Advertisement
ಚನ್ನಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಮದ್ಯ ಮಾರಾಟಗಾರರಿಂದ ಪ್ರತಿ ವಾರ 18 ಕೋಟಿ ರೂ. ಲಂಚವಾಗಿ ಪಡೆಯಲಾಗುತ್ತಿದೆ. ಬಾರ್‌ಗಳ ಪರವಾನಿಗೆ ನವೀಕರಣಕ್ಕೆ 2 ರಿಂದ 3 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರು ಮಾಹಿತಿ ಪಡೆದಕೊಂಡು ಪ್ರಕರಣವನ್ನು ದಾಖಲಿಸಿದ್ದಾರೆ. ಆದರೂ, ಸರ್ಕಾರ ಸುಮ್ಮನಿದೆ ಎಂದರೆ ಆರೋಪವನ್ನು ಒಪ್ಪಿಕೊಂಡಂತೆ ಎಂದು ವಾಗ್ಧಾಳಿ ನಡೆಸಿದರು.
ಅಬಕಾರಿ ಇಲಾಖೆ ಹಗರಣದ ಬಗ್ಗೆ ದೂರು ಸಲ್ಲಿಕೆಯಾಗಿ ಜನರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದರೂ ಲೂಟಿ ಮಾಡಿಲ್ಲವೆಂದು ಕಾಂಗ್ರೆಸ್ ನಾಯಕರು ಯಾವ ನಾಲಿಗೆಯಿಂದ ಹೇಳುತ್ತಿದ್ದಾರೆ. ಪ್ರಧಾನಿ ಅವರ ವಿರುದ್ಧ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಇದು ಸುಳ್ಳು ಎನ್ನುವುದಾದರೆ ದೂರು ನೀಡಿದವರ ವಿರುದ್ಧ ಸರಕಾರ ಏಕೆ ದೂರು ದಾಖಲಿಸಲಿಲ್ಲ. ಮದ್ಯ ಮಾರಾಟಗಾರರು ನ. 26ರಂದು ಬಂದ್ ನಡೆಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಕರ್ನಾಟಕವನ್ನೇ ವಕ್ಫ್‌ಗೆ ನೀಡುತ್ತಾರಾ?
ವಕ್ಫ್ ವಿಚಾರದಲ್ಲಿ ಕಾಂಗ್ರೆಸ್ ಎರಡು ನಾಲಿಗೆ ಇರುವವಂತೆ ವರ್ತಿಸುತ್ತಿದ್ದಾರೆ. ಒಂದೆಡೆ ಸಿಎಂ ವಕ್ಫ್ ಎಂದು ನಮೂದಿಸಿರುವುದನ್ನು ಪಹಣಿಯಿಂದ ಹಿಂದಕ್ಕೆ ತೆಗೆಸುವುದಾಗಿ ಹೇಳುತ್ತಿದ್ದಾರೆ. ಇತ್ತ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಪತ್ರ ಬರೆದು ವಕ್ಫ್ ಬಳಿ 1.12 ಲಕ್ಷ ಎಕರೆ ಇದ್ದು, ವಕ್ಫ್ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ 21767 ಪ್ರಕರಣಗಳಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿ ನೀಡುವಂತೆ ತಿಳಿಸುತ್ತಾರೆ. ಕೂಡಲೇ ವಕ್ಫ್‌ಗೆ ಜಮೀನು ಕೊಡಿಸುವಂತೆ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿಗೆ ಪತ್ರ ಬರೆಯುತ್ತಾರೆ. ಇದು ಸರಕಾರದ ಎರಡು ನಾಲಿಗೆಯಲ್ಲವೇ ಎಂದು ಪ್ರಶ್ನಿಸಿದರು.
Related Articles
ನಮ್ಮ ರಾಜ್ಯದ ಸಿಎಂ ಮತ್ತು ಡಿಸಿಎಂ ಭಾವಚಿತ್ರವಿರುವ ಅಕ್ಕಿ, ಬಟ್ಟೆಗಳನ್ನು ಕೇರಳದ ವೈನಾಡಿನ ಉಪಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಚುನಾವಣೆಯಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು, ಐಎನ್‌ಡಿಐಎ ಒಕ್ಕೂಟದವರಾದ ಕೇರಳ ಸಿಎಂ ಪೋಟೋ ಬಿಡುಗಡೆ ಮಾಡಿದ್ದಾರೆ. ಇವರು ಯಾವರೀತಿ ರಾಜ್ಯದ ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಸರಕಾರದ ಈ ಎಲ್ಲ ಆಟಗಳನ್ನು ನೋಡಿ ಮೂರು ಉಪಚುನಾವಣೆಯಲ್ಲಿ ರಾಜ್ಯ ಸರಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ನಿಖಿಲ್ ಅವರು ಪ್ರಧಾನಿ ಮೋದಿಯವರ ಬೆಂಬಲದಿಂದ ಸ್ಪರ್ಧಿಸುತ್ತಿದ್ದಾರೆ. ಈಗಿನ ಸಮಯದಲ್ಲಿ ನಿಖಿಲ್ ಅವರೇ ಗೆಲ್ಲುವ ವಾತಾವರಣ ಸೃಷ್ಟಿಯಾಗಿದೆ ಎಂಬ ಮಾಹಿತಿ ಬಂದಿದೆ. ಅವರು ಗೆಲ್ಲುವುದು ಖಂಡಿತ ಎಂದು ವಿಶ್ವಾಸವ್ಯಕ್ತಪಡಿಸಿದರು.
Advertisement
ಕೋವಿಡ್ ವರದಿ ಸೋರಿಕೆ ಆಗಿದ್ದು ಹೇಗೆ?ರಾಮನಗರ: ಕೋವಿಡ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದ್ದ ನ್ಯಾ| ಮೈಕಲ್ ಡಿ.ಕುನ್ಹಾ ವರದಿ ಸೋರಿಕೆಯಾಗಿದ್ದಾದರೂ ಹೇಗೆ? ಸಿಎಂ ಬಳಿ ಇದ್ದ ವರದಿ ಎಲ್ಲಿಂದ ಸೋರಿಕೆಯಾಯಿತು. ಸರಕಾರ ತಮ್ಮ ವಿರುದ್ಧ ಹಗರಣಗಳಿಂದ ಕೆಟ್ಟ ಹೆಸರು ಬರುತ್ತಿದೆ ಎಂಬ ಕಾರಣಕ್ಕೆ ಯಡಿಯೂರಪ್ಪ ಅವರ ಹೆಸರಿಗೆ ಮಸಿ ಬಳಿಯಲು ಈ ಹುನ್ನಾರ ನಡೆಸಿದೆ. ಇದು ಅರ್ಧ ವರದಿಯಾಗಿದ್ದು, ಪೂರ್ಣ ವರದಿ ಬರಲಿ, ಸತ್ಯಾಂಶ ಬಯಲಾಗಲಿದೆ. ಸಿದ್ದರಾಮಯ್ಯ ಅವರ ರೀಡೂ ಪ್ರಕರಣದ ವರದಿ 10 ವರ್ಷಗಳಿಂದ ಅಲ್ಲೇ ಕುಳಿತಿರುವಾಗ ಬುಲೆಟ್ ಟ್ರೈನ್ ವೇಗದಲ್ಲಿ ಈ ವರದಿ 6 ತಿಂಗಳಲ್ಲಿ ಸಲ್ಲಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.