Advertisement

ಒತ್ತಡದಿಂದ ಹೊರಬರುವುದಕ್ಕೆ ಸುಲಭ ಮಾರ್ಗ ಯಾವುದು..? ಮ್ಯಾನೇಜ್ ಮೆಂಟ್ ಅಂದರೆ ಏನು…

06:14 PM Jul 15, 2021 | Team Udayavani |
ಸಮಯಕೋಸ್ಕರ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ
Now pay only for what you want!
This is Premium Content
Click to unlock
Pay with

ಪ್ರತಿಯೊಬ್ಬನು ಜೀವನದಲ್ಲಿ ಜಯ ಸಾಧಿಸಬೇಕೆಂದರೇ ಟೈಮ್ ಮ್ಯಾನೇಜ್ ಮೆಂಟ್ ಅನುಸರಿಸಬೇಕು. ಸಮಯವೆಂಬುವುದು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಕಳೆದು ಹೋಗುತ್ತದೆ. ಮ್ಯಾನೇಜ್ ಮೆಂಟ್ ಅಂದರೆ ಏನು..? ನಿರ್ಧಾರ ಕೈಗೊಳ್ಳಲು, ನಾಯಕತ್ವ ಬೆಳವಣಿಗೆಗೆ, ಸಮಯ ಹೊಂದಿಸಲು, ಸಮಯ ಪಾಲನೆ ತುಂಬಾ ಮುಖ್ಯ. ಇದು ಎಲ್ಲರೂ ಒಪ್ಪಲೇಬೇಕಾದ ಸತ್ಯ. ಪ್ರತಿ ವ್ಯಕ್ತಿಯನ್ನು ನಿಯಂತ್ರಿಸುವ ಶಕ್ತಿ ಸಮಯಕ್ಕೆ ಮಾತ್ರ ಇದೆ.

Advertisement

ಸಮಯ ಪಾಲನೆ ಅತ್ಯಂತ ಸವಾಲಿನ ಕೆಲಸ. ಸವಾಲನ್ನು ಸ್ವೀಕರಿಸಿ ಯಾರು ಸಮಯ ಪಾಲನೆ ಮಾಡುತ್ತಾರೋ, ಅವರು ಶಿಸ್ತುಬದ್ಧ ಜೀವನ ನಡೆಸುತ್ತಾರೆ. ಸಮಯ ಹೊಂದಾಣಿಕೆ ಮಾಡಿಕೊಳ್ಳುವ ಕಲೆಯಿಂದ ಹೆಚ್ಚಿನ ಸಾಧನೆ ಮಾಡಬಹುದು.  ಸಮಯ ಎಂಬುದು ನಿಂತ ನೀರಲ್ಲ. ಸಮಯಕೋಸ್ಕರ ನಾವೂ ಕಾಯಬೇಕೆ ಹೊರತು ಸಮಯ ನಮಗಾಗಿ ಕಾಯುವುದಿಲ್ಲ. `ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು~ ಎಂಬ ನಾಣ್ಣುಡಿಯಂತೆ ಒಂದು ಬಾರಿ ಹೋದ ಸಮಯ ಮತ್ತೆಂದಿಗೂ ನಮ್ಮ ಜೀವನದಲ್ಲಿ ಬಾರದು.

ಸಮಯವು ಹಣಕ್ಕಿಂತ ಬೆಲೆಯುಳ್ಳದ್ದು. ಹಣ ಹೋದರೆ ಸಂಪಾದಿಸಬಹುದು. ಆದರೇ ಸಮಯದ ವಿಷಯ ಹಾಗಲ್ಲ. ಕಳೆದು ಹೋದ ಸಮಯ ಮತ್ತೆ ಮರಳಿ ಬರಲಾರದು.

ಸರಿಯಾಗಿ ಸಮಯ ಪಾಲನೆ ಮಾಡಿದರೆ ಸ್ಟ್ರೆಸ್(ಒತ್ತಡ) ಇರುವುದಿಲ್ಲ. ಸಮಯದ ಮೇಲೆ ನಮಗೆ ನಿಯಂತ್ರಣ ಇಲ್ಲದಿದ್ದರೇ ಒತ್ತಡ ಸಹಜವಾಗಿ ಉಂಟಾಗುತ್ತದೆ. ಅದು ಮನೆಯಲ್ಲಿ ಆಗಬಹುದು ಅಥವಾ ಹೊರಗಿನ ಕೆಲಸದಲ್ಲಿಯೂ ಆಗಬಹುದು.ನಿತ್ಯ ಜೀವನದಲ್ಲಿ ನಾವು ಒತ್ತಡಕ್ಕೆ ಕಾರಣಗಳನ್ನು ಹುಡುಕಿದರೆ ಅದು ‘ಸಮಯ’ದ ಕಾರಣದಿಂದಲೇ ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ಬದುಕಿಗೆ ಪ್ರತಿಕೂಲ ವಾತಾವರಣ ಒದಗಿಸಿಕೊಡುವುದೇ ಕಾಲ. ಒತ್ತಡದ ಜೀವನದಿಂದ ಹೊರಬರಲು ಸಮಯ ಪಾಲಿಸುವುದು ಬಹಳ ಮುಖ್ಯ. ಹಾಗಾದರೇ, ಒತ್ತಡದಿಂದ ಹೊರಬರುವುದು ಹೇಗೆ..?

ಒತ್ತಡದಿಂದ ಹೊರಬರುವುದಕ್ಕೆ ಸುಲಭ ಮಾರ್ಗ ಏನು..?

Advertisement

ಒತ್ತಡವನ್ನು ಎದುರಿಸಲು ನೀವು ಮಾಡಬಹುದಾದ ಪ್ರಮುಖ ಕೆಲಸವೆಂದರೆ ವ್ಯಾಯಾಮ ಮಾಡುವುದು, ದೀರ್ಘವಾದ ಉಸಿರಾಟ ಮಾಡುವುದು. ಉಚ್ವಾಸ, ನಿಚ್ವಾಸ ಮಾಡುವುದು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಮಯ ಕಳೆಯುವುದು, ಶಾಂತವಾಗಿ ವರ್ತಿಸುವುದು, ಹಿತಮಿತವಾಗಿ ಮಾತಾಡುವುದು, ನಗುವುದರಿಂದ ನಾವು ಆರಾಮವಾಗಿ ಒತ್ತಡದಿಂದ ಹೊರಬರಲು ಸಾಧ್ಯ.

ಒತ್ತಡದಿಂದ ಹೊರಬಂದ ಮೇಲೆ ನಿಮಗೆ ಸಮಯ ಪಾಲನೆ ಮಾಡಲು ದೊಡ್ಡ ಹೊರೆ ಏನಿಲ್ಲ. ನಿರರ್ಗಳವಾಗಿ ನೀವು ಸಮಯ ಪಾಲನೆಯಿಂದ ಮಾಡಬಹುದು. ಈ ಸಮಯ ಪಾಲನೆಯಿಂದ ನಿಮ್ಮ ವೈಯಕ್ತಿಕ ಬದುಕಿಗೆ ಏನು ಲಾಭ ಸಿಗಬಹುದು..?

ಸಮಯ ಪಾಲನೆಯಿಂದಾಗುವ ಉಪಯೋಗಗಳೇನು..?

*ಸಮಯ ಪಾಲನೆ ಮಾಡಿದರೆ ನಿಮ್ಮ ನಿತ್ಯ ಕೆಲಸದ ಜೊತೆಗೆ ಮತ್ತಷ್ಟು ಕೆಲಸಗಳನ್ನು ನಿರಾಯಾಸವಾಗಿ ಮಾಡಬಹುದು.
*ಸಮತೋಲನ ಜೀವನ ನಡಡೆಸಲು ಸಾಧ್ಯ.
*ನಿಮ್ಮ ಜೀವನದಲ್ಲಿ ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತದೆ.
*ನೀವು ಮತ್ತಷ್ಟು ಶಕ್ತಿವಂತರಾಗುತ್ತೀರಿ.
*ಶಿಸ್ತು ಕ್ರಮ ಪಾಲನೆ ನಿಮ್ಮ ಜೀವನದಲ್ಲಿ ಮತ್ತಷ್ಟು ಅಧಿಕವಾಗುತ್ತದೆ.
*ನೀವು ನಿಮ್ಮ ಕೆಲಸಗಳ ಮೇಲೆ ಮತ್ತಷ್ಟು ಕೇಂದ್ರೀಕರಿಸುತ್ತೀರಿ.
*ನಿಮ್ಮ ಜೀವನದಲ್ಲಿ ಅತ್ಯಂತ ಪ್ರಧಾನವಾದ ಆನಂದಭೂತಿಯನ್ನು ನೀವು ಅನುಭವಿಸುತ್ತೀರಿ.
*ಸಮಯ ಪಾಲನೆಯಿಂದ ನಿಮ್ಮಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚುತ್ತದೆ.

ಇಷ್ಟೆಲ್ಲಾ ಲಾಭಗಳ ಜೊತೆಗೆ ಜೀವನದಲ್ಲಿ ನೆಮ್ಮದಿಯ ನಾಳೆಗಳನ್ನು ಕಾಣಲು ಅನುಕೂಲವಾಗುತ್ತದೆ ಎನ್ನುವುದರಲ್ಲಿ ಸಂಶಯ ಇಲ್ಲ.

–ಶ್ರೀರಾಜ್ ವಕ್ವಾಡಿ

Advertisement

Udayavani is now on Telegram. Click here to join our channel and stay updated with the latest news.