Advertisement

ಕಾಶ್ಮೀರ, ಕಾಲಪಾನಿಗೆ ನಾವು ನುಗ್ಗಿದ್ರೆ ಏನಾಗುತ್ತೆ?: ಚೀನಾ

07:20 AM Aug 09, 2017 | Team Udayavani |

ಬೀಜಿಂಗ್‌: ಡೋಕ್ಲಂನಿಂದ ಒಂದೇ ಬಾರಿಗೆ ಎರಡೂ ದೇಶಗಳು ಸೇನಾಪಡೆಗಳನ್ನು ವಾಪಸ್‌ ಕರೆಸಿಕೊಳ್ಳಬೇಕು ಎಂಬ ಭಾರತದ ಆಗ್ರಹವನ್ನು ಚೀನಾ ತಿರಸ್ಕರಿಸಿದ್ದು, ಒಂದು ವೇಳೆ ನಾವು ಭಾರತದ ಉತ್ತರಾಖಂಡದ ಕಾಲಪಾನಿ, ಕಾಶ್ಮೀರದಲ್ಲಿ ನಮ್ಮ ಸೇನೆಯನ್ನು ಒಳಗೆ ನುಗ್ಗಿಸಿದರೆ ಏನಾಗುತ್ತೆ? ಎಂದು ಧಮಕಿ ಹಾಕಿದೆ. 

Advertisement

ಚೀನ ಪ್ರವಾಸದಲ್ಲಿರುವ ಭಾರತೀಯ ಪತ್ರಕರ್ತರ ಗುಂಪಿಗೆ ಅದು ಹೀಗೆ ಹೇಳಿದೆ. “ನಮ್ಮ ಗಡಿಯೊಳಗೆ ಒಬ್ಬನೇ ಒಬ್ಬ ಭಾರತದ ಸೈನಿಕ ಇದ್ದರೂ, ಅದು ನಮ್ಮ ಗಡಿ ಸಾರ್ವಭೌಮತೆ ಯನ್ನು ಉಲ್ಲಂ ಸಿದಂತೆ. ಭಾರತವೂ ಹಲವು ಟ್ರೈಜಂಕ್ಷನ್‌ ಹೊಂದಿದ್ದು, ಅದರಲ್ಲಿ ನಮ್ಮ ಸೇನೆ ನುಗ್ಗಿಸಿದರೆ ಏನಾಗುತ್ತೆ?’ ಎಂದು ಚೀನದ ವಿದೇ ಶಾಂಗ ಇಲಾಖೆಯ ಗಡಿ ಮತ್ತು ಸಾಗರ ಗಡಿ ವ್ಯವಹಾರಗಳ ಉಪ ನಿರ್ದೇಶಕ ವಾಂಗ್‌ ವೆನ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ. “ಈ ಸಂದರ್ಭದಲ್ಲಿ ಭಾರತದೊಂದಿಗೆ ಮಾತುಕತೆ ಸಾಧ್ಯವೇ ಇಲ್ಲ. ನಮ್ಮ ಪ್ರಜೆಗಳು, ಸರಕಾರ ಅಸ ಮರ್ಥ ಎಂದು ಭಾವಿಸುತ್ತಿದ್ದಾರೆ. ಭಾರತ ಸೇನೆ ಹಿಂತೆಗೆಯದ ಹೊರತು ನಮ್ಮ ನಡುವೆ ಮಾತು ಕತೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. 

ನೆಹರೂ ಸರಕಾರದಷ್ಟೇ ಮೋದಿ ಸರಕಾರವೂ ಕಪಟಿ: 1962ರಲ್ಲಿ ಭಾರತದ ಜವಾಹರಲಾಲ್‌ ನೆಹರೂ ಅವರ ಸರಕಾರದಷ್ಟೇ ನರೇಂದ್ರ ಮೋದಿ ಸರಕಾರವೂ ಕಪಟಿ ಎಂದು ಚೀನದ ಸರಕಾರಿ ಸ್ವಾಮ್ಯದ ಪತ್ರಿಕೆ “ಗ್ಲೋಬಲ್‌ ಟೈಮ್ಸ್‌’ ಜರೆದಿದೆ. ಭಾರತ ವಿರುದ್ಧ ಟೀಕೆಗಳನ್ನು ಅದು ಮುಂದುವರಿಸಿದ್ದು, ಚೀನದ ಎಚ್ಚರಿಕೆಗಳನ್ನು ಕಡೆಗಣಿಸಿದರೆ, ಯುದ್ಧ ಖಂಡಿತ ಎಂದು ಹೇಳಿದೆ. ಹೊಸ ಸಂಪಾದಕೀಯದಲ್ಲಿ ಅದು ಚೀನಕ್ಕೆ ಯುದ್ಧ ಬೇಡ, ಆದರೆ ಡೋಕ್ಲಂನಲ್ಲಿ ಭಾರತದ ಸೇನೆ ಹೀಗೆ ಇದ್ದರೆ, ಬೇರೆ ದಾರಿ ಹುಡುಕಬೇಕಾದೀತು ಎಂದು ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next