾಧುಸ್ವಾಮಿ ಅವರನ್ನು ಹುಳಿಯಾರನ್ನು ತಾಲೂಕು ಮಾಡುವ ಬಗ್ಗೆ ಸಂಪರ್ಕಿಸಿದ್ದು ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ತಾಲೂಕು ಮಾಡುವ ವಿಚಾರವಾಗಿ ಯಾರೊಬ್ಬರೂ ನನ್ನನ್ನು ಸಂಪರ್ಕಿಸಿಲ್ಲ. ಸದ್ಯಕ್ಕೆ ಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ನಂತರ ಈ ವಿಚಾರವಾಗಿ ಗಮನಹರಿಸುವುದಾಗಿ ತಿಳಿಸಿದ್ದಾರೆ.
ಡಾ.ಎಂ.ಎಸ್.ಮಹಲಿಂಗಪ್ಪ, ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ