Advertisement

ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ

12:57 AM Nov 05, 2024 | Team Udayavani |

ಮಣಿಪಾಲ: ಜಿಲ್ಲೆಯ ವಿವಿಧ ಮೀನುಗಾರಿಕೆ ಬಂದರುಗಳ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸ ಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಂಸದರ ಕಚೇರಿ ಯಲ್ಲಿ ಸೋಮವಾರ ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ವಿವಿಧ ಬಂದರುಗಳ ಪ್ರಗತಿ ಪರಿಶೀಲನೆ ನಡೆಸಿದರು.

ಕೋಡಿ ಕನ್ಯಾನ ಬಂದರಿನ ಡ್ರಜ್ಜಿಂಗ್‌ ಸಹಿತ 13.50 ಕೋ.ರೂ.ಗಳ ವಿವಿಧ ಕಾಮಗಾರಿಯ ಪ್ರಸ್ತಾವನೆಯು ಇಲಾಖೆಯ ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ಕೋಡಿಬೆಂಗ್ರೆ ಮೀನು ಹರಾಜು ಕೇಂದ್ರದ ಮೇಲ್ಛಾವಣಿ 58 ಲಕ್ಷ ರೂ.ಗಳಲ್ಲಿ ಆಗಬೇಕಿದ್ದು, ಇನ್ನೂ ಅನುದಾನ ಮಂಜೂರಾಗಿಲ್ಲ. ಈ ಎರಡು ಕಾಮಗಾರಿಗಳನ್ನು ಆದಷ್ಟು ಶೀಘ್ರ ಕೈಗೆತ್ತಿಕೊಳ್ಳಲು ಸೂಚಿಸಿದರು.

ಸ್ಥಳ ಪರಿಶೀಲನೆಗೆ ಸೂಚನೆ
ಮರವಂತೆ ಬ್ರೇಕ್‌ ವಾಟರ್‌ ಕಾಮಗಾರಿ ಪೂರ್ಣಗೊಳಿಸಲು ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.

180 ಕೋ.ರೂ. ವೆಚ್ಚದ ಹೆಜಮಾಡಿ ಬಂದರು ಕಾಮಗಾರಿ ಸಂಬಂಧ ಹೆಚ್ಚುವರಿ ಭೂ ಅನುದಾನಕ್ಕಾಗಿ 22 ಕೋ.ರೂ. ವೆಚ್ಚ ಏರಿಕೆಯಾಗಿದ್ದು, ಈ ಕಡತ ಸದ್ಯ ಹಣಕಾಸು ಇಲಾಖೆಯಲ್ಲಿದೆ. ಮೀನುಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ಹಣಕಾಸು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮೋದನೆ ಪಡೆಯಬೇಕು ಎಂದು ಸೂಚಿಸಿದರು.

Advertisement

ಮಲ್ಪೆ-ಆದಿಉಡುಪಿ ರಾಷ್ಟ್ರೀಯ ಹೆದ್ದಾರಿ; ಕಾಮಗಾರಿ ಆರಂಭಿಸಲು ಸೂಚನೆ
ಮಣಿಪಾಲ: ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿಗಳ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಶಾಸಕರಾದ ಯಶ್‌ಪಾಲ್‌ ಸುವರ್ಣ, ಸುರೇಶ್‌ ಶೆಟ್ಟಿ ಗುರ್ಮೆ ಉಪಸ್ಥಿತಿಯೊಂದಿಗೆ ಅಧಿಕಾರಿಗಳ ಸಭೆ ನಡೆಯಿತು. ಪರ್ಕಳ ಹೆದ್ದಾರಿ ಕಾಮಗಾರಿ ನ್ಯಾಯಾಲಯ ತಡೆಯಾಜ್ಞೆ ಸಂಬಂಧಿಸಿ ನ್ಯಾಯಾಲಯದ ಆದೇಶವು ಸರಕಾರದ ಪರವಾಗಿ ಬಂದಿದ್ದು, ಭೂ ಮಾಲಕರಿಗೆ ಕೂಡಲೇ ಪರಿಹಾರದ ಹಣ ನೀಡಿ ಕಾಮಗಾರಿ ಪ್ರಾರಂಭಿಸಲು ಸಂಸದರು ಸೂಚಿಸಿದರು.

ಮಲ್ಪೆ-ಆದಿ ಉಡುಪಿ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆಯ ವಿಳಂಬದಿಂದ ಕುಂಠಿತವಾಗಿದ್ದು, ಈಗಾಗಲೇ ಭೂ ಮಾಲಕರಿಗೆ ಪರಿಹಾರದ ಮೊತ್ತದ ಬಗ್ಗೆ ನೋಟಿಸ್‌ ನೀಡಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯ 214 ಕಡತಗಳ ಪೈಕಿ 19 ಸರಕಾರಿ ಜಮೀನು ಹೊರತುಪಡಿಸಿ 195 ಖಾಸಗಿ ಜಮೀನು ಮಾಲಕರ ಪೈಕಿ 51 ನೋಟೀಸ್‌ ಸ್ವೀಕರಿಸಿದ್ದು, 48 ಮಂದಿ ಪರಿಹಾರ ಮೊತ್ತ ಪಡೆಯಲು ತಮ್ಮ ದಾಖಲಾತಿಗಳನ್ನು ಒದಗಿಸಿದ್ದಾರೆ. ಬಾಕಿ ಇರುವ 144 ಜಮೀನು ಮಾಲಕರನ್ನು ಸಂಪರ್ಕಿಸಿ ನೋಟಿಸ್‌ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ನ.6 ರಿಂದಲೇ ಮಲ್ಪೆ-ಆದಿಉಡುಪಿ ಕಾಮಗಾರಿ ಆರಂಭಿಸಲು ಯಶ್‌ಪಾಲ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next