Advertisement
ಉದ್ದದ ಜತೆಗೆ ಜಿರಾಫೆಯ ತಲೆಯ ಮೇಲಿನ ಕೊಂಬಿನಂತಹ ರಚನೆ ಈ ಪ್ರಾಣಿಯನ್ನು ಇನ್ನೂ ಆಕರ್ಷಕವಾಗಿಸುತ್ತದೆ. ಆದರೆ ಈ ಎರಡು ಅಂಶಗಳೇ ಅವುಗಳ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ ಎನ್ನುವುದು ಗೊತ್ತೆ? ಈ ಬಗ್ಗೆ ನಡೆದ ಸಂಶೋಧನೆಯೊಂದು ಈ ವಿಷಯಗಳ ಬಗ್ಗೆ ಬೆಳಕು ಚೆಲ್ಲಿದೆ. ಅದು ಹೇಗೆ ಎನ್ನುವುದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಸಿಸ್ಕ ಪಿ.ಜೆ. ಶೀಜನ್ ಎನ್ನುವ ರಾಕ್‌ವುಡ್ ಕನ್ಸರ್ವೇಶನ್‌ನ ವಿಜ್ಞಾನಿ ಜಿರಾಫೆ ಸಾವಿನ ಅಧ್ಯಯನಕ್ಕೆ ನೇತೃತ್ವ ನೀಡಿದ್ದರು. ಎತ್ತರವಾಗಿರುವುದು ಜಿರಾಫೆಗಳಿಗೆ ಮಿಂಚು ಹೊಡೆಯಲಿರುವ ಮುಖ್ಯ ಕಾರಣ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೆ ಗೊತ್ತಿರುವುವಂತಹದ್ದೇ. ಆದರೆ ಇದುವರೆಗೆ ಈ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆದಿರಲಿಲ್ಲ. ಎತ್ತರ ಮಾತ್ರವಲ್ಲ ಜಿರಾಫೆಗೆ ಮಿಂಚು ಹೊಡೆಯಲಿರುವ ಇನ್ನೊಂದು ಮುಖ್ಯ ಕಾರಣದ ಬಗ್ಗೆಯೂ ಸಂಶೋಧನೆ ಬೆಟ್ಟು ಮಾಡಿ ತೋರಿಸುತ್ತದೆ.
Related Articles
ಜಿರಾಫೆಯ ತಲೆಯ ಮೇಲಿರುವ ಸಣ್ಣ ಕೊಂಬಿನಂತಹ ರಚನೆ ಮಿಂಚನ್ನು ಸೆಳೆದುಕೊಳ್ಳುತ್ತದೆ. ಶೀಜನ್‌ನ ಅಧ್ಯಯನದ ಪ್ರಕಾರ, ರಾಕ್‌ವುಡ್‌ನ 5 ವರ್ಷದ ಜಿರಾಫೆ ತಲೆ ಮೇಲೆ ನೇರವಾಗಿ ಮಿಂಚು ಹರಿದು ಅದು ಸಾವನ್ನಪ್ಪಿತ್ತು. ಆ ಮೃತದೇಹದ ಸುಮಾರು ಐದು ಅಡಿ ಅಂತರದಲ್ಲಿ ನಾಲ್ಕರ ಹರೆಯದ ಇನ್ನೊಂದು ಜಿರಾಫೆಯ ನಿಶ್ಚಲ ದೇಹ ಕಂಡು ಬಂದಿತ್ತು. ನೇರವಾಗಿ ತಲೆಗೆ ಮಿಂಚು ಹೊಡೆದು ಹಿರಿಯ ಜಿರಾಫೆ ಸಾವಿಗೀಡಾಗಿತ್ತು ಎನ್ನುವುದಕ್ಕೆ ಅದರ ತಲೆ ಮೇಲಿದ್ದ ಗಾಯವೇ ಸಾಕ್ಷಿಯಾಗಿತ್ತು. ಪೋಸ್ಟ್ ಮೋರ್ಟ್‌ಂನಲ್ಲೂ ಇದು ಸಾಬೀತಾಗಿತ್ತು. ಪಕ್ಕದಲ್ಲಿದ್ದ ಜಿರಾಫೆಗೆ ಬದಿಯಿಂದ ಶಾಕ್(ಸೈಡ್ ಫ್ಲಾಷ್)ಹೊಡೆದಿದ್ದು ಅದರ ಸಾವಿಗೆ ಕಾರಣವಾಗಿತ್ತು.(ಮಿಂಚು ಹೊಡೆದ ಸಂದರ್ಭದಲ್ಲಿ ಅದರ ಶಕ್ತಿ ಪಕ್ಕಕ್ಕೂ ಪ್ರವಹಿಸುತ್ತದೆ). ತೆರೆದ ಸ್ಥಳದಲ್ಲಿ ಓಡಾಡುವ ಜಿರಾಫೆಗಳ ತಲೆ ಮೇಲಿರುವ ಕೊಂಬುಗಳು ಆ್ಯಂಟೆನಾ ರೀತಿ ಕೆಲಸ ಮಾಡಿ ಮಿಂಚನ್ನು ಆಕರ್ಷಿಸುತ್ತವೆ. ಇದು ಅವುಗಳಿಗೆ ಮಿಂಚು ಹೆಚ್ಚಾಗಿ ಹೊಡೆಯಲು ಕಾರಣ ಎಂದು ವರದಿಯಲ್ಲಿ ಶೀಜನ್ ವಿವರಿಸಿದ್ದಾರೆ.
Advertisement
ಮಿಂಚು ಹೇಗೆಲ್ಲ ಪ್ರಾಣಿಗಳನ್ನು ಕೊಲ್ಲುತ್ತದೆ ಗೊತ್ತೆ?ಮಿಂಚಿನ ಆಘಾತ ಪ್ರಾಣಿಗಳನ್ನು ನಾಲ್ಕು ರೀತಿಯಲ್ಲಿ ಕೊಲ್ಲುತ್ತವೆ. ಮೊದಲನೆಯದಾಗಿ ಮಿಂಚು ನೇರವಾಗಿ ಹೊಡೆದು ಪ್ರಾಣಿಗಳು ಸಾಯುತ್ತವೆ. ಎರಡನೇ ರೀತಿಯಲ್ಲಿ ಪಕ್ಕದ ಪ್ರಾಣಿಗೆ ಮಿಂಚು ಹೊಡೆದು ಸೈಡ್ ಫ್ಲಾಷ್ ಆಗಬಹುದು. ಮೂರನೆಯದಾಗಿ ನೆಲದ ಮೂಲಕ ಪ್ರವಹಿಸಿ ಶಾಕ್ ಹೊಡೆಯಬಹುದು. ಕೊನೆಯದಾಗಿ ಮಿಂಚು ಪ್ರವಹಿಸಿದ ಯಾವುದಾದರೂ ವಸ್ತುವನ್ನು ಸ್ಪರ್ಶಿಸುವುದು ಕೂಡಾ ಮಾರಣಾಂತಿಕವಾಗುತ್ತದೆ. ರಮೇಶ್ ಬಿ., ಕಾಸರಗೋಡು