Advertisement
ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಸಿಎಂ, ರಾಜ್ಯ ಸಚಿವರು, ಶಾಸಕರ ಹಿಂಡು ಚನ್ನಪಟ್ಟಣ ಪ್ರಚಾರ ಕಣದಲ್ಲಿ ಧೂಳೆಬ್ಬಿಸಿದ್ದಾರೆ. ಉಭಯ ಪಕ್ಷಗಳ ನಡುವಿನ ವಾಕ್ಸಮರ ತಾರಕ್ಕೇರಿದ್ದು, ಒಕ್ಕಲಿಗರ ಕೋಟೆ ಎನಿಸಿರುವ ಚನ್ನಪಟ್ಟಣ ಗೆಲ್ಲುವುದು ಎಚ್ಡಿಕೆ ಮತ್ತು ಡಿಕೆಶಿಗೆ ಪ್ರತಿಷ್ಠೆಯ ಸಂಗತಿಯಾಗಿದೆ. ಚನ್ನಪಟ್ಟಣವನ್ನು ಗೆದ್ದು ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲವಾಗಿಸಬೇಕು.
Related Articles
ಈ ಬಾರಿಯ ಚುನಾವಣೆಯಲ್ಲಿ ಕಣ್ಣೀರು, ನೀರಾವರಿ, ಸ್ಥಳೀಯ ಮತ್ತು ಹೊರಗಿನವರು, ಸ್ಮಾರ್ಟ್ಕಾರ್ಡ್, ಅಭಿವೃದ್ಧಿ ಕೆಲಸಗಳು ಚರ್ಚೆಗೆ ಬಂದಿರುವ ಪ್ರಮುಖ ಸಂಗತಿಗಳು. ಚನ್ನಪಟ್ಟಣದಲ್ಲಿ ನೀರಾವರಿ ಯೋಜನೆ ಸಾಕಾರಗೊಂಡಿರುವುದು ರಾಜ್ಯದ ಮನೆಮಾತಾಗಿದೆ. ಇದರ ಕ್ರೆಡಿಟ್ಗೆ ಪಕ್ಷಗಳ ನಡುವೆ ಜಟಾಪಟಿ ನಡೆದಿದೆ.
Advertisement
ಇನ್ನು ಕಣ್ಣೀರು ಕ್ಷೇತ್ರದ ಚುನಾವಣೆ ಯಲ್ಲಿ ಸಾಕಷ್ಟು ಸದ್ದುಮಾಡಿದ್ದು, ನಿಖೀಲ್ ಪ್ರಚಾರದ ವೇಳೆ ಕಣ್ಣೀರು ಹಾಕಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಭಿವೃದ್ಧಿ ಕೆಲಸ ಮಾಡದೆ ಕಣ್ಣಿರು ಹಾಕುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಲೇವಡಿ ಮಾಡಿದರೆ, ದೇವೇಗೌಡರು ಮತ್ತು ಕುಮಾರಸ್ವಾಮಿ ಕಟುಕರಿಗೆ ಕಣ್ಣೀರು ಬರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಹಿಂದ ಮತಗಳ ಮೇಲೆ ಎಲ್ಲರ ಕಣ್ಣುಉಪಚುನಾವಣೆ ಗೆಲ್ಲಲು ಮುಂದಾಗಿ ರುವ ಪಕ್ಷಗಳು ಜಾತೀಸಮೀಕರಣ ಆರಂಭಿಸಿವೆ. ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿದ್ದರೂ ಅಹಿಂದ ಹಾಗೂ ಇತರ ವರ್ಗಗಳು ಒಕ್ಕಲಿಗರಷ್ಟೇ ಪ್ರಮಾಣದಲ್ಲಿವೆ. ಹೀಗಾಗಿ ಜಾತಿವಾರು ಮತ ಸೆಳೆವ ತಂತ್ರಗಾರಿಕೆ ಶುರುವಾಗಿದೆ. ಜೆಡಿಎಸ್ ಪಾಲಿಗೆ ಒಕ್ಕಲಿಗರು ಓಟ್ ಬ್ಯಾಂಕ್ ಆಗಿದ್ದರೆ, ಕೈ ಪಾಳಯಕ್ಕೆ ಅಹಿಂದ ಮತಗಳು ಓಟ್ ಬ್ಯಾಂಕ್ ಆಗಿದೆ. ಒಕ್ಕಲಿಗರ ಮತಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿದೆ. ಅಭ್ಯರ್ಥಿಗಳ ಸಾಮರ್ಥ್ಯ
ನಿಖಿಲ್ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ
– ಮಂಡ್ಯ ಲೋಕಸಭೆ, ರಾಮನಗರ ಕ್ಷೇತ್ರ ಚುನಾವಣೆಯಲ್ಲಿ ಸೋತಿರುವ ಅನುಕಂಪ – ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಎಂಬ ಕ್ರೆಡಿಟ್, ಚನ್ನಪಟ್ಟಣದಲ್ಲಿ ತಂದೆ ಎಚ್ಡಿಕೆ ಕೈಗೊಂಡಿರುವ ಅಭಿವೃದ್ಧಿ – ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಕಾರ್ಯನಿರ್ವಹಣೆ -ಜೆಡಿಎಸ್-ಬಿಜೆಪಿ ಪ್ರಮುಖರ ಪ್ರಚಾರ – ಜೆಡಿಎಸ್ಗೆ ಒಕ್ಕಲಿಗ ಮತದಾರರ ಒಲವು ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಅಭ್ಯರ್ಥಿ
– 2 ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸೋತಿರುವ ಅನುಕಂಪ – 5 ಬಾರಿ ಶಾಸಕರಾಗಿದ್ದಾಗ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು – ಚನ್ನಪಟ್ಟಣದ ನೀರಾವರಿಗೆ ಯೋಜನೆ ಜಾರಿಗೆ ತಂದಿದ್ದಾರೆ ಎಂಬ ಕ್ರೆಡಿಟ್ – ಕಾಂಗ್ರೆಸ್ ಅಭ್ಯರ್ಥಿಯಾದ ಕಾರಣ ಸಾಂಪ್ರದಾಯಿಕ ಮತಗಳು ಗಟ್ಟಿ – ಡಿಸಿಎಂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಸೇರಿ ಕೈ ನಾಯಕರ ಬೆಂಬಲ
– ಸು.ನಾ.ನಂದಕುಮಾರ್