Advertisement

ವಿಮಾನದ ಆಯುಸ್ಸು ಎಷ್ಟು?

10:09 AM Jan 24, 2020 | mahesh |

ವಿಮಾನದ ಜೀವನಚಕ್ರ ನಿಮಗೆ ಗೊತ್ತಾ? ಬೈಕು, ಸ್ಕೂಟರ್‌ಗಳು ಕೆಟ್ಟರೆ ರಿಪೇರಿ ಮಾಡಿಸುತ್ತೇವೆ. ಇದ್ದದಿದ್ದರೆ ಗ್ಯಾರೇಜಿನವರಿಗೆ ಕೊಟ್ಟು ಒಂದು ಗತಿ ಕಾಣಿಸುತ್ತೇವೆ. ಆದರೆ, ಏನಿಲ್ಲವೆಂದರೂ 80,000 ಕೆ. ಜಿ ತೂಕವಿರುವ ವಿಮಾನವನ್ನು ಆ ರೀತಿ ಮಾಡುವುದು ಸುಲಭವಲ್ಲ.

Advertisement

ಹಕ್ಕಿಯಂತೆ ಆಕಾಶದಲ್ಲಿ ಹಾರುವ ಕನಸನ್ನು ರೈಟ್‌ ಸಹೋದರರು 1903ರಲ್ಲಿ ವಿಮಾನದ ಆವಿಷ್ಕಾರದ ಮೂಲಕ ನನಸು ಮಾಡಿಕೊಂಡರು. ಒಬ್ಬರು ಇಲ್ಲವೇ ಇಬ್ಬರು ಪ್ರಯಾಣಿಸಬಹುದಾಗಿದ್ದ ವಿಮಾನದಿಂದ ಶುರುವಾದ ಈ ಪಯಣ ಇಂದು ನೂರಾರು ಜನರನ್ನು ಏಕ ಕಾಲಕ್ಕೆ ಹೊತ್ತೂಯ್ಯುವ ಸಾಮರ್ಥ್ಯವನ್ನು ಪಡೆದಿವೆ. ವಿಮಾನದ ಜೀವನಚಕ್ರ ನಿಮಗೆ ಗೊತ್ತಾ? ಬೈಕು, ಸ್ಕೂಟರ್‌ಗಳು ಹಳೆಯದಾದ ನಂತರ ಮಾರುತ್ತೇವೆ, ಇಲ್ಲವೇ ರಿಪೇರಿ ಮಾಡಿಸುತ್ತೇವೆ. ಅದೂ ಸಾಧ್ಯವಾಗದಿದ್ದರೆ ಗಾಡಿಯನ್ನು ಗ್ಯಾರೇಜಿನವರಿಗೆ ಕೊಟ್ಟು ಒಂದು ಗತಿ ಕಾಣಿಸುತ್ತೇವೆ. ಆದರೆ, ಏನಿಲ್ಲವೆಂದರೂ 80,000 ಕೆ. ಜಿ ತೂಕವಿರುವ ವಿಮಾನವನ್ನು ಆ ರೀತಿ ಮಾಡಲಾಗುವುದಿಲ್ಲ.

ಚೀವನಚಕ್ರ
ನಾವು ದಿನ ನಿತ್ಯ ಬಳಸುವ ಗೃಹೋಪಯೋಗಿ ವಸ್ತುಗಳ ಮೇಲೆ ಎಕ್ಸ್‌ಪೈರಿ ಡಿನಾಂಕ ಇರುವುದನ್ನು ನೀವು ಗಮನಿಸಿರಬಹುದು. ಆ ದಿನಾಂಕ ಕಳೆದ ನಂತರ ಆ ವಸ್ತು ಬಳಕೆಗೆ ಆರ್ಹವಾಗಿರುವುದಿಲ್ಲ ಎಂಬುದನ್ನು ಅದರ ತಯಾರಕ ಸಂಸ್ಥೆಯೇ ಹೇಳಿರುತ್ತದೆ. ಅದೇ ರೀತಿ ವಿಮಾನವನ್ನು ತಯಾರಿಸಿದ ಸಂಸ್ತೆ ತನ್ನ ವಿಮಾನಕ್ಕೆ ಎಕ್ಸ್‌ಪೈರಿ ದಿನಾಂಕವನ್ನು ನಮೂದಿಸುತ್ತದೆ. ಅಚ್ಚರಿಯ ವಿಷಯವೆಂದರೆ ವಿಮಾನದ ಆಯುಸ್ಸನ್ನು ವರ್ಷಗಳ ಮೂಲಕ ಅಳೆಯಲಾಗುವುದಿಲ್ಲ. ಬದಲಾಗಿ ವಿಮಾನ ಗಗನಕ್ಕೇರುವ(ಟೇಕಾಫ್) ಮತ್ತು ಇಳಿಯುವ(ಲ್ಯಾಂಡಿಂಗ್‌) ಸಂಖ್ಯೆಯ ಮೇಲೆ ಅವಲಂಬಿತವಾಗಿದೆ. ಅಂದರೆ ಒಂದು ವಿಮಾನವನ್ನು ಎಷ್ಟು ಬಾರಿ ಟೇಕಾಫ್ ಮತ್ತು ಲ್ಯಾಂಡಿಂಗ್‌ ಮಾಡಬಹುದು ಎನ್ನುವುದನ್ನು ಸಂಸ್ಥೆಯೇ ನಿಗದಿ ಪಡಿಸಿರುತ್ತದೆ. ಆ ಸಂಖ್ಯೆ ಮುಗಿದ ನಂತರವೂ ವಿಮಾನವನ್ನು ಬಳಸಿದರೆ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಅವುಗಳ ನಿವೃತ್ತಿ ಜೀವನ
ಒಂದು ವಿಮಾನ ಬಳಕೆಗೆ ಅನರ್ಹ ಎಂದು ಪರಿಗಣಿತವಾದಾಗ ಅದು ಗೋಡೌನ್‌ ಸೇರುತ್ತದೆ. ಅದನ್ನು ಇತರೆ ವಿಮಾನಯಾನ ಸಂಸ್ಥೆಗಳು ಅದನ್ನು ಖರೀದಿಸುತ್ತವೆಯೇ ಎಂದು ಒಂದಷ್ಟು ಸಮಯ ಕಾಯುತ್ತವೆ. ಯಾರೂ ಖರೀದಿಗೆ ಮುಂದಾಗದಿದ್ದರೆ ಆ ವಿಮಾನದಲ್ಲಿನ ವಿದ್ಯುನ್ಮಾನ ಉಪಕರಣಗಳನ್ನು ಪ್ರತ್ಯೇಕಿಸಿ, ಅಗತ್ಯಗಳಿಗೆ ತಕ್ಕಂತೆ ಮರುಬಳಕೆ ಮಾಡಲಾಗುತ್ತದೆ. ಒಂದು ವಿಮಾನದ ಬೆಲೆ ಯಾವಾಗ ಅವುಗಳ ಬಿಡಿಭಾಗಗಳಿಗಿಂತ ಕೆಳಕ್ಕೆ ಇಳಿಯುತ್ತದೋ ಆವಾಗ ವಿಮಾನದವನ್ನು ಗುಜರಿಗೆ ಹಾಕಿ ಬಿಡಿಭಾಗಗಳನ್ನು ಪ್ರತ್ಯೇಕಿಸಿ ರೀಸೈಕಲ್‌ ಮಾಡಲಾಗುತ್ತದೆ.

ಕೊನೆಯ ತಂಗುದಾಣ
ಮನುಷ್ಯರು ತಮ್ಮ ನಿವೃತ್ತ ಜೀವನವನ್ನು ಕಳೆಯಲು ವಿಶ್ರಾಂತಿ ಧಾಮಗಳ ಮೊರೆ ಹೋಗುತ್ತಾರೆ. ಅದೇ ರೀತಿ ಹಾರಾಟದಿಂದ ನಿವೃತ್ತಿಯಾದ ವಿಮಾನಗಳಿಗೂ ಒಂದು ತಂಗುಧಾಮವಿದೆ. ಅದನ್ನು “ಏರ್‌ಕ್ರಾಫ್ಟ್ ಬೋನ್‌ ಯಾರ್ಡ್‌’ ಎಂದು ಕರೆಯಲಾಗುತ್ತದೆ. ಇಂಥ ಒಂದು ಬೋನ್‌ ಯಾರ್ಡ್‌ನಲ್ಲಿ ನೂರಾರು, ಅಷ್ಟೇ ಯಾಕೆ ಸಾವಿರಾರು ನಿಷ್ಕ್ರಿಯ ವಿಮಾನಗಳನ್ನು ಸಾಲಾಗಿ ನಿಲ್ಲಿಸಿರುತ್ತಾರೆ. ಜಗತ್ತಿನ ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ವಿಮಾನಗಳನ್ನು ಇಲ್ಲಿ ಕಾಣಬಹುದು. ಬೋನ್‌ಯಾರ್ಡ್‌ಗಳನ್ನು ಎಲ್ಲೆಂದರಲ್ಲಿ ನಿರ್ಮಿಸಲು ಸಾಧ್ಯವಿಲ್ಲ. ಆ ಜಾಗದಲ್ಲಿ ಒಣ ಹವೆ ಇರಬೇಕಾಗುತ್ತದೆ. ಇದರಿಂದ ವಿಮಾನಗಳು ಬೇಗನೆ ತುಕ್ಕು ಹಿಡಿಯುವುದಿಲ್ಲ. ಬಿಡಿಭಾಗಗಳು ಬೇಗನೆ ನಿಷ್ಕ್ರಿಯವಾಗುವುದಿಲ್ಲ.

Advertisement

ಅತಿ ದೊಡ್ಡ ಬೋನ್‌ಯಾರ್ಡ್‌
ಅಮೆರಿಕದ ಅರಿಝೋನಾ ರಾಜ್ಯದಲ್ಲಿ ಟಕ್‌ಸನ್‌ ಎಂಬ ಮರುಭೂಮಿ ಪ್ರದೇಶವಿದೆ. ಅಲ್ಲಿನ ಬೋನ್‌ಯಾರ್ಡ್‌ ಜಗತ್ತಿನ ಅತಿ ದೊಡ್ಡ ಬೋನ್‌ಯಾರ್ಡ್‌ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಒಂದು ರೀತಿಯಲ್ಲಿ ಗುಜರಿ ಇದ್ದ ಹಾಗೆ. ಅಂತಿಂಥ ಗುಜರಿಯಲ್ಲ ಸಾವಿರಾರು ಹೆಕ್ಟೇರುಗಳಷ್ಟು ವಿಸ್ತೀರ್ಣವಿರುವ ಬೃಹತ್‌ ಗುಜರಿ.

ಹವನ

Advertisement

Udayavani is now on Telegram. Click here to join our channel and stay updated with the latest news.

Next