Advertisement
ಇಲ್ಲಿಯ ಮಳೆ ನೀರು ಹರಿಯುವ ತೋಡು ನೇರವಾಗಿ ನಂದಿನಿ ನದಿಗೆ ಸೇರುತ್ತದೆ. ತೋಡಿನಲ್ಲಿ ಬಿಳಿ ನೊರೆ ನೀರು ಕಂಡು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಾಮಪ್ರಸಾದ್ ಪಂಡಿತ್ ಎಂಆರ್ ಪಿಎಲ್ ಸಂಸ್ಥೆಯ ಅ ಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಶುಕ್ರವಾರ ಪೆರ್ಮುದೆ ಭಾಗದಲ್ಲಿ ಕಪ್ಪು ಬಣ್ಣದ ಹುಡಿ ಮರ ಗಿಡ, ಮನೆ ಮಾಡುಗಳಲ್ಲಿ ಕಂಡು ಬಂದಿದ್ದು, ಗಾಳಿಯಲ್ಲಿ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆ ಟಾರ್ ಮಿಶ್ರಿತ ಕಪ್ಪು ನೀರು ಹರಿದ ಘಟನೆ ಸಂಭವಿಸಿದ್ದು, ಕೃಷಿ ಹಾನಿಗೊಳಗಾದ ರೈತರಿಗೆ ಸಂಸ್ಥೆ ಪರಿಹಾರ ವಿತರಿಸಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕುತ್ತೆತ್ತೂರು ಕೆಂಗಲ್, ಅತ್ರುಕೋಡಿಯಲ್ಲಿ ಬಿಳಿ ನೊರೆ ಹರಿಯುವಿಕೆ ಸಂಬಂಧ ಎಂಆರ್‌ಪಿಎಲ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಾಂಕ್ರೀಟ್ ಮಿಕ್ಸರ್ ಹಾಕುವ ಸಂದರ್ಭ ಸೋರಿಕೆ ತಡೆಗಟ್ಟಲು ಲಿಕ್ವಿಡ್ ಒಂದನ್ನು ಬಳಸಲಾಗುತ್ತದೆ. ಅತಿಯಾಗಿ ಮಳೆ ಸುರಿದಾಗ ಕಾಂಕ್ರೀಟ್ ಕಾಮಗಾರಿ ನಡೆಸಿದ ಸ್ಥಳದಲ್ಲಿ ಮಳೆ ನೀರಿನೊಂದಿಗೆ ಈ ಲಿಕ್ವಿಡ್ ಸೇರಿಕೊಂಡು ನೊರೆ ಸೃಷ್ಟಿಯಾಗಿದೆ. ಕೃಷಿ ಸಹಿತ ಯಾವುದೇ ಚಟುವಟಿಕೆಗಳಿಗೂ ಇದರಿಂದ ತೊಂದರೆಯಾಗದು ಎಂದು ಅವರು ಹೇಳಿದ್ದಾರೆ.