Advertisement
ಇದೆಲ್ಲದರ ನಡುವೆ “ಪ್ರಜ್ಞಾವಂತ ನಾಗರಿಕರು’ ಎನ್ನುವ ಹೆಸರಿನಲ್ಲಿ ಕೆಲವು ಸಾಹಿತಿಗಳು ಮುಖ್ಯಮಂತ್ರಿಗೆ ಪತ್ರ ಬರೆದು, ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಎಸ್‌ಐಟಿ ಅಧಿಕಾರಿಗಳು ಬ್ಲೂಕಾರ್ನರ್ ನೋಟಿಸ್ ಕೊಟ್ಟಿದ್ದಾರೆ, ಪ್ರಜ್ವಲ್‌ನನ್ನು ಬಂಧಿಸುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇವೆಯೇ ಹೊರತು ಪ್ರಜ್ವಲ್ ಯಾಕೆ ಹೋದರು? ಯಾವಾಗ ಬರುತ್ತಾರೆ ಇತ್ಯಾದಿ ಮಾಹಿತಿ ಇಲ್ಲ. ಅವರ ಕುಟುಂಬಕ್ಕೂ ಇಲ್ಲದ ಮಾಹಿತಿ ನಮಗೆ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
Related Articles
ತಮ್ಮ ವಕೀಲ ಸಿ.ವಿ.ನಾಗೇಶ್ ಅವರ ಬೆಂಗಳೂ ರಿನ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಕೃತಜ್ಞತೆ ಹೇಳಿದ ರೇವಣ್ಣ, ನನಗೆ ನ್ಯಾಯಾಂಗದ ಮೇಲೆ ಗೌರವ ಹಾಗೂ ದೇವರ ಮೇಲೆ ನಂಬಿಕೆ ಇದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಹೆಚ್ಚು ಮಾತನಾಡುವುದಿಲ್ಲ. ಆರೋಪಮುಕ್ತವಾಗಿ ಹೊರಬರುತ್ತೇನೆ ಎಂದಷ್ಟೇ ಹೇಳಿದರು. ಪ್ರಜ್ವಲ್ ಬಗ್ಗೆ ಕೇಳಿದಾಗ, “ನನಗೆ ಯಾರ ಬಗ್ಗೆಯೂ ಗೊತ್ತಿಲ್ಲ’ ಎನ್ನುತ್ತಾ ನಡೆದೇ ಬಿಟ್ಟರು.ಎಸ್‌ಐಟಿ ಅಧಿಕಾರಿಗಳು ಜರ್ಮನಿಯ ಕೆಲವು ಅಧಿಕಾರಿಗಳ ಜತೆಗೆ ಸಂಪರ್ಕ ಸಾಧಿಸಿದ್ದು, ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.
Advertisement
ನಿನ್ನೆ ಕಾದಿರಿಸಿದ್ದ ವಿಮಾನ ಟಿಕೆಟ್ ರದ್ದು
ಮೇ 15ರಂದು ಬೆಂಗಳೂರಿಗೆ ಬರಲು ಪ್ರಜ್ವಲ್ ಕಾದಿರಿಸಿದ್ದ ಟಿಕೆಟ್ ಮತ್ತೂಮ್ಮೆ ರದ್ದಾಗಿದೆ. ಹರಿಯಾಣದ ಟ್ರಾವೆಲ್ಸ್ ಒಂದರಿಂದ 3 ಲಕ್ಷ ರೂ. ಮೌಲ್ಯದ ಬ್ಯುಸಿನೆಸ್ ಕ್ಲಾಸ್ ಕೆಟಗರಿ ಸೀಟನ್ನು ಪ್ರಜ್ವಲ್ ಬುಕ್ ಮಾಡಿದ್ದರು. ಆದರೆ ವಿಮಾನ ನಿಲ್ದಾಣದತ್ತ ಪ್ರಜ್ವಲ್ ಸುಳಿಯಲೇ ಇಲ್ಲ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬರುತ್ತಾರೆಂಬ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿ ಗಳು ಬುಧವಾರ ಬೆಳಗ್ಗಿನಿಂದಲೇ ಕಾದಿದ್ದರು. ಕೊನೆಗೆ ಅವರು ನಿರಾಸೆಯಿಂದಲೇ ಮರಳಬೇಕಾಯಿತು.