Advertisement

ಯಾವ ಕಡೆ ದೇವೇಗೌಡರ ನಡೆ?

01:42 AM Mar 13, 2019 | |

ಜೆಡಿಎಸ್‌ ವರಿಷ್ಠ ಎಚ್‌. ಡಿ.ದೇವೇಗೌಡ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುದೇ ಈಗ ಬಹು ಚರ್ಚಿತ ವಿಷಯ. ತಮ್ಮ ಮೊಮ್ಮಗನಿಗೆ ಸೀಟು ಬಿಟ್ಟುಕೊಟ್ಟ ಗೌಡರು ಈಗ ತಾನು ಎಲ್ಲಿ ಎಂಬ ಲೆಕ್ಕಾಚಾರ ಹಾಕತೊಡಗಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಸಹ ಚದುರಂಗದ ಲೆಕ್ಕ ಹಾಕತೊಡಗಿವೆ.

Advertisement

ತುಮಕೂರು

ಕ್ಷೇತ್ರದಲ್ಲಿ ಜೆಡಿಎಸ್‌-3, ಕಾಂಗ್ರೆಸ್‌-1 ಶಾಸಕರನ್ನು ಹೊಂದಿದ್ದು, ಅಲ್ಲಿಯೂ ಒಕ್ಕಲಿಗ ಸಮುದಾಯ ಮತಗಳು ಹೆಚ್ಚಾಗಿದೆ. ಕಾಂಗ್ರೆಸ್‌ ಬೆಂಬಲ ದೊರೆತರೆ ದೇವೇಗೌಡರು ಗೆಲ್ಲಬಹುದು ಎಂಬ ಲೆಕ್ಕಾಚಾರ. ಆದರೆ, ಹಾಲಿ ಸಂಸದ ಮುದ್ದಹನುಮೇಗೌಡ ಇರುವುದರಿಂದ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್‌ನಲ್ಲಿ ವಿರೋಧ ಇದೆ. ಇಲ್ಲಿಯೂ ಬಿಜೆಪಿಯು ಲಿಂಗಾಯತ ಅಭ್ಯರ್ಥಿ ಕಣಕ್ಕಿಳಿಸಿ ಆ ಸಮುದಾಯದ ಗಣನೀಯ ಪ್ರಮಾಣದ ಮತದ ಮೇಲೆ ಕಣ್ಣಿಟ್ಟಿದೆ.

ಮೈಸೂರು
ಒಕ್ಕಲಿಗ ಮತದಾರರು ನಿರ್ಣಾಯಕರಾಗಿದ್ದು ಜೆಡಿಎಸ್‌-ಕಾಂಗ್ರೆಸ್‌ ಸೇರಿ 4 ಶಾಸಕರಿದ್ದು ಗೆಲ್ಲಬಹುದು ಎಂಬ ಲೆಕ್ಕಾಚಾರ. ಆದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ಕ್ಷೇತ್ರ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಇಲ್ಲಿ ಬಿಜೆಪಿಯ ಹಾಲಿ ಸಂಸದ ಪ್ರತಾಪಸಿಂಹ ಸಹ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಬಿಜೆಪಿಯ ಶಾಸಕರೂ ಇರುವುದರಿಂದ ಯಾರೇ ಬಂದರೂ ಸ್ಪರ್ಧೆಯೊಡ್ಡಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಬೆಂಗಳೂರು ಉತ್ತರ

Advertisement

ಕ್ಷೇತ್ರದಲ್ಲಿ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಐದು ಕಡೆ ಕಾಂಗ್ರೆಸ್‌, ಎರಡು ಕಡೆ ಜೆಡಿಎಸ್‌ ಶಾಸಕರು ಇರುವುದು. ಒಕ್ಕಲಿಗ ಸಮುದಾಯ ನಿರ್ಣಾಯಕ ಆಗಿರುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಕಾಂಗ್ರೆಸ್‌ಗೂ ಸಮರ್ಥ ಅಭ್ಯರ್ಥಿ ಇಲ್ಲದ ಕಾರಣ ಬಿಟ್ಟುಕೊಡಲು ಸಿದಟಛಿವಿದೆ. ಬಿಜೆಪಿಯು ಒಕ್ಕಲಿಗ ಸಮುದಾಯದ ಸದಾನಂದಗೌಡರನ್ನೇ ಕಣಕ್ಕಿಳಿಸಿ ನರೇಂದ್ರ ಮೋದಿ ವರ್ಚಸ್ಸಿನ ಮೇಲೆ ಗೆಲ್ಲುವ ಕಾರ್ಯತಂತ್ರ ರೂಪಿಸಿದೆ.

ಹಾಸನ 
ಆರು ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದು, ನಗರದಲ್ಲಿ ಮಾತ್ರ ಬಿಜೆಪಿ ಶಾಸಕರಿರುವುದರಿಂದ ದೇವೇಗೌಡರು ಸ್ಪರ್ಧೆ ಮಾಡಿದರೆ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಕಾಂಗ್ರೆಸ್‌ಗೆ ಗೆಲ್ಲುವಷ್ಟು ಶಕ್ತಿ ಇರುವ ಅಭ್ಯರ್ಥಿ ಕ್ಷೇತ್ರದಲ್ಲಿ ಇಲ್ಲದಿರುವುದು ಜೆಡಿಎಸ್‌ಗೆ ಲಾಭ. ಬಿಜೆಪಿ ಸಮರ್ಥ ಅಭ್ಯರ್ಥಿಗೆ ಹುಡುಕಾಟ ನಡೆಸಿದೆ. ಈ ನಡುವೆ ಮಾಜಿ ಸಚಿವ ಎ. ಮಂಜು ಬಿಜೆಪಿಯಿಂದ ಸ್ಪರ್ಧಿಸಲು ಸಿದ್ದತೆ ನಡೆಸಿದ್ದಾರೆ.

ಇಲ್ಲಿ ಸ್ಪರ್ಧಿಸಲು ನೈತಿಕತೆ ಇದೆಯಾ?: ಮಾಧುಸ್ವಾಮಿ 
ತುಮಕೂರು:
ಕಳೆದ 40 ವರ್ಷಗಳಿಂದ ತುಮಕೂರನ್ನು ಬರದ ಜಿಲ್ಲೆಯನ್ನಾಗಿ ಮಾಡಿದ ಕೀರ್ತಿ ದೇವೇಗೌಡ ಅವರಿಗೆ ಸಲ್ಲುತ್ತದೆ. ಹೇಮಾವತಿ ನೀರನ್ನು ನಮ್ಮ ಜಿಲ್ಲೆಗೆ ನೀಡದೇ ಅನ್ಯಾಯ ಮಾಡಿರುವ ದೇವೇಗೌಡರವರು ಯಾವ ನೈತಿಕತೆಯಿಂದ ತುಮಕೂರು ಲೋಕಸಭಾ ಅಭ್ಯರ್ಥಿ ಆಗಲು ಅಣಿಯಾಗುತ್ತಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದೇವೇಗೌಡ ಅವರು ತಮ್ಮ ಮೊಮ್ಮಗನಿಗೋಸ್ಕರ ಹಾಸನ ಲೋಕಸಭಾ ಕ್ಷೇತ್ರ ಬಿಟ್ಟುಕೊಟ್ಟಿದ್ದು, ಅವರು ಬೇರೆ ಕ್ಷೇತ್ರದ ಹುಡುಕಾಟದಲ್ಲಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆ ಎಂಬ ಸುದ್ದಿ ಹರಡಿದ್ದು, ಅವರು ಯಾವ ನೈತಿಕತೆ ಮೇಲೆ ತುಮಕೂರು ಜಿಲ್ಲೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದರು.

ಯಾರೇ ಸ್ಪರ್ಧಿಸಿದರೂ ಗೆಲುವು ನಮ್ಮದೇ: ಪ್ರಸಾದ್‌

ಮೈಸೂರು: “ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಸ್ಪರ್ಧಿಸಿದರೂ ನಮಗ್ಯಾವ ಅಂಜಿಕೆ ಇಲ್ಲ. ಗೆಲುವು ನಮ್ಮದೇ’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ, ಜೊತೆಗೆ ದೇಶದ ಅತಿ ದೊಡ್ಡ ರಾಜಕೀಯ ಪಕ್ಷವೂ ಹೌದು. ಅಲ್ಲದೆ ಮೈಸೂರು -ಕೊಡಗು ಕ್ಷೇತ್ರವನ್ನು ನಮ್ಮ ಪಕ್ಷದ ಸಂಸದರೆ ಪ್ರತಿನಿಧಿಸುತ್ತಿರುವುದರಿಂದ ದೇವೇಗೌಡರು ಇಲ್ಲಿಂದ ಸ್ಪರ್ಧಿಸುತ್ತಾರೆಂದು ನಮಗ್ಯಾಕೆ ಅಂಜಿಕೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next