ಹೆಚ್ಚಿನ ಗ್ರಾಹಕರು, ಕ್ರೆಡಿಟ್ ಸ್ಕೋರ್ ಕಡೆಗೆ ಗಮನವನ್ನೇ ನೀಡುವುದಿಲ್ಲ. ಕ್ರೆಡಿಟ್ ಸ್ಕೋರ್ ನಿರ್ಲಕ್ಷ್ಯದಿಂದ ಎದುರಾಗುವ ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ.
ಬ್ಯಾಂಕ್ ಗ್ರಾಹಕನೊಬ್ಬನ, ಸಾಲ ತೀರಿಸುವ ಸಾಮರ್ಥ್ಯ ಅಳೆಯುವ ಮಾನದಂಡವೇ “ಕ್ರೆಡಿಟ್ ಸ್ಕೋರ್’. ಅದನ್ನು “ಸಿಬಿಲ್ ಸ್ಕೋರ್’ ಎಂದೂ ಕರೆಯಲಾಗುತ್ತದೆ. ಗ್ರಾಹಕನ, ಹಿಂದಿನ 6 ತಿಂಗಳ ಬ್ಯಾಂಕ್ ಚಟುವಟಿಕೆಗಳು, ಕ್ರೆಡಿಟ್ ಕಾರ್ಡ್ ಅರ್ಜಿಗಳು, ಹಳೆಯ ಸಾಲದ ಕಂತು ಕಟ್ಟಿದ ದಿನಾಂಕಗಳು ಸೇರಿದಂತೆ, ಹಲವು ಸಂಗತಿಗಳನ್ನು ಆಧರಿಸಿ, ಕ್ರೆಡಿಟ್ ಸ್ಕೋರ್ ನಿಗದಿಯಾಗುತ್ತದೆ. ಅದನ್ನು ಲೆಕ್ಕ ಹಾಕಲು, ಖಾಸಗಿ ಥರ್ಡ್ ಪಾರ್ಟಿ ಸಂಸ್ಥೆಗಳೇ ಇವೆ.
ಬ್ಯಾಂಕ್‌ಗಳು ಇವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳುತ್ತವೆ. ಈ ಥರ್ಡ್ ಪಾರ್ಟಿ ಸಂಸ್ಥೆಗಳು, ಬ್ಯೂರೋಗಳು, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ, ಬ್ಯಾಂಕ್ ಗ್ರಾಹಕರ ಕ್ರೆಡಿಟ್ ಸ್ಕೋರನ್ನು ಲೆಕ್ಕ ಹಾಕುತ್ತವೆ. ನಂತರ, ಆ ಮಾಹಿತಿಯನ್ನು ಬ್ಯಾಂಕ್‌ಗೆ ನೀಡುತ್ತವೆ. ಸಾಲ ನೀಡುವ ಸಮಯದಲ್ಲಿ, ಬ್ಯಾಂಕು ಈ ಕ್ರೆಡಿಟ್ ರೇಟನ್ನು ಪರಿಶೀಲಿಸಿ, ಅದರ ಆಧಾರದಲ್ಲಿ ಸಾಲ ಸ್ಯಾಂಕ್ಷನ್ ಮಾಡುತ್ತದೆ. 740 ಕ್ರೆಡಿಟ್ ಸ್ಕೋರ್ ಪರೀಕ್ಷೆಯ ಡಿಸ್ಟಿಂಕ್ಷನ್ನಿಗೆ ಸಮ. ಅದರಿಂದ ಬಹುತೇಕ ಪ್ರಯೋಜನಗಳನ್ನು ಪಡೆದುಕೊಳ್ಳ ಬಹುದು.
ಅದೇ ರೀತಿ ಯಾವನೇ ವ್ಯಕ್ತಿ ಪಡೆಯಬಹುದಾದ ಗರಿಷ್ಟ ಕ್ರೆಡಿಟ್ ಸ್ಕೋರ್ 850. ಹೆಚ್ಚಿನ ಗ್ರಾಹಕರು, ಕ್ರೆಡಿಟ್ ಸ್ಕೋರ್ ಕಡೆಗೆ ಗಮನವನ್ನೇ ನೀಡುವುದಿಲ್ಲ. ಕ್ರೆಡಿಟ್ ಸ್ಕೋರ್ ನಿರ್ಲಕ್ಷ್ಯದಿಂದ ಎದುರಾಗುವ ಸಮಸ್ಯೆಗಳನ್ನು ಇಲ್ಲಿ ನೀಡಲಾಗಿದೆ. ಸಾಲಕ್ಕೆ ಹೆಚ್ಚಿನ ಬಡ್ಡಿ ದರ ಕ್ರೆಡಿಟ್ ಸ್ಕೋರ್ 700 ಅಥವಾ 725ಕ್ಕಿಂತ ಕಡಿಮೆ ಇದ್ದರೆ, ಸಾಲದ ಅರ್ಜಿ ಅಪೂ›ವ್ ಆಗುವುದು ಕಷ್ಟ. ಒಂದು ವೇಳೆ ಬ್ಯಾಂಕ್ ನವರು ಅರ್ಜಿಯನ್ನು ಅಪೂ›ವ್ ಮಾಡಿದರೂ, ಆ ಸಾಲಕ್ಕೆ ಹೆಚ್ಚಿನ ಬಡ್ಡಿ ವಿಧಿಸುವ ಸಾಧ್ಯತೆಯಿರುತ್ತದೆ.
* ಕ್ರೆಡಿಟ್ ಕಾರ್ಡ್ ಸಿಗುವುದು ಕಷ್ಟ ಕ್ರೆಡಿಟ್ ಕಾರ್ಡುಗಳನ್ನು ನೀಡುವಾಗಲೂ, ಕ್ರೆಡಿಟ್ ಸ್ಕೋರು ಸಹಾಯಕ್ಕೆ ಬರುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದವರ ಕ್ರೆಡಿಟ್ ಕಾರ್ಡ್ ಅರ್ಜಿ, ತಿರಸ್ಕೃತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಂದಹಾಗೆ, ಕ್ರೆಡಿಟ್ ಕಾರ್ಡುಗಳಿಂದ, ತಕ್ಷಣದ ಸಾಲವನ್ನು ಮಾತ್ರವಲ್ಲ; ವಸ್ತುಗಳನ್ನು ಖರೀದಿಸುವಾಗ ರಿವಾರ್ಡ್ ಪಾಯಿಂಟುಗಳ ಆಧಾರದಲ್ಲಿ ಡಿಸ್ಕೌಂಟನ್ನೂ, ಕ್ಯಾಷ್ ಬ್ಯಾಕ್, ಉಚಿತ ಉಡುಗೊರೆ, ಕೂಪನ್‌ಗಳನ್ನೂ ಪಡೆದುಕೊಳ್ಳಬಹುದು.
* ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ ಬಡ್ಡಿ ದರವನ್ನು ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ನಿಗದಿ ಪಡಿಸುವಂತೆಯೇ, ಬ್ಯಾಂಕುಗಳು ತನ್ನ ಪ್ರೊಸೆಸಿಂಗ್ ಶುಲ್ಕವನ್ನು, ಕ್ರೆಡಿಟ್ ಸ್ಕೋರಿನ ಆಧಾರದಲ್ಲಿ ಕಡಿಮೆ ಮಾಡ ಬಹುದು ಅಥವಾ ಮಾμ ಮಾಡ ಬಹುದು. ಸಾಲದ ಮೊತ್ತ ಹೆಚ್ಚಿದ್ದಲ್ಲಿ ಪ್ರೊಸೆಸಿಂಗ್ ಶುಲ್ಕವೂ ಹೆಚ್ಚಿರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಕಾಪಾಡಿ ಕೊಂಡರೆ, ಗಣನೀಯ ಮೊತ್ತವನ್ನು ಉಳಿಸಬಹುದು.
* ಉದ್ಯೋಗ ಸ್ಥಳದಲ್ಲಿ ಕೆಟ್ಟ ಹೆಸರು ಕಾರ್ಪೊರೆಟ್ ಕ್ಷೇತ್ರದಲ್ಲಿ, ಕೆಲ ಕಂಪನಿ ಗಳು ಉದ್ಯೋಗಿಗಳ ಕ್ರೆಡಿಟ್ ಸ್ಕೋರ್ ಪರಿಶೀಲಿಸುವ ಪರಿಪಾಠ ಇಟ್ಟುಕೊಂಡಿವೆ. ಕಡಿಮೆ ಸ್ಕೋರು ಹೊಂದಿದ್ದರೆ, ಆ ವ್ಯಕ್ತಿ ಆರ್ಥಿಕ ಶಿಸ್ತು ಹೊಂದಿಲ್ಲ ಎಂದು ಅರ್ಥೈಸ ಲಾಗುತ್ತದೆ. ಇದರಿಂದ ಮೇಲಧಿಕಾರಿಗಳು, ಆ ವ್ಯಕ್ತಿಯ ಕಾರ್ಯನಿಷ್ಠೆ, ವಿಶ್ವಾಸಾರ್ಹತೆ ಯನ್ನೇ ಅನುಮಾನದ ದೃಷ್ಟಿಯಿಂದ ನೋಡಬಹುದು. ಹೀಗಾಗಿ, ಕ್ರೆಡಿಟ್ ಸ್ಕೋರನ್ನು ಕಾಪಾಡಿಕೊಳ್ಳುವುದರಿಂದ, ಹಲವು ಬಗೆಯ ಪ್ರಯೋಜನಗಳು ಉಂಟು.