ನವದೆಹಲಿ: ಚಾಟಿಂಗ್ ಪ್ರಿಯರ ಅಚ್ಚುಮೆಚ್ಚಿನ ಆಯ್ಕೆಯಾದ ವಾಟ್ಸಾಪ್ ದಿನೇ ದಿನೇ ಹೊಸ ಅಪ್ ಡೇಟ್ ಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇದೀಗ ಆ್ಯನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ ಜೊತೆಗೆ ವಾಲ್ ಪೇಪರ್ ಬದಲಿಸುವ ಆಯ್ಕೆಯನ್ನು ಒದಗಿಸಿದೆ.
ಹೊಸ ಆ್ಯನಿಮೇಟೆಡ್ ಸ್ಟಿಕ್ಕರ್ ಪ್ಯಾಕ್:
ವಾಟ್ಸಾಪ್ ಹೊಸದಾಗಿ 9 ಭಾಷೆಗಳಲ್ಲಿ ಹೊಸ ಆ್ಯನಿಮೇಟೆಡ್ ಸ್ಟಿಕ್ಕರ್ ಪ್ಯಾಕ್ ಹೊರತಂದಿದೆ. ಪ್ರಮುಖವಾಗಿ ಅರೇಬಿಕ್, ಫ್ರೆಂಚ್, ಜರ್ಮನ್, ಇಂಡೋನೇಷಿಯಾ, ಇಟಲಿ, ಪೋರ್ಚುಗಲ್, ರಷ್ಯಾ, ಸ್ಪಾನಿಷ್ ಮತ್ತು ಟರ್ಕಿ ಭಾಷೆಗಳಲ್ಲಿ ಲಭ್ಯವಿದೆ. ಇದಲ್ಲದೆ
ಆ್ಯನಿಮೇಟೆಡ್ ಸ್ಟಿಕ್ಕರ್ ಗಳಿಗಾಗಿ ಸರ್ಚ್ ಆಯ್ಕೆಯನ್ನು ನೀಡಲಾಗಿದ್ದು, ಈ ಮೂಲಕ ಬಳಕೆದಾರರು ತಮಗಿಷ್ಟವಾದ ಸ್ಟಿಕ್ಕರ್ ಗಳನ್ನು ಹುಡುಕಿ ಬಳಸಬಹುದಾಗಿದೆ.
ಇದನ್ನೂ ಓದಿ: ಬಿಜೆಪಿಗೆ ‘ಗ್ರಾಮ ಸ್ವರಾಜ್ಯ’ ಕಾರ್ಯಕ್ರಮಕ್ಕೆ ಕುಮಾರಸ್ವಾಮಿ ಶಹಬ್ಬಾಸ್
ವಾಲ್ ಪೇಪರ್ ಫೀಚರ್
ವಾಟ್ಸಾಪ್ ಹಲವಾರು ಸುಂದರವಾದ ವಾಲ್ ಪೇಪರ್ ಗಳನ್ನು ಹೊರತಂದಿದೆ. ಈ ವಾಲ್ ಪೇಪರ್ ಗಳು ಜಗತ್ತಿನಾದ್ಯಂತ ಇರುವ ವೈವಿಧ್ಯತೆಗಳನ್ನು ಮತ್ತು ವಿವಿಧ ಪ್ರಾಕೃತಿಕ ಹಾಗೂ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಚಿತ್ರಗಳನ್ನು ಒಳಗೊಂಡಿದೆ.