Advertisement

ನಗುವಿನಲ್ಲಿ ಅಡಗಿದೆ ಅಗಾಧ ಶಕ್ತಿ

02:50 PM Mar 26, 2017 | |

ಕಲಬುರಗಿ: ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಮ್ಮ ಯುದ್ಧದ ಭೀತಿಗಳ ನಡುವೆ ವಿಧೂಷಕರಿಂದ ಹಾಸ್ಯ ಅನುಭವಿಸುತ್ತಿದ್ದರು. 12ನೇ ಶತಮಾನದ ಬಸವಾದಿ ಶರಣರು ವಚನಗಳಲ್ಲಿ ಸಾಮಾಜಿಕ ಚಿಂತನೆಗಳ ಜತೆಗೆ ತಮ್ಮ ಹಾಸ್ಯಕ್ಕೂ ಅವಕಾಶ ಕಲ್ಪಿಸಿರುವುದನ್ನು ನೋಡಿದರೆ ನಗುವಿಗೊಂದು ಶಕ್ತಿಯಿದೆ ಎನ್ನುವುದನ್ನು ನಿರೂಪಿಸಿ ತೋರಿಸಿದ್ದಾರೆ ಎಂದು ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿಯವರು ಹೇಳಿದರು. 

Advertisement

ಜಗತ್‌ ವೃತ್ತದ ಮಹಾತ್ಮಾ ಬಸವೇಶ್ವರ ಪುತ್ಥಳಿ ಆವರಣದಲ್ಲಿ ಶನಿವಾರ ನಡೆದ ಬಸವ ಸೇವಾ ಪ್ರತಿಷ್ಠಾನದ 23ನೇ ಬಸವಜ್ಯೋತಿ ಕಾರ್ಯಕ್ರಮ ನಗೆ ಮಾರಿ ತಂದೆಗಳ ಸ್ಮರಣೋತ್ಸವ ನಿಮಿತ್ತದ ನಗೆ ಹಬ್ಬದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. 

12ನೇ ಶತಮಾನದಲ್ಲಿಯೇ ಬಸವಣ್ಣನವರು ಮನೆ-ಮನೆಗೆ ಜ್ಞಾನದ ಜ್ಯೋತಿ ಪ್ರಸರಿಸಿ ಜನತೆ ಮೊಗದಲ್ಲಿ ನಗು ಮೂಡಿಸಿದರು. ದುಃಖದಿಂದ ಮತ್ತೂಬ್ಬರಿಗೆ ಸಂತಸ ತರಬಹುದು. ಸಂತೋಷದಿಂದ ಮತ್ತೂಬ್ಬರಿಗೆ ದುಃಖ ತರಬಹುದು. ಆದರೆ ನಗುವಿಗೆ ನಗುವೇ ಉತ್ತರ. ಆದರೆ ವ್ಯಂಗ್ಯ ನಗು ಅನಾಹುತ ತರುತ್ತದೆ.

ವ್ಯಂಗ್ಯ ನಗುವಿನಿಂದಲೇ ರಾಮಾಯಣ ಹಾಗೂ ಮಹಾಭಾರತ ನಡೆದಿವೆ ಎಂದರು. ಪಾಲಿಕೆ ಮಾಜಿ ಸದಸ್ಯ ಉಮೇಶ ಶೆಟ್ಟಿ ಉದ್ಘಾಟಿಸಿ, ಮುಪ್ಪಿನ ಕಾಲದಲ್ಲಿ ಆಧ್ಯಾತ್ಮಿಕತೆಯತ್ತ ಒಲವು ತೋರುತ್ತಿರುವುದನ್ನು ಕಾಣುತ್ತೇವೆ. ಮಕ್ಕಳಲ್ಲಿಯೇ ಜೀವನದ ಸಂಸ್ಕಾರ, ಆಧ್ಯಾತ್ಮಿಕ ತತ್ವದ ಹಾದಿಯಲ್ಲಿ ಮುನ್ನಡೆಸುವುದು ಅಗತ್ಯವಾಗಿದೆ ಎಂದು ಹೇಳಿದರು. 

ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಮಾತನಾಡಿ, ಹಾಸ್ಯದಿಂದ ನೆರೆದಿದ್ದ ಜನರನ್ನು ರಂಜಿಸಿದರು. ನಿವೃತ್ತ ಇಂಜಿನಿಯರ್‌ ಬಸವರಾಜ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುಂಚೆ ಪತ್ರಕರ್ತ ಹಣಮಂತರಾವ ಭೈರಾಮಡಗಿ ಧ್ವಜಾರೋಹಣ ನೆರವೇರಿಸಿದರು. ಶಾರದಾ ನೀಲಕಂಠ ಜಾಕಾ, ಬಸವ ಪ್ರತಿಷ್ಠಾನದ ಅಧ್ಯಕ್ಷ ರಾಜಕುಮಾರ ಕೋಟೆ, ಶಿವಶರಣಪ್ಪ ಕೋಳಾರ ಮುಂತಾದವರಿದ್ದರು.

Advertisement

ಜಾಕಾ ಕುಟುಂಬದ ವತಿಯಿಂದ ಐವರು ಅಂಧರಿಗೆ ಕಾಣಿಕೆ ನೀಡಲಾಯಿತು. ಬೆಂಗಳೂರಿನ ಭೂಮಿ ತಾಯಿ ಬಳಗದಿಂದ, ನೀಲಮ್ಮ ಬಳಗದಿಂದ ವಚನ ಗಾಯನ ಜರುಗಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ರವೀಂದ್ರ ಶಾಬಾದಿ ಸ್ವಾಗತಿಸಿದರು. ಕಾರ್ಯದರ್ಶಿ ಉದಯಕುಮಾರ ಸಾಲಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next