Advertisement

ಪಕ್ಷದ ಅಭ್ಯರ್ಥಿಗಳಿಗೆ ಇರಲಿ ಒಮ್ಮತದ ಬಲ: ಬಸನಗೌಡ

02:28 PM Dec 06, 2021 | Team Udayavani |

ಸಿಂಧನೂರು: ಸ್ಥಳೀಯ ಸಂಸ್ಥೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿಸುವ ಅಭ್ಯರ್ಥಿಗೆ ಪ್ರತಿಯೊಬ್ಬರೂ ಒಮ್ಮತದಿಂದ ಬೆಂಬಲಿಸುವ ಕೆಲಸ ಮಾಡಬೇಕು ಎಂದು ಶಾಸಕ ಆರ್‌.ಬಸನಗೌಡ ತುರುವಿಹಾಳ ಹೇಳಿದರು.

Advertisement

ತಾಲೂಕಿನ ತುರುವಿಹಾಳದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪಪಂ ಚುನಾವಣೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಒಂದು ಪುರಸಭೆ, ಎರಡು ಪಟ್ಟಣ ಪಂಚಾಯತ್‌ ಗಳಿಗೆ ಇದೀಗ ಚುನಾವಣೆ ನಡೆಯುತ್ತಿದೆ. ಎಲ್ಲ ಕಡೆಯೂ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಶ್ರಮಿಸಲಾಗುವುದು. ಯಾರೇ ಅಭ್ಯರ್ಥಿಯಾದರೂ ಅಸಮಾಧಾನ ಬದಿಗೊತ್ತಿ, ಪಕ್ಷದ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು. ಕೆಲವು ಜನರಿಗೆ ಈ ಬಾರಿ ಅವಕಾಶ ಸಿಕ್ಕರೆ, ಮುಂದಿನ ದಿನಗಳಲ್ಲಿ ಬಾಕಿ ಇರುವ ಎಲ್ಲರಿಗೂ ಕಾಂಗ್ರೆಸ್‌ ಪಕ್ಷದಲ್ಲಿ ಅವಕಾಶ ದೊರೆಯುತ್ತದೆ. ಆ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟು, ಪ್ರದರ್ಶಿಸಿ ಕಾಂಗ್ರೆಸ್‌ ಬಹುಮತ ಗಳಿಸಲು ದುಡಿಯಬೇಕು ಎಂದರು.

ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಕಾಂಗ್ರೆಸ್‌ ಮುಖಂಡರಾದ ಮಲ್ಲನಗೌಡ ದೇವರಮನಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಂ.ಡಿ.ಫಾರೂಕ್‌ಸಾಬ್‌, ಮಂಟೆಪ್ಪ ಎಲೆಕೂಡ್ಲಿಗಿ, ಅಮರೇಶಪ್ಪ ಕಲ್ಲೂರು, ಗೂಳಪ್ಪ ಕುಂಟೋಜಿ, ಉಮರ್‌ಸಾಬ್‌, ಶರಣಬಸವ ಸಾಹುಕಾರ್‌, ಶೇಖ್‌ಮಹೆಬೂಬ್‌, ಶ್ಯಾಮಿದ್‌ಸಾಬ್‌, ಅಮರೇಶ ಕಾಸರೆಡ್ಡಿ, ಬಾಪುಗೌಡ ದೇವರಮನಿ, ಅಬುತರಾಬ್‌, ವಿಜಯಕುಮಾರ, ವೀರಭದ್ರಗೌಡ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next