Advertisement

ವಾಟ್ಸಾಪ್‌ ಹೊಸ ಅವತಾರ

07:15 AM Oct 22, 2017 | Harsha Rao |

ಚೆನ್ನೈ:  ವಾಟ್ಸಾಪ್‌ ಶೀಘ್ರದಲ್ಲೇ ಮತ್ತಷ್ಟು ಹೊಸ ಫೀಚರ್‌, ಆಯ್ಕೆಗಳೊಂದಿಗೆ ನಳನಳಿ ಸಲಿದೆ. ಶೀಘ್ರದಲ್ಲೇ, ಸದ್ಯಕ್ಕಿರುವ ವಾಟ್ಸಾಪ್‌ನ ಸುಧಾರಿತ ಸ್ವರೂಪವಾದ “ವಾಟ್ಸಾಪ್‌ 2.17.295′ ಮಾದರಿಯ ಪರೀಕ್ಷೆಯು ನಡೆ ಯುತ್ತಿದ್ದು ಇದು ಯಶಸ್ವಿಯಾದ ನಂತರ ಎಲ್ಲಾ ಬಳಕೆದಾರರಿಗೆ ಹೊಸ ಮಾದರಿಯ ವಾಟ್ಸಾಪ್‌ ಲಭ್ಯವಾಗಲಿದೆ. ಗ್ರೂಪ್‌ ಮ್ಯಾನೇಜ್‌Ê ೆುಂಟ್‌ ವಿಧಾನದಲ್ಲಿ ಹಲವಾರು ಸುಧಾರಣೆಗಳನ್ನು ತರಲು ಹೊಸ ಮಾದರಿಯಲ್ಲಿ ಪ್ರಯತ್ನಿಸಲಾಗಿದೆ. 

Advertisement

ಏನಿರಲಿದೆ ಹೊಸತರಲ್ಲಿ?: ಹೊಸ ಮಾದರಿಯಲ್ಲಿ ಗ್ರೂಪ್‌ ಅಡ್ಮಿನಿಸ್ಟ್ರೇಟರ್‌ಗಳಿಗೆ, ಗ್ರೂಪ್‌ ರಚನೆಕಾರರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತಿದೆ.  ಗ್ರೂಪ್‌  ಅಡ್ಮಿನಿಸ್ಟ್ರೇಟರ್‌ಗಳು ತಮ್ಮ ಆಯ್ಕೆಯ ಗ್ರೂಪ್‌ ಸದಸ್ಯರಿಗೆ ಮಾತ್ರ ಗ್ರೂಪ್‌ನ ಚಿಹ್ನೆ, ಚಿತ್ರ ಹಾಗೂ ಶೀರ್ಷಿಕೆಗಳನ್ನು ಬದಲಿಸುವ ಅಧಿಕಾರ ನೀಡಬಹುದು. ಇನ್ನು, ಗ್ರೂಪ್‌ ರಚನೆಗಾರರಿಗೆ ತಮ್ಮನ್ನು ಗ್ರೂಪ್‌ನಿಂದ ಹೊರಹಾಕಲು ಸಾಧ್ಯವಾಗದಂಥ ಟೂಲ್‌ ನೀಡಲಾಗುತ್ತದೆ. 

ಹೊಸ “ಅನ್‌ ಸೆಂಡ್‌’ ಆಯ್ಕೆಯ ಮೂಲಕ, ಜಿಫ್, ಜೆಪೆಗ್‌, ಡಾಕ್‌… ಹೀಗೆ ಯಾವುದೇ ಮಾದರಿಯ ಆಡಿಯೋ, ವಿಡಿಯೋ, ಡಾಕ್ಯುಮೆಂಟ್‌ ಅಥವಾ ಫೋಟೋಗಳನ್ನು ಒಮ್ಮೆ ಕಳಿಸಿದ್ದರೆ ಅದನ್ನು ಮರಳಿ ಪಡೆಯುವ ಸೌಲಭ್ಯ ಸಿಗಲಿದೆ. ಹಾಗೆಯೇ, ಗ್ರೂಪ್‌ನಲ್ಲಿ ಹಾಕಿರುವ ಡಾಕ್ಯುಮೆಂಟ್‌ಗಳನ್ನು ಏಕಕಾಲ ದಲ್ಲಿ ಹಿಂಪಡೆಯಲು “ಡಿಲೀಟ್‌ ಫಾರ್‌ ಎವೆರಿಒನ್‌’  ಆಯ್ಕೆ ನೀಡಲು ನಿರ್ಧರಿಸಲಾ ಗಿದೆ. ಯುಪಿಐ ಮೂಲಕ ವಿವಿಧ ಬ್ಯಾಂಕ್‌ ಖಾತೆಗಳ ನಡುವೆ ಹಣ ವರ್ಗಾವಣೆಗೆ ಅವಕಾಶ ಕಲ್ಪಿಸಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next