Advertisement

ಕೊಹ್ಲಿ-ಸ್ಮಿತ್‌ ನಡುವೆ ಸಂಧಾನ ಸಭೆ!

09:51 AM Mar 11, 2017 | |

ಹೊಸದಿಲ್ಲಿ: ಭಾರತ-ಆಸ್ಟ್ರೇಲಿಯ ನಡುವಿನ ಬೆಂಗಳೂರು ಟೆಸ್ಟ್‌ ಪಂದ್ಯದ “ಡಿಆರ್‌ಎಸ್‌ ಪ್ರಕರಣ’ಕ್ಕೆ ಶೀಘ್ರವೇ ತೆರೆ ಬೀಳುವ ಸಮಯ ಸನ್ನಿಹಿತವಾದಂತಿದೆ. ರಾಂಚಿ ಟೆಸ್ಟ್‌ ಪಂದ್ಯಕ್ಕೂ ಮುನ್ನ ಇತ್ತಂಡಗಳ ನಾಯಕರಾದ ವಿರಾಟ್‌ ಕೊಹ್ಲಿ ಮತ್ತು ಸ್ಟೀವನ್‌ ಸ್ಮಿತ್‌ ಅವರನ್ನು ಒಟ್ಟಿಗೆ ಕೂರಿಸಿ ಕೊಂಡು ಸಂಧಾನ ಸಭೆಯೊಂದನ್ನು ನಡೆಸಲು ಬಿಸಿಸಿಐ ತೀರ್ಮಾನಿಸಿದೆ.

Advertisement

ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಆಸೀಸ್‌ ನಾಯಕ ಸ್ಟೀವನ್‌ ಸ್ಮಿತ್‌ ಡಿಆರ್‌ಎಸ್‌ ತೆಗೆದುಕೊಳ್ಳುವ ವಿಷಯದಲ್ಲಿ ಎಡವಟ್ಟು ಮಾಡಿ ಕೊಂಡಿ ದ್ದರು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಕ್ರೀಡಾಂಗಣದಲ್ಲೇ ಕೊಹ್ಲಿ ಜತೆಗೆ ತಿಕ್ಕಾಟವೂ ನಡೆದಿತ್ತು. ಸ್ಮಿತ್‌ ಮತ್ತು ಸಹ ಬ್ಯಾಟ್ಸ್‌ ಮನ್‌ ಹ್ಯಾಂಡ್ಸ್‌ಕಾಂಬ್‌ ಐಸಿಸಿ ನಿಯಮ ಉಲ್ಲಂ ಸಿ ಡ್ರೆಸ್ಸಿಂಗ್‌ ರೂಮ್‌ನತ್ತ ಸಂಕೇತ ರವಾನಿಸಿ ಮಾಹಿತಿ ಕೇಳಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆಸೀಸ್‌ ನಾಯಕ ಸ್ಮಿತ್‌, ಬ್ಯಾಟ್ಸ್‌ಮನ್‌ ಹ್ಯಾಂಡ್ಸ್‌ ಕಾಂಬ್‌ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿತ್ತು. ಬಳಿಕ ಕೆಲವೇ ಗಂಟೆಗಳಲ್ಲಿ ಬಿಸಿಸಿಐ ಈ ದೂರನ್ನು ಹಿಂದಕ್ಕೆ ಪಡೆದಿದೆ.

ಇದೀಗ ವಿವಾದ ಸ್ವಲ್ಪ ಮಟ್ಟಿಗೆ ತಣ್ಣ ಗಾದರೂ ಬೂದಿ ಮುಚ್ಚಿದ ಕೆಂಡದಂತಿದೆ. ಇದನ್ನು ಪೂರ್ತಿ ತಣಿಸುವ ಪ್ರಯತ್ನ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಮೂಲಗಳ ಪ್ರಕಾರ ವಿವಾದದ ಕೇಂದ್ರಬಿಂದುಗಳಾದ ಸ್ಮಿತ್‌ ಮತ್ತು ಕೊಹ್ಲಿ ಅವರನ್ನು ಒಟ್ಟಿಗೇ ಕೂರಿಸಿ, ಸಂಧಾನವೊಂದನ್ನು ನಡೆಸಿ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಾಗುವುದು. ರಾಂಚಿಯಲ್ಲಿ ಮಾ. 16ರಿಂದ ಆರಂಭವಾಗುವ 3ನೇ ಟೆಸ್ಟ್‌ ಪಂದ್ಯಕ್ಕೂ ಮೊದಲು ಇವರಿಬ್ಬರು ಪರಸ್ಪರ ಮುಖಾಮುಖೀಯಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next