Advertisement

ಉಗ್ರ ಇಬ್ರಾಹಿಂ ವಿಳಾಸ ಪತ್ತೆಯೇ ರೋಚಕ!

12:39 AM Feb 05, 2022 | Team Udayavani |

ವಾಷಿಂಗ್ಟನ್‌: 2011ರಲ್ಲಿ ಅಲ್‌ ಕಾಯಿದಾ ಮುಖ್ಯಸ್ಥ ಒಸಾಮಾ ಬಿನ್‌ಲಾಡೆನ್‌ನನ್ನು ಹೊಡೆದುರುಳಿಸಿದ ರೀತಿಯಲ್ಲೇ ಇದೇ ಗುರುವಾರ ಮುಂಜಾನೆ ಅಮೆರಿಕ ಸೇನಾ ಪಡೆ ಐಸಿಸ್‌ ಉಗ್ರರ ಮುಖ್ಯಸ್ಥ ಅಬು ಇಬ್ರಾಹಿಂ ಅಲ್‌-ಹಶಿಮಿ ಅಲ್‌-ಖುರೇಷಿ ಯನ್ನು ಆತನ ಅಡಗುದಾಣದಲ್ಲೇ ಹೊಸಕಿಹಾಕಿದೆ. ಆದರೆ ಆತನನ್ನು ಪತ್ತೆ ಮಾಡಿದ ರೀತಿ, ಕರಾರುವಾಕ್ಕಾಗಿ ಆತನ ಅಡ ಗುದಾಣವನ್ನು ಗುರುತು ಹಾಕಿದ ರೀತಿ ಸಹ ಬಿನ್‌ ಲಾಡೆನ್‌ ಪ್ರಕರಣದಲ್ಲಾ ದಂತೆಯೇ ರೋಚಕವಾಗಿದೆ.

Advertisement

ಅಸಲಿಗೆ ಅಬು ಇಬ್ರಾಹಿಂ, ಉತ್ತರ ಸಿರಿಯಾದ ಇದ್ಲಿಬ್‌ ಪ್ರಾಂತ್ಯದ ಜೈಲೊಂದನ್ನು ತನ್ನ ವಶಕ್ಕೆ ತೆಗೆದು ಕೊಳ್ಳಲು ಆತ ಇದ್ಲಿಬ್‌ ಪ್ರಾಂತ್ಯಕ್ಕೆ ಆಗಮಿಸಿದ್ದ. ಇದನ್ನು ಇರಾಕ್‌ನ ಗುಪ್ತ ಚರ ಅಧಿಕಾರಿಗಳು ಹಾಗೂ ಸಿರಿಯಾದಲ್ಲಿರುವ ಇಸ್ಲಾಮಿಕ್‌ ಸ್ಟೇಟ್‌ ಬಂಧನ ಗೃಹಗಳಲ್ಲಿನ ವ್ಯಕ್ತಿಗಳು ಕರಾರುವಾಕ್‌ ಆಗಿ ಪತ್ತೆ ಹಚ್ಚಿದ್ದರು. ಅದೇಕೋ ಏನೋ ಇದ್ಲಿಬ್‌ ಜೈಲು ವಶ ಮಾಡಿ ಕೊಳ್ಳುವ ಉದ್ದೇಶದಿಂದ ಐಎಸ್‌ಐಎಸ್‌ ನಡೆಸಿದ್ದ ವಿಫ‌ಲ ಕಾರ್ಯಾ ಚರಣೆ ಯಲ್ಲಿ ಖುದ್ದು ಅಬು ಇಬ್ರಾಹಿಂ ಕಣಕ್ಕಿಳಿದಿದ್ದ.

ಕಾರ್ಯಾಚರಣೆ ವಿಫ‌ಲವಾದ ಕೂಡಲೇ ಆತ ಅದೇ ಪ್ರಾಂತ್ಯದ ಅಟೆ¾àಹ್‌ ಎಂಬ ನಗರದ ಹೊರವಲಯ ದಲ್ಲಿರುವ ಆಲಿವ್‌ ಮರಗಳ ತೋಪಿನ ನಡುವೆ ಇರುವ ತೋಟದ ಮನೆ ಯಲ್ಲಿ ಅಡಗಿಕೊಂಡಿದ್ದ.

ಇದನ್ನೂ ಓದಿ:38 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ಪತಿ ರಾಜ್ ಕುಂದ್ರಾ

ಇದನ್ನು ಖಚಿತವಾಗಿ ಗುರುತುಹಾಕಿ, ಗುರುವಾರ ಮುಂಜಾನೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಅಮೆರಿಕ ಸೇನೆ, ಜೆಹಾದಿಗಳು ಕಟ್ಟಡದಿಂದ ಹೊರಬನ್ನಿ. ಒಳಗೇ ಇದ್ದರೆ ಸಾಯುತ್ತೀರಿ ಎಂದು ಮೈಕ್‌ನಲ್ಲಿ ಘೋಷಿಸಿದರು.

Advertisement

ಆದರೆ ಯಾರೂ ಬರಲಿಲ್ಲ. ಹಾಗಾಗಿ ಕಾರ್ಯಾಚರಣೆಗೆ ಇಳಿದ ಕಟ್ಟಡದೊಳಗೆ ಪ್ರವೇಶಿಸಿತು. ಮೊದಲು ಕೆಳ ಅಂತಸ್ತು, ಅನಂತರ ಮೊದಲ ಅಂತಸ್ತು, ಎರಡನೇ ಅಂತಸ್ತು ವಶಪಡಿಸಿ ಕೊಂಡು ಇಬ್ರಾಹಿಂ ಇದ್ದ ಮೂರನೇ ಅಂತಸ್ತು ಪ್ರವೇಶಿಸಿದಾಗ, ಇಬ್ರಾಹಿಂ ತನ್ನ ಕುಟುಂಬ ಸದಸ್ಯರೊಂದಿಗೆ ತಾನು ಸ್ಫೋಟಿಸಿ ಕೊಂಡು ಸತ್ತ ಎಂದು ವರದಿಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next