Advertisement
ಏನಿದು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ಇದು ಅಗ್ರ ಒಂಬತ್ತು ಟೆಸ್ಟ್ ಆಡುವ ದೇಶಗಳ ನಡುವೆ ನಡೆಯುವ ಪಂದ್ಯಟ. ಹಾಗಂತ ಏಕದಿನ ವಿಶ್ವಕಪ್ ನಂತೆ ಒಂದೇ ಕಡೆ ನಡೆಯುವ ಪಂದ್ಯಾಟವಲ್ಲ. 2019 ಆಗಸ್ಟ್ 1ರಿಂದ 2021ರ ಮಾರ್ಚ್ 31ರ ವರೆಗೆ ನಡೆಯುವ ದ್ವಿಪಕ್ಷೀಯ ಸರಣಿಗಳಲ್ಲಿ ಆಯ್ದ ಸರಣಿಗಳನ್ನು ಈ ಚಾಂಪಿಯನ್ ಶಿಪ್ ಗೆ ಪರಿಗಣಿಸಲಾಗುತ್ತದೆ. 2021ರ ಜೂನ್ ನಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
22 ವರ್ಷಗಳ ಹಿಂದೆ ಪಾಕ್ ನ ಆರಿಫ್ ಅಲಿ ಅಬ್ಬಾಸ್, ವಿಂಡೀಸ್ ನ ಕ್ಲೈವ್ ಲಾಯ್ಡ್, ದ. ಆಫ್ರಿಕಾದ ಅಲಿ ಬಾಕರ್ ಮೊದಲ ಬಾರಿಗೆ ʼಟೆಸ್ಟ್ ವಿಶ್ವ ಕಪ್ʼ ನ ಪರಿಕಲ್ಪನೆಯನ್ನು ಐಸಿಸಿ ಮುಂದಿಟ್ಟಿದ್ದರು. 2013ರ ನಂತರ ಏಕದಿನ ಚಾಂಪಿಯನ್ಸ್ ಟ್ರೋಫಿ ಬದಲು ಟೆಸ್ಟ್ ಚಾಂಪಿಯನ್ ಶಿಪ್ ನಡೆಸುವ ಯೋಜನೆ ಮಾಡಲಾಗಿತ್ತು. ಹಲವು ಅಡೆತಡೆಗಳ ನಂತರ ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಆರಂಭವಾಗುತ್ತಿದೆ. ಯಾವುದೆಲ್ಲಾ ತಂಡಗಳು
ಟೆಸ್ಟ್ ರಾಂಕಿಂಗ್ ಪಟ್ಟಿಯಲ್ಲಿ ಮಾರ್ಚ್ 31 2018ರವರೆಗೆ ಅಗ್ರ ಒಂಬತ್ತು ಸ್ಥಾನ ಪಡೆದಿದ್ದ ತಂಡಗಳು ಈ ಟೆಸ್ಟ್ ಚಾಂಪಿಯನ್ ಶಿಪ್ ಆಡಲಿದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ತಂಡಗಳು ಚೊಚ್ಚಲ ಟೆಸ್ಟ್ ಚಾಂಪಿಯನ್ ಶಿಪ್ ಗಾಗಿ ಕಾದಾಡಲಿವೆ. ಟೆಸ್ಟ್ ಮಾನ್ಯತೆ ಪಡೆದಿರುವ ಅಫ್ಘಾನಿಸ್ಥಾನ, ಐರ್ಲೆಂಡ್, ಜಿಂಬಾಬ್ವೆ ತಂಡಗಳಿಗೆ ಈ ಅವಕಾಶವಿಲ್ಲ.
Related Articles
ಈ ಎರಡು ಅವಧಿಯಲ್ಲಿ ಪ್ರತೀ ತಂಡಗಳು ಮೂರು ಆತಿಥೇಯ ಮತ್ತು ಮೂರು ವಿದೇಶಿ ಸರಣಿ ಸೇರಿದಂತೆ ಒಟ್ಟು ಆರು ಸರಣಿ ಆಡಲಿದೆ. ಸರಣಿಯಲ್ಲಿ ಕನಿಷ್ಠ ಎರಡು ಟೆಸ್ಟ್ ಮತ್ತು ಗರಿಷ್ಠ ಐದು ಪಂದ್ಯಗಳಿರುತ್ತದೆ. ಇದರಲ್ಲಿ ಅತೀ ಹೆಚ್ಚು ಪಂದ್ಯವಾಡಲು ಅವಕಾಶವಿರುವುದು ಇಂಗ್ಲೆಂಡ್ ಗೆ. ಇಂಗ್ಲೆಂಡ್ 22 ಪಂದ್ಯವಾಡಿದರೆ, ಆಸ್ಟ್ರೇಲಿಯಾ 19, ಭಾರತ 18, ದ. ಆಫ್ರಿಕಾ 16, ವೆಸ್ಟ್ ಇಂಡೀಸ್ 15, ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ತಲಾ 14, ಪಾಕಿಸ್ಥಾನ ಮತ್ತು ಶ್ರೀಲಂಕಾ ತಲಾ 13 ಪಂದ್ಯವಾಡಲಿದೆ.
Advertisement
ಅಂಕ ಹೇಗೆ?ಪ್ರತೀ ಟೆಸ್ಟ್ ಸರಣಿಗೆ 120 ಅಂಕವಿರುತ್ತದೆ. ಅದು ಎರಡು ಪಂದ್ಯವಾಗಲಿ ಅಥವಾ ಐದು ಪಂದ್ಯದ ಸರಣಿಯಾಗಲಿ. 120 ಅಂಕದಿಂದಲೇ ಹಂಚಲಾಗುತ್ತದೆ.
ಈ ಎರಡು ವರ್ಷ ಅವಧಿಯಲ್ಲಿ ಭಾರತ ಆಡುವ ಟೆಸ್ಟ್ ಸರಣಿಯಲ್ಲಿ ಕೆಲವನ್ನು ಮಾತ್ರ ಈ ಚಾಂಪಿಯನ್ ಶಿಪ್ ಗೆ ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್, ಬಾಂಗ್ಲಾ, ನ್ಯೂಜಿಲ್ಯಾಂಡ್ ವಿರುದ್ದ ಭಾರತ ಎರಡು ಪಂದ್ಯಗಳ ಸರಣಿ ಆಡಿದರೆ, ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಸರಣಿ ಆಡಲಿದೆ. 2020ರಲ ಕೊನೆಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ನಾಲ್ಕು ಪಂದ್ಯಗಳ ಸರಣಿ ಆಡಿದರೆ, 2021ರಲ್ಲಿ ಇಂಗ್ಲೆಂಡ್ ವಿರುದ್ದ ಐದು ಪಂದ್ಯಗಳ ಸರಣಿಯನ್ನು ಆಡಲಿದೆ.