Advertisement
ಪಶ್ಚಿಮ ಘಟ್ಟಗಳ ಸೂಕ್ಷ್ಮ ಪರಿಸರ ಮತ್ತು ಜೀವವೈವಿಧ್ಯ ರಕ್ಷಣೆಗಾಗಿ ವಿಜ್ಞಾನಿ ಡಾ| ಕೆ ಕಸ್ತೂರಿ ರಂಗನ್ ನೀಡಿರುವ ವರದಿ ಅನುಷ್ಠಾನಕ್ಕೆ ಕೇಂದ್ರ ಪರಿಸರ ಸಚಿವಾಲಯ ಕರಡು ಅಧಿ ಸೂಚನೆ ಹೊರಡಿಸುವುದು, ಬಳಿಕ ನನೆಗುದಿಗೆ ಬೀಳುವುದು ಇದ್ದದ್ದೇ. ಆದರೀಗ 5ನೇ ಕರಡು ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ಸರಕಾರ ಒತ್ತು ನೀಡಬೇಕೆನ್ನುವ ಬೇಡಿಕೆ ಮುನ್ನಲೆಗೆ ಬಂದಿದೆ. ಕೊಡಗು, ವಯನಾಡು ದುರಂತದ ಬಳಿಕ ವರದಿ ಜಾರಿ ಆಗಬೇಕೋ ಬೇಡವೋ ಎನ್ನುವ ಚರ್ಚೆ ಬಿರುಸು ಪಡೆದಿದೆ. ವರದಿ ಜಾರಿ ವಿರುದ್ಧದ ಹೋರಾಟದ ಕಿಚ್ಚು ಮಲೆನಾಡು ಭಾಗದಲ್ಲಿ ಹಳ್ಳಿಗಳಿಗೆ ವಿಸ್ತರಿಸುತ್ತಿದೆ.
ಕೇಂದ್ರ ಸರಕಾರ ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆ ಹೊರಬಿದ್ದಾಗಲೆಲ್ಲ ಪಶ್ಚಿಮ ಘಟ್ಟ ತಪ್ಪಲಿನ ಜನತೆ ಬೆಚ್ಚಿ ಬೀಳುತ್ತಾರೆ.ಈ ಬಾರಿ ಐದನೇ ಅಧಿಸೂಚನೆ ಹೊರಬಿದ್ದಾಗ ಜನ ಚಳವಳಿಗೆ ಇಳಿದಿದ್ದಾರೆ. ಬಾಧಿತ ಹಳ್ಳಿಗಳಲ್ಲಿ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಕೇಂದ್ರದ ಬಳಿಗೆ ಸರ್ವ ಪಕ್ಷ ನಿಯೋಗ ತೆರಳಲು ಸಲಹೆ ಕೇಳಿಬಂದಿದೆ. ಸರಕಾರ ಆರಂಭದಿಂದ ಇದುವರೆಗೂ ಅಂತಿಮ ಕರಡು ಅಧಿಸೂಚನೆ ಹೊರಡಿಸುತ್ತಿಲ್ಲ. ಜನವಿರೋಧದ ಬದಲು 545 ದಿನಗಳ ಗಡುವು ನೀಡುವುದು. ಅವಧಿ ಸಮೀಪಿಸುತ್ತಿದ್ದಂತೆ ಹೊಸ ಕರಡು ಅಧಿಸೂಚನೆ ಹೊರಡಿಸುವುದು ಇದನ್ನೆ ಮಾಡುತ್ತಿದೆ. ಇದರಿಂದ ಕರಡು ಅಧಿಸೂಚನೆ ಹೊರಬಿದ್ದಾಗಲೆಲ್ಲ ತಪ್ಪಲಿನ ನಿವಾಸಿಗಳು ಬೆಚ್ಚಿ ಬೀಳುವುದು ತಪ್ಪುತಿಲ್ಲ.
Related Articles
ಕೇರಳ, ಕೊಡಗು ದುರಂತದ ಬಳಿಕ ಜನ ಆತಂಕ್ಕಿಡಾಗಿದ್ದಾರೆ. ಕೇಂದ್ರ ಕೂಡ ಈ ವಿಷ ಯವನ್ನು ಗಂಭಿರವಾಗಿ ತೆಗೆದುಕೊಂಡಿದೆ.
ರಾಜ್ಯ ಸರಕಾರಕ್ಕೂ ಇದರ ಬಿಸಿ ತಟ್ಟಿದ್ದು ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತು ಚರ್ಚಿಸಲಾಗಿದೆ. ರಾಜ್ಯ ಸರಕಾರ ಮತ್ತು ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಪುಟದ ನಿರ್ಣಯ ಆಧರಿಸಿ ಸೆ. 27ರಂದು ಕೇಂದ್ರಕ್ಕೆ ರಾಜ್ಯ ಸರಕಾರ ತನ್ನ ಅಭಿಪ್ರಾಯ ಮಂಡಿಸಲಿದೆ.
Advertisement
ಅಹವಾಲಿಗೆ ಸಮಿತಿ ರಚಿಸಲು ಆಗ್ರಹಗಾಡ್ಗಿಳ್ ಸಮಿತಿ ವರದಿ ಕಠಿನವೆಂದು ಕಸ್ತೂರಿ ರಂಗನ್ ಸಮಿತಿಯನ್ನು ನೇಮಿಸಲಾಯಿತು. ಸಮಿತಿ 2013ರ ಎ. 15ರಂದು ವರದಿ ಸಲ್ಲಿಸಿತು. ಇತರ 10 ಸದಸ್ಯರ ಸಮಿತಿಯ ಜತೆ ಕೆ. ಕಸ್ತೂರಿರಂಗನ್ ಸಿದ್ಧಪಡಿಸಿದ ಪಶ್ಚಿಮ ಘಟ್ಟಗಳ ಈ ಕಸ್ತೂರಿ ರಂಗನ್ ವರದಿಯನ್ನು ಸರಕಾರ ಸ್ವೀಕರಿಸಿತು. 59.949 ಸಾವಿರ ಚ.ಕಿ.ವ್ಯಾಪ್ತಿಯ ಪ್ರದೇಶ (ಶೇ. 36.49) ಇಕೋಸೆನ್ಸಿಟಿವ್ ಏರಿಯಾ (ಇಎಸ್‌ಎ)ಕ್ಕೆ ಒಳಪಟ್ಟು ನಿರ್ಬಂಧಿತವಾಗಿರುತ್ತದೆ. ಹಲವು ನಿರ್ಬಂಧಗಳು ಹೇರಲ್ಪಟ್ಟು ಸಮಸ್ಯೆ ಗಳಾಗುತ್ತವೆ. ವರದಿಯನ್ನು ಸಂಪೂರ್ಣ ತಿರಸ್ಕರಿಸಬೇಕು. ಜನರ ಅಹವಾಲು ಆಲಿಸಲು ಸಮಿತಿ ರಚಿಸಿ, ಕಾಲಾವಕಾಶ ಪಡೆದ ಬಳಿಕ ಮುಂದುವರೆಯಬೇಕು ಎನ್ನುವ ಒತ್ತಾಯ ವ್ಯಕ್ತವಾಗಿದೆ. ದ.ಕ.: ಬಾಧಿತ ಗ್ರಾಮಗಳು
ಸುಳ್ಯದ ಬಳ್ಪ, ಯೇನೆಕಲ್ಲು, ಸುಬ್ರಹ್ಮಣ್ಯ, ಸಂಪಾಜೆ, ತೊಡಿಕಾನ, ನಾಲ್ಕೂರು, ಕೂತುRಂಜ, ಐನಕಿದು, ದೇವಚಳ್ಳ, ಹರಿಹರ ಪಳ್ಳತ್ತಡ್ಕ, ಮಿತ್ತೂರು, ಬಾಳುಗೋಡು, ಮಡಪ್ಪಾಡಿ, ಉಬರಡ್ಕ, ಕಲ್ಮಕಾರು, ಅರಂತೋಡು, ಆಲೆಟ್ಟಿ, ಕಡಬ, ಕೌಕ್ರಾಡಿ, ಗೋಳಿತೊಟ್ಟು, ಶಿರಾಡಿ, ಅಲಂತಾಯ, ಸಿರಿಬಾಗಿಲು, ಕೊಂಬಾರು, ಇಚ್ಲಂಪ್ಪಾಡಿ, ಬಲ್ಯ, ಬಿಳಿನೆಲೆ, ದೋಳ್ಪಾಡಿ, ಬೆಳ್ತಂಗಡಿ ತಾ|ನ ನಾರಾವಿ, ಮಲವಂತಿಗೆ, ಕುತ್ಲೂರು, ಸುಲ್ಕೇರಿ ಮೊಗ್ರು, ಶಿರ್ಲಾಲು, ನಾವರ, ಸವಣಾಲು, ನಾಡ, ಚಾರ್ಮಾಡಿ, ನಾವೂರು, ನೆರಿಯ, ಕಳಂಜ, ಪುದುವೆಟ್ಟು, ಶಿಶಿಲ, ಶಿಬಾಜೆ, ರೆಖ್ಯಾ. ಉಡುಪಿ ಜಿಲ್ಲೆ
ಕುಂದಾಪುರದ ಹೊಸೂರು, ಬೈಂದೂರು, ಕೊಲ್ಲೂರು, ಯಳಚಿತ್, ತಗ್ಗರ್ಸೆ, ಮುದೂರು, ಗೋಳಿಹೊಳೆ, ಜಡ್ಕಲ್, ಇಡೂರು- ಕುಂಜ್ಞಾಡಿ, ಕೆರಾಡಿ, ಹಳ್ಳಿಹೊಳೆ, ಆಲೂರು, ಚಿತ್ತೂರು, ಯೆಡಮೊಗೆ, ಬೆಳ್ಳಾಲ, ವಂಡ್ಸೆ, ಹೊಸಂಗಡಿ, ಮಚ್ಚಟ್ಟು, ಅಮಾಸೆಬೈಲು, ಶೇಡಿಮನೆ, ಮಡಾಮಕ್ಕಿ, ಬೆಳ್ವೆ. ಮೂಡಿನಗದ್ದೆ, ನೂಜಾಡಿ, ಸಂಸೆ, ಶೇಡಿಮನೆ, ತೆಂಕಹೊಲ,
ಕಾರ್ಕಳದ ಬೆಳಿಂಜೆ, ನಾಡಾ³ಲು, ಕುಚ್ಚಾರು, ಚಾರ, ಹೆಬ್ರಿ, ಕಬ್ಬಿನಾಲೆ, ಅಂಡಾರು, ಶಿರ್ಲಾಲು, ಕೆರ್ವಾಶೆ, ದುರ್ಗ, ಮಾಳ, ಈದು, ನೂರಾಳ್‌ಬೆಟ್ಟು, ಕೊಲ್ಲಮೊಗ್ರು ಗ್ರಾಮ ಪಟ್ಟಿಯಿಂದ ಹೊರಕ್ಕೆ !
ಪಶ್ಚಿಮ ಘಟ್ಟ ತಪ್ಪಲು ವ್ಯಾಪ್ತಿಯ ಕೊಡಗು -ದ.ಕ. ಜಿಲ್ಲೆ ಗಡಿಭಾಗದಲ್ಲಿರುವ ಪುಷ್ಪಗಿರಿ ತಪ್ಪಲಿನ ಕೊಲ್ಲಮೊಗ್ರು ಗ್ರಾಮವು ಈ ಹಿಂದೆ ಸೂಕ್ಷ್ಮ ವಲಯ ಪಟ್ಟಿಯಲ್ಲಿ ಸೇರಿತ್ತು. ಆದರೀಗ ಪಟ್ಟಿಯಲ್ಲಿ ಗ್ರಾಮದ ಹೆಸರಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಪಕ್ಕದ ಗ್ರಾಮಗಳು ಪಟ್ಟಿಯಲ್ಲಿ ಸೇರಿವೆ. ಗಾಡ್ಗಿಲ್, ಕಸ್ತೂರಿರಂಗನ್, ಆನೆಕಾರಿಡಾರ್, ಇನ್ನಿತರ ಯೋಜನೆ ಗಳ ವಿರುದ್ಧ ಮೊದಲಿಗೆ ಧ್ವನಿ ಎತ್ತಿ ಚಳವಳಿ ಆರಂಭ ಗೊಂಡಿದ್ದೆ ಇದೇ ಗ್ರಾಮ ಎನ್ನುವುದು ವಿಶೇಷ. ಕಾನೂ ನಿನ ಹೋರಾಟದಿಂದ ಗ್ರಾಮ ಕೈಬಿಡಲಾಗಿದೆ ಎಂಬುದು ನ್ಯಾಯವಾದಿ ಪ್ರದೀಪ್ ಕುಮಾರ್ ಎಲ್ ಅವರ ಹೇಳಿಕೆ. ರಾಜ್ಯದ ಪರಿಸರ ಸೂಕ್ಷ್ಮ ವಲಯಗಳು
* 10 ಜಿಲ್ಲೆಗಳು * 30 ತಾಲೂಕು
* 1,573 ಗ್ರಾಮ
ಬೆಳಗಾವಿ ಜಿಲ್ಲೆ- 62 ಗ್ರಾಮ, ಕನಕಪುರ ತಾ. , ಉತ್ತರ ಕನ್ನಡ -630 ಗ್ರಾಮ, ಅಂಕೋಲಾ, ಭಟ್ಕಳ, ಹೊನ್ನಾವರ, ಜೋಯಿಡ, ಕಾರವಾರ, ಕುಮಟಾ, ಸಿದ್ಧಾಪುರ, ಶಿರಸಿ, ಯಲ್ಲಾಪುರ ತಾ|ಗಳು ,ಶಿವಮೊಗ್ಗ ಜಿಲ್ಲೆ -450 ಗ್ರಾಮ, ಹೊಸನಗರ, ಸಾಗರ, ಶಿಕಾರಿಪುರ, ತೀರ್ಥಹಳ್ಳಿ ತಾ|ಗಳು ,ಉಡುಪಿ ಜಿಲ್ಲೆ-39 ಗ್ರಾಮ, ಕಾರ್ಕಳ, ಕುಂದಾಪುರ ತಾ| ಗಳು. ,ದ.ಕ. ಜಿಲ್ಲೆ -46 ಗ್ರಾಮ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾ| ಗಳು ,ಕೊಡಗು- 55 ಗ್ರಾಮ, ಮಡಿಕೇರಿ, ಸೋಮವಾರ ಪೇಟೆ, ವಿಜಾಪುರ ತಾ|ಗಳು ,ಹಾಸನ-38 ಗ್ರಾಮ, ಆಲೂರು, ಸಕಲೇಶಪುರ ತಾ| ,ಮೈಸೂರು-62 ಗ್ರಾಮ ಹೆಗ್ಗಡೆವನ ಕೋಟೆ ತಾ| , ಚಾಮರಾಜ ನಗರ -22 ಗ್ರಾಮ ಗುಂಡ್ಲುಪೇಟೆ ತಾ| ,ಚಿಕ್ಕಮಗಳೂರು-156 ಗ್ರಾಮ, ಎನ್ ಆರ್ ಪುರ, ಮೂಡಿಗೆರೆ, ಶೃಂಗೇರಿ ತಾ|ಗಳು.