Advertisement
ಇದನ್ನೂ ಓದಿ:ವಿಧಾನಸೌಧದ ಬಾಗಿಲು ತಟ್ಟಿದ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಪ್ರತಿಭಟನೆ
Related Articles
Advertisement
ರಮೇಶ್ ಬೈಸ್ ಅವರು 1947 ಆಗಸ್ಟ್ 2ರಂದು ಮಧ್ಯಪ್ರದೇಶದ ರಾಯ್ ಪುರದಲ್ಲಿ ಜನಿಸಿದ್ದರು. ಈ ಪ್ರದೇಶ ಈಗ ಚತ್ತೀಸ್ ಗಢ್ ನಲ್ಲಿದೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ಬೈಸ್ ಅವರು 2021ರಿಂದ 2023ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿದ್ದರು. 2019ರಿಂದ 2021ರವರೆಗೆ ತ್ರಿಪುರಾ ಗವರ್ನರ್ ಆಗಿ ಕಾರ್ಯನಿರ್ವಹಿಸಿದ್ದರು.
ಬೈಸ್ ಅವರು ಭೋಪಾಲ್ ನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಇವರು 1968ರ ಮೇ 1ರಂದು ರಮಾಭಾಯಿ ಬೈಸ್ ಅವರನ್ನು ವಿವಾಹವಾಗಿದ್ದರು. ಬೈಸ್ ದಂಪತಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು. 1978ರಲ್ಲಿ ರಾಯ್ ಪುರ್ ಮುನ್ಸಿಪಲ್ ಕಾರ್ಪೋರೇಶನ್ ಗೆ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. 1980ರಲ್ಲಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 1985ರಲ್ಲಿ ಬೈಸ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸತ್ಯನಾರಾಯಣ ಶರ್ಮಾ ಎದುರು ಪರಾಜಯಗೊಂಡಿದ್ದರು.
1989ರಲ್ಲಿ ರಾಯ್ ಪುರ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ ಸತತವಾಗಿ ನಡೆದ 11, 12, 13, 14, 15 ಮತ್ತು 16ನೇ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.ಬೈಸ್ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಪರಿಸರ ಮತ್ತು ಅರಣ್ಯ ಖಾತೆ ಕೇಂದ್ರದ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.