Advertisement
ಒಂದೊಂದು ಮತದಲ್ಲಿ ಒಂದೊಂದು ನಂಬಿಕೆ ಆಚರಣೆ ಎಲ್ಲ ಬೇರಾಗಿ ಹರಿವ ನದಿಯಾದರೂ ಕೊನೆಗೆ ಸೇರುವ ಸಾಗರ ಆ ಭಗವಂತನ ಶರಣಾಗತಿಯೊಂದೆ ಅದಕ್ಕೆ ಬಹುಬಗೆಯ ಪದಗಳಾದರು ಎಲ್ಲವೂ ಸೇರಿಸಿ ಭಕ್ತಿಯೆನ್ನಬಹುದೇನೋ, ಶ್ರೀಮದ್ ಭಗವತ್ ಪುರಾಣದಲ್ಲಿ, ಪ್ರಹ್ಲಾದನು ತನ್ನ ಗುರುಗಳು ತನಗೆ ಕಲಿಸಿದ ಭಕ್ತಿಯ ಒಂಬತ್ತು ರೂಪಗಳನ್ನು ತನ್ನ ತಂದೆ ಹಿರಣ್ಯ ಕಶ್ಯಪುವಿಗೆ ವಿವರಿಸುತ್ತಾನೆ.
Related Articles
Advertisement
ಅಲ್ಲದೆ ಆತ ಸಮದರ್ಷಿಯಾಗಿದ್ದು, ಎಲ್ಲರಿಗೂ ಒಳಿತನ್ನೇ ಮಾಡುವವನಾಗಿರುತ್ತಾನೆ. ಆತನ ಬುದ್ಧಿಯನ್ನು ಕಾಮನೆಗಳು ನಿಯಂತ್ರಿಸುವುದಿಲ್ಲ. ಸಂಯಮಿಯೂ ಮೃದುಸ್ವಭಾವದವನೂ, ಆಗಿರುತ್ತಾನೆ. ಸಂಗ್ರಹಪರಿಗ್ರಹಗಳಿಂದ ದೂರವಿರುತ್ತಾನೆ. ಮಿತವಾದ ಆಹಾರ ಸೇವನೆ ಮಾಡುವವನೂ ಶಾಂತಮನದವನೂ ಸ್ಥಿರವಾದ ಬುದ್ಧಿಯವನೂ ಆಗಿರುತ್ತಾನೆ.
“ಎಂದು ಆದರೆ ಇಂದು ಭಕ್ತಿಯ ಹಾಗಿಲ್ಲ, ಭಕ್ತ ಸಹ ಹಾಗಿಲ್ಲ ಇವತ್ತು ನನಗೆ ಆ ಕೆಲಸ ಕೊಡಿಸು ದೇವರೆ ನಿನಗೆ ನಾನು ಬಂಗಾರ ಮಾಡಿಸುತ್ತೇನೆ ಬೆಳ್ಳಿಯ ಕಿರೀಟ ತೊಡಿಸುತ್ತೇನೆ ಅನ್ನುವ ಮಟ್ಟಕ್ಕೆ ದೇವರಿಗೆ ಆಸೆ ಹುಟ್ಟಿಸಿ ಕೆಲಸ ಮಾಡಿಸಿಕೊಳ್ಳುವ ದೇವರನ್ನೇ ಭ್ರಷ್ಟಾಚಾರಕ್ಕೆಳೆಯುವ ಹುಚ್ಚುತನಕ್ಕಿಳಿದಿದ್ದೇವೆ.
ಇಷ್ಟೆಲ್ಲ ದೇವರಿಗೆ ಕೊಟ್ಟು ಪಡೆಯುವ ವ್ಯಾವಹಾರಿಕ ಭಕ್ತಿಗಿಳಿದಿರೋ ನಾವು ಯಾಕೆ ಯೋಚಿಸುತ್ತಿಲ್ಲ ನಮ್ಮ ಹೆತ್ತಮ್ಮ ಎಂದಾದರು ನಾವೇನೋ ಕೊಡುವ ಆಸೆಯಲ್ಲೋ ಏನನ್ನೋ ಪಡೆಯುವ ಆಸೆಯಲ್ಲೋ ನಮ್ಮನ್ನ ಸಾಕಿ ಸಲಹಿದಳೇ? ನೋವಲ್ಲಿ ಸಾಂತ್ವನ ನೀಡಿದಳೆ? ಇಲ್ಲವೆಂದ ಮೇಲೆ ದೇವರು ಯಾಕೆ ನಮ್ಮ ಕಾಗದದ ನೋಟಿಗೂ ಯಾವುದೋ ಬಣ್ಣದ ಧಾತುವಿನ ಮೋಹಕ್ಕೋ ನಮ್ಮ ಆಸೆ ಪೂರೈಸುತ್ತಾನೆ ಎಂದು ಕೊಳ್ಳುತ್ತೇವೆ?
ಇನ್ನು ಸಮರ್ಪಣೆ, ಸಮರ್ಪಣೆಯ ಅರ್ಥ ನಮಗೆಲ್ಲಿದೆ ನಾವೇ ನಮಗೆ ಒಂದಿಷ್ಟು ಕಲ್ಪನೆಯ ಗೆರೆ ಹಾಕಿ ನಮ್ಮದೇ ಒಂದು ಕಾಲ್ಪನಿಕ ಪ್ರಪಂಚದೊಳಗೆ ಉಳಿದು ಬಿಟ್ಟಿದ್ದೇವೆ, ನಮಗೆ ಈಗ ಭಕ್ತಿ ಅರ್ಥವಾಗಬೇಕಾದರೆ ಬಸವಣ್ಣ ಕನಕದಾಸರಂತಹ ಮಹಾನ್ ದಾಸರ, ಶರಣರ ಪರಿಚಯವಾಗಬೇಕಿದೆ ಓದು ನಮ್ಮ ಹವ್ಯಾಸವಾಗಬೇಕಿದೆ.
-ದೇವಿಪ್ರಸಾದ ಶೆಟ್ಟಿ
ಡಾ| ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ