Advertisement

ಭಾರತ -ಪಾಕ್ ಗಡಿಯಲ್ಲಿ ಶಾಂತಿ ನೆಲೆಸಲು ಯಾವ ಮಾರ್ಗ ಉತ್ತಮ?

05:23 PM May 09, 2020 | keerthan |

ಮಣಿಪಾಲ: ಭಾರತ- ಪಾಕಿಸ್ಥಾನ ಗಡಿಯಲ್ಲಿನ ಪ್ರಕ್ಷುಬ್ಧತೆಗೆ ರಾಜತಾಂತ್ರಿಕ ಮಾತುಕತೆ ಅಥವಾ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಇವುಗಳಲ್ಲಿ ಯಾವ ಮಾರ್ಗ ಉತ್ತಮ ಎಂದು ನಿಮ್ಮ ಅಭಿಪ್ರಾಯ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿವೆ.

Advertisement

ಮಂಜು ಮಂಜುನಾಥ್: ಇಷ್ಟು ವರ್ಷಗಳ ಕಾಲ ರಾಜ ತಾಂತ್ರಿಕವಾಗಿ ಮಾಡಿದ್ದು ಸಾಕು ಇನ್ನ ಮುಂದೆ ಕಠಿಣ ಕ್ರಮ ಕೈಗೊಳ್ಳಬೇಕು. ಅಷ್ಟೇ

ಭದ್ರವಾತಿ ಸತೀಶ್: ಶಾಶ್ವತವಾಗಿ ಪಾಕಿಸ್ತಾನವನ್ನು ನಾಶ ಮಾಡಬೇಕು ಅಗಲೆ ನಿಜವಾದ ಶಾಂತಿ ಸ್ಥಾಪನೆ ಸಾಧ್ಯ

ಮಂಜುನಾಥ್ ಕೌಂಡಿನ್ಯ: ಕಾಶ್ಮೀರ ಮಾತ್ರ ಅಲ್ಲಾ ಪಾಕಿಸ್ತಾನ ಕೂಡ ನಮ್ದೇ ಬದುಕಿನಲ್ಲಿ ಉತ್ರ ಕೊಡಿ ಸ್ವಾಮಿ

ಗೋವಿಂದಪ್ಪ: ರಾಜಕೀಯ ಲಾಭಕ್ಕಾಗಿ ಈ ಸಮಸ್ಯಯನ್ನು ಜೀವಂತವಾಗಿ ಇಟ್ಟು ಕೊಂಡಿರುವುದು ಸರಿಯಲ್ಲ. ಇದರಿಂದ ಎರಡೂ ಕಡೆ ಸಾಕಷ್ಟು ಜೀವ ಹಾನಿ ಆರ್ಥಿಕ ನಷ್ಟ ಆಗುತ್ತಿದೆ.

Advertisement

ಸದಾಶಿವ್ ಸದಾಶಿವ್:  ಮಾತುಕತೆ ಮುಗಿದ ಅಧ್ಯಾಯ. ಬಲಪ್ರಯೋಗ ಒಂದೇ ದಾರಿ. ನಮ್ಮ ದೇಶದ ಆದಾಯದ ಅದೆಷ್ಟೋ ಪಾಲು ಕೇವಲ ಆ ಪಾಪಿ ರಾಷ್ಟ್ರದ ಬೆಂಬಲದಿಂದ ನಡೆಯುತ್ತಿರುವ ಕಪಟ ಯುದ್ಧಕ್ಕೆ ವ್ಯಯವಾಗುವಾಗ ಇನ್ನೂ ಅದೇ ಮುಂದುವರಿದರೆ ಎಷ್ಟು ಕಾಲ ಸಹಿಸಬೇಕು. ಎಕನಾಮಿ ಬಗ್ಗೆ ಮಾತನಾಡುವ ಬೇರೇನು ಮಾಡಲು ಕೆಲಸವಿಲ್ಲದ ಬುದ್ಧಿ ಜೀವಿಗಳಿಗೆ ಅರ್ಥ ಆಗಲು ಅಸಾಧ್ಯ. ಒಂದು ನಡೆಯಿಂದ ಮತ್ತೆ ತಿರುಗಿ ನೋಡಬಾರದು.

ಗಿರೀಶ್ ಗಿರೀಶ್:  ನಾಗರೀಕ ಯುದ್ಧ ಬೇಡ ಅಲ್ಲಿರುವ ಪಾಕಿಸ್ತಾನದ ಸೇನೆ ಮೇಲೆ ಉಗ್ರರ ಮೇಲೆ ಸದಾ ಎಚ್ಚರಿಕೆ ವಹಿಸಬೇಕು

ಮೋಹನ್ ಬಾಳಿಗ: ನುಗ್ಗಿ ಪುಡಿಗಟ್ಟುವ ಮಾರ್ಗ ಉತ್ತಮ , ಗುಟ್ಟಾಗಿ ಹೋಗಿ ಹೆಡೆ ಮುರಿಕಟ್ಟಿ ,ಎಲ್ಲಾ ದುಷ್ಟರನ್ನು ನೇರವಾಗಿ ಪಾತಾಳಕ್ಕೆ ಅಟ್ಟಬೇಕು .

ಸಣ್ಣಮಾರಪ್ಪ. ಚಂಗಾವರ: ಒಮ್ಮೆ ಮನಸ್ಥಾಪ ಬಂದರೆ ಅದು ವಿರೋಧಿಯಾಗಿಯೇ ಇರುತ್ತದೆ. ಬಾಹ್ಯವಾಗಿ ಸ್ನೇಹಿತನಂತೆ ವರ್ತಿಸಿದರು ಆಂತರಿಕವಾಗಿ ದ್ವೇಷ ಇದ್ದೆ ಇರುತ್ತದೆ. ಇದರಿಂದ ಅಂತರ ಕಾಪಾಡಿಕೊಳ್ಳುವುದೇ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next